ETV Bharat / entertainment

'ಕ್ಯಾಂಡಿ ಕ್ರಷ್' ಸೆಟ್‌ನಲ್ಲಿ ಚಂದನ್ ಶೆಟ್ಟಿ-ನಿವೇದಿತಾ ಗೌಡ ವಿವಾಹ ವಾರ್ಷಿಕೋತ್ಸವ

author img

By ETV Bharat Karnataka Team

Published : Feb 28, 2024, 1:41 PM IST

ಇತ್ತೀಚೆಗೆ ತಮ್ಮ 'ಕ್ಯಾಂಡಿ ಕ್ರಷ್' ಶೂಟಿಂಗ್​​​ ಸೆಟ್​​ನಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು.

Chandan Shetty-Nivedita Gowda
ಚಂದನ್ ಶೆಟ್ಟಿ-ನಿವೇದಿತಾ ಗೌಡ

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸ್ಯಾಂಡಲ್​​ವುಡ್​ನ ಕ್ಯೂಟ್​ ಆ್ಯಂಡ್​ ಬ್ಯೂಟಿಫುಲ್​ ಕಪಲ್. ರಿಯಾಲಿಟಿ ಶೋಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಈ ಮುದ್ದಾದ ಜೋಡಿ ಮೊದಲ ಬಾರಿ ಸ್ಕ್ರೀನ್​​ ಶೇರ್ ಮಾಡಿರುವುದು ನಿಮಗೆ ತಿಳಿದಿರೋ ವಿಚಾರವೇ. ‌ಈ ಚಿತ್ರಕ್ಕೆ 'ಕ್ಯಾಂಡಿ ಕ್ರಷ್' ಎಂಬ ಕ್ಯಾಚಿ ಟೈಟಲ್ ಇಡಲಾಗಿದ್ದು, ನಿರ್ದೇಶಕ ಪುನೀತ್ ಅವರು ಕಥೆ - ಚಿತ್ರಕಥೆ ಬರೆದು ಆ್ಯಕ್ಷನ್​ ಕಟ್​​ ಹೇಳುತ್ತಿದ್ದಾರೆ.

ಬೆಂಗಳೂರಿನಲ್ಲಿ 'ಕ್ಯಾಂಡಿ ಕ್ರಷ್' ಶೂಟಿಂಗ್​​​ ಭರದಿಂದ ಸಾಗಿದೆ. ಸದ್ಯ ಈ ಚಿತ್ರದ ರೊಮ್ಯಾಂಟಿಕ್ ಹಾಡೊಂದರ ಚಿತ್ರೀಕರಣ ವಿಜಯನಗರದ ಶೂಟಿಂಗ್ ಮನೆಯೊಂದರಲ್ಲಿ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಂಪತಿಯ ವೆಡ್ಡಿಂಗ್ ಆ್ಯನಿವರ್ಸರಿ ಕೂಡ ಬಂದಿದೆ. ಚಿತ್ರತಂಡ ಈ ರೊಮ್ಯಾಂಟಿಕ್ ಹಾಡನ್ನು ಆ್ಯನಿವರ್ಸರಿ ಗಿಫ್ಟ್ ಆಗಿ ನೀಡೋ ಮೂಲಕ ಈ ಯುವಜೋಡಿಗೆ ಶುಭ ಕೋರಿದೆ. ಇತ್ತೀಚೆಗೆ ಚಿತ್ರೀಕರಣ ನಡೆದಿದ್ದು, ಗಾಯಕ ಚಂದನ್​ ಶೆಟ್ಟಿ, ನಟಿ ನಿವೇದಿತಾ ಗೌಡ ಈ ಹಾಡಿನ ಮೇಕಿಂಗ್​ ವಿಡಿಯೋವನ್ನು ತಮ್ಮ ಅಧಿಕೃತ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿದೆ.

