ETV Bharat / education-and-career

Job Alert: ವಿಧಾನ ಪರಿಷತ್​​ನ ವಿವಿಧ ಹುದ್ದೆಗಳ ಭರ್ತಿಗೆ ಕೆಇಎ ಅಧಿಸೂಚನೆ

author img

By ETV Bharat Karnataka Team

Published : Mar 13, 2024, 12:07 PM IST

various job recruitment in Karnataka legislative council
various job recruitment in Karnataka legislative council

ಜೂನಿಯರ್​ ಅಸಿಸ್ಟಂಟ್​, ಕಂಪ್ಯೂಟರ್​ ಪ್ರೋಗ್ರಾಮರ್​ ಸೇರಿದಂತೆ ಹಲವು ಹುದ್ದೆಗಳ ನೇಮಕಾತಿ ನಡೆಯಲಿದೆ.

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ. ಕಿರಿಯ ಸಹಾಯಕರು ಮತ್ತು ಕಂಪ್ಯೂಟರ್​ ಸಹಾಯಕರು ಸೇರಿದಂತೆ ಒಟ್ಟು 28 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಧಿಸೂಚನೆ
ಅಧಿಸೂಚನೆ

ಹುದ್ದೆ ವಿವರ:

  • ಸೀನಿಯರ್​ ಪ್ರೋಗ್ರಾಮರ್​​ - 2
  • ಜೂನಿಯರ್​ ಪ್ರೋಗ್ರಾಮರ್​​​ - 2
  • ಜೂನಿಯರ್​ ಕನ್ಸೋಲ್​ ಆಪರೇಟರ್​​ - 4
  • ಕಂಪ್ಯೂಟರ್​ ಆಪರೇಟರ್​ - 4
  • ಸಹಾಯಕರು - 3
  • ಕಿರಿಯ ಸಹಾಯಕರು - 8
  • ದತ್ತಾಂಶ ನಮೂದು ಸಹಾಯಕರು/ ಬೆರಳಚ್ಚುಗಾರರು -5

ವಿದ್ಯಾರ್ಹತೆ:

  • ಸೀನಿಯರ್​ ಪ್ರೋಗ್ರಾಮರ್​​ - ಸಿಎಸ್​​, ಐಎಸ್​ ಅಥವಾ ಎಲೆಕ್ಟ್ರಾನಿಕ್​ ಅಂಡ್​ ಕಮ್ಯೂನಿಕೇಷನ್​ನಲ್ಲಿ ಇಂಜಿನಿಯರಿಂಗ್​ ಪದವಿ. ಸಂಬಂಧಿತ ಕ್ಷೇತ್ರದಲ್ಲಿ ಎರಡು ವರ್ಷದ ಅನುಭವ
  • ಜೂನಿಯರ್​ ಪ್ರೋಗ್ರಾಮರ್​​​ ಸಿಎಸ್​​, ಐಎಸ್​ ಅಥವಾ ಎಲೆಕ್ಟ್ರಾನಿಕ್​ ಅಂಡ್​ ಕಮ್ಯೂನಿಕೇಷನ್​ನಲ್ಲಿ ಇಂಜಿನಿಯರಿಂಗ್​ ಪದವಿ. ಸಂಬಂಧಿತ ಕ್ಷೇತ್ರದಲ್ಲಿ ಎರಡು ವರ್ಷದ ಅನುಭವ
  • ಜೂನಿಯರ್​ ಕನ್ಸೋಲ್​ ಆಪರೇಟರ್​ ಸಿಎಸ್​​, ಐಎಸ್​ ಅಥವಾ ಎಲೆಕ್ಟ್ರಾನಿಕ್​ ಅಂಡ್​ ಕಮ್ಯೂನಿಕೇಷನ್​ನಲ್ಲಿ ಇಂಜಿನಿಯರಿಂಗ್​ ಪದವಿ. ಸಂಬಂಧಿತ ಕ್ಷೇತ್ರದಲ್ಲಿ ಒಂದು ವರ್ಷದ ಅನುಭವ
  • ಕಂಪ್ಯೂಟರ್​ ಆಪರೇಟರ್​ ಬಿಸಿಎ ಅಥವಾ ಸಿಎಸ್​​, ಎಲೆಕ್ಟ್ರಾನಿಕ್ಸ್​ನಲ್ಲಿ ಬಿಎಸ್​ಸಿ ಪದವಿ
  • ಸಹಾಯಕರು ಕಾನೂನು ಪದವಿ
  • ಕಿರಿಯ ಸಹಾಯಕರು ಪದವಿ
  • ದತ್ತಾಂಶ ನಮೂದು ಸಹಾಯಕರು / ಬೆರಳಚ್ಚುಗಾರರು ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ, ಕೆಎಸ್​​ಇಇಬಿಯ ಬೆರಳಚ್ಚುಗಾರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

ವಯೋಮಿತಿ: ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 35 ವರ್ಷ. ಪ.ಜಾ, ಪ. ಪಂ, ಪ್ರವರ್ಗ 1 ಅಭ್ಯರ್ಥಿಗಳಿಗೆ 5 ಮತ್ತು ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ

ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ. ವಿಶೇಷಚೇತನ ಅಭ್ಯರ್ಥಿಗಳಿಗೆ 250 ರೂ. ಪ.ಜಾ, ಪ.ಪಂ, ಪ್ರವರ್ಗ 1 ಅಭ್ಯರ್ಥಿಗಳಿಗೆ 500 ರೂ. ಇತರೆ ಅಭ್ಯರ್ಥಿಗಳಿಗೆ 750 ರೂ. ಅರ್ಜಿ ಶುಲ್ಕ

ಆಯ್ಕೆ ಪ್ರಕ್ರಿಯೆ: ಸ್ಪರ್ಧಾತ್ಮಕ ಪರೀಕ್ಷೆ

ಈ ಹುದ್ದೆಗೆ ಮಾರ್ಚ್​​ 24ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಅರ್ಜಿ ಸಲ್ಲಿಕೆಗೆ ಕಡೇಯ ದಿನಾಂಕ ಏಪ್ರಿಲ್​ 23 ಆಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು kea.kar