ETV Bharat / entertainment

ಶಿಲ್ಪಾ ಶೆಟ್ಟಿ ತಂಗಿಗೆ ಎಂಡೊಮೆಟ್ರಿಯೊಸಿಸ್; ಚಿಕಿತ್ಸೆ ಪಡೆದ ನಟಿ ಶಮಿತಾ - Shamita Shetty Hospitalized

author img

By ETV Bharat Karnataka Team

Published : May 14, 2024, 12:18 PM IST

Shamita Shetty: ಎಂಡೊಮೆಟ್ರಿಯೊಸಿಸ್ ಹಿನ್ನೆಲೆ ನಟಿ ಶಮಿತಾ ಶೆಟ್ಟಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದಿದ್ದಾರೆ.

Shamita Shetty
ಆಸ್ಪತ್ರೆಗೆ ದಾಖಲಾದ ಶಮಿತಾ ಶೆಟ್ಟಿ (Shamita Shetty Instagram)

ಬಾಲಿವುಡ್​​ ನಟಿ ಶಿಲ್ಪಾ ಶೆಟ್ಟಿ ಸಹೋದರಿ, ನಟಿ ಶಮಿತಾ ಶೆಟ್ಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಂಡೊಮೆಟ್ರಿಯೊಸಿಸ್ ಸಮಸ್ಯೆ ಇರುವುದು ಪತ್ತೆಯಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ವಿಡಿಯೋ ಹಂಚಿಕೊಂಡು, ತಮ್ಮ ಅನಾರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

ಶಮಿತಾ ಶೆಟ್ಟಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಆಸ್ಪತ್ರೆಯಲ್ಲಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋ ಮತ್ತು ಕ್ಯಾಪ್ಷನ್​ನಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಕಾರಣವನ್ನು ವಿವರಿಸಿದ್ದಾರೆ. ಜೊತೆಗೆ ಹೊರಗಿರುವ ಎಲ್ಲಾ ಮಹಿಳೆಯರಿಗೂ ಈ ಬಗ್ಗೆ ಜಾಗೃತರಾಗಿರುವಂತೆ, ಪರೀಕ್ಷೆ ಮಾಡಿಸಿಕೊಳ್ಳಲು ಸಲಹೆ ನೀಡಿದ್ದಾರೆ. ವಿಡಿಯೋದಲ್ಲಿ ಅಕ್ಕ, ನಟಿ ಶಿಲ್ಪಾ ಶೆಟ್ಟಿ ಅವರ ದನಿ ಕೇಳುತ್ತಿದೆ.

ಆಸ್ಪತ್ರೆಯಿಂದ ತಮ್ಮ ವಿಡಿಯೋ ಶೇರ್ ಮಾಡಿಕೊಂಡ ಶಮಿತಾ ಶೆಟ್ಟಿ, ''ಸುಮಾರು ಶೇ. 40ರಷ್ಟು ಮಹಿಳೆಯರು ಎಂಡೊಮೆಟ್ರಿಯೊಸಿಸ್‌ನಿಂದ ಬಳಲುತ್ತಿದ್ದಾರೆ ಎಂಬುದು ನಿಮಗೆ ತಿಳಿದಿದೆಯೇ. ನಮ್ಮಲ್ಲಿ ಹೆಚ್ಚಿನವರಿಗೆ ಈ ಕಾಯಿಲೆ ಬಗ್ಗೆ ತಿಳಿದಿಲ್ಲ. ನನ್ನ ನೋವಿನ ಮೂಲ ಕಾರಣವನ್ನು ಕಂಡುಕೊಳ್ಳುವವರೆಗೂ ಕೆಲಸ ನಿಲ್ಲಿಸದ ನನ್ನ ವೈದ್ಯರಾದ ಡಾ. ನೀತಾ ವಾರ್ತಿ ಮತ್ತು ಡಾ. ಸುನೀತಾ ಬ್ಯಾನರ್ಜಿ ಇಬ್ಬರಿಗೂ ಧನ್ಯವಾದ ಅರ್ಪಿಸಲು ಬಯಸುತ್ತೇನೆ. ಸದ್ಯ ಶಸ್ತ್ರಚಿಕಿತ್ಸೆಯಿಂದ ರೋಗಮುಕ್ತಳಾಗಿದ್ದೇನೆ. ಉತ್ತಮ ಆರೋಗ್ಯಕ್ಕಾಗಿ, ನೋವು ಮುಕ್ತ ದಿನಗಳಿಗಾಗಿ ಎದುರು ನೋಡುತ್ತಿದ್ದೇನೆ'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 11 ವರ್ಷದ ದಾಂಪತ್ಯಕ್ಕೆ ಗುಡ್‌ಬೈ ಹೇಳಿದ ಗಾಯಕ ದಂಪತಿ ಜಿ.ವಿ.ಪ್ರಕಾಶ್ ಕುಮಾರ್-ಸೈಂಧವಿ! - G V Prakash Saindhavi Divorce

ಶಮಿತಾ ಅವರ ವಿಡಿಯೋ ಸಂದೇಶ ಹೊರಬೀಳುತ್ತಿದ್ದಂತೆ, ಸೆಲೆಬ್ರಿಟಿಗಳಿಂದ ಹಿಡಿದು ಅಭಿಮಾನಿಗಳವರೆಗೆ ಎಲ್ಲರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತಿದ್ದಾರೆ.

ಇದನ್ನೂ ಓದಿ: ಸಲ್ಮಾನ್​​ ಖಾನ್ ಮನೆ ಸಮೀಪ ಗುಂಡಿನ ದಾಳಿ ಕೇಸ್: ಮತ್ತೋರ್ವ ಆರೋಪಿ ಅರೆಸ್ಟ್ - Salman Khan House Firing Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.