ಈ ಬಗ್ಗೆ ಮಾತನಾಡಿರೋ ನಟ ಚಂದನ್‌ ಶೆಟ್ಟಿ, ತಮ್ಮ ಚಿತ್ರದ ಶೂಟಿಂಗ್ ಸೆಟ್​ನಲ್ಲಿ ಚಿತ್ರತಂಡದ ಜೊತೆಗೆ ವಿವಾಹ ವಾರ್ಷಿಕೋತ್ಸವವನ್ನು ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದು, ಬಹಳ ಸಂತೋಷ ಆಗುತ್ತಿದೆ. ನಮ್ಮಿಬ್ಬರ ಮದುವೆ ವಾರ್ಷಿಕೋತ್ಸವದ ದಿನವೇ ರೊಮ್ಯಾಂಟಿಕ್ ಸಾಂಗ್ ಶೂಟಿಂಗ್ ನಡೆಯುತ್ತಿದೆ. ಇಷ್ಟು ಜನರ ನಡುವೆ ನಮ್ಮ ಆ್ಯನಿವರ್ಸರಿ ಸೆಲೆಬ್ರೇಟ್ ಮಾಡಿಕೊಳ್ಳುತ್ತಿರುವುದಕ್ಕೆ ನಮಗೆ ನಿಜಕ್ಕೂ ತುಂಬಾನೇ ಖುಷಿಯಾಗ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅನೂಪ್ ರೇವಣ್ಣ ನಟನೆಯ 'ಹೈಡ್ ಅಂಡ್ ಸೀಕ್‌' ಟ್ರೇಲರ್​ ಅನಾವರಣಗೊಳಿಸಿದ ರಾಮಲಿಂಗಾರೆಡ್ಡಿ

ಕ್ಯಾಂಡಿ ಕ್ರಷ್ ವಿಭಿನ್ನ ರೊಮ್ಯಾಂಟಿಕ್ ಕಥಾಹಂದರ ಹೊಂದಿರುವ ಚಿತ್ರ. ಸಿನಿಮಾದ ಶೀರ್ಷಿಕೆಯೇ ಬಹಳ ವಿಶೇಷವಾಗಿದೆ. ಶ್ರೀ ಚೌಡೇಶ್ವರಿ ಸಿನಿ ಕಂಬೈನ್ಸ್ ಮೂಲಕ ಮೋಹನ್ ಕುಮಾರ್ ಅವರು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಪುನೀತ್ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಅದಷ್ಟು ಬೇಗ ಚಿತ್ರೀಕರಣ ಪೂರ್ಣಗೊಳಿಸಿ, ಟ್ರೇಲರ್ ಬಿಡುಗಡೆ ಮಾಡುವ ಸಿದ್ಧತೆಯಲ್ಲಿ ಚಿತ್ರತಂಡ‌ ಇದೆ.

ಇದನ್ನೂ ಓದಿ: 58ನೇ ವಯಸ್ಸಿನಲ್ಲಿ ಎರಡನೇ ಮಗುವಿನ ತಾಯಿಯಾಗಲಿದ್ದಾರೆ ಗಾಯಕ ಸಿಧು ಮೂಸೆವಾಲಾ ತಾಯಿ!

ನಟ ಸುದೀಪ್​​ ನಡೆಸಿಕೊಡುವ ಕನ್ನಡದ ಖ್ಯಾತ ಕಾರ್ಯಕ್ರಮ ಬಿಗ್​ ಬಾಸ್ ಸೀಸನ್​ 5ರ​​​ ಸೆಟ್​​ನಲ್ಲಿ ಮೊದಲ ಬಾರಿಗೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಪರಿಚಯವಾದರು. ಈ ಕಾರ್ಯಕ್ರಮದ ಮೂಲಕ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಂಡರು. ಇಬ್ಬರೂ ಫಿನಾಲೆ ತಲುಪಿ, ಚಂದನ್ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದರು. ಬಿಗ್​ ಬಾಸ್​​​ ಸೆಟ್​​ನಲ್ಲಿ ಕ್ಲೋಸ್​ ಆಗಿದ್ದ ಈ ಜೋಡಿ, 2020ರ ಫೆಬ್ರವರಿ ಕೊನೆಗೆ ಹಸೆಮಣೆ ಏರಿದರು. ಮೈಸೂರು-ಹುಣಸೂರು ರಸ್ತೆಯಲ್ಲಿರುವ ಕಲ್ಯಾಣಮಂಟಪದಲ್ಲಿ ಅದ್ಧೂರಿ ಮದುವೆ ನಡೆದಿತ್ತು. ಇದೇ ಫೆಬ್ರವರಿ 26ಕ್ಕೆ ನಾಲ್ಕನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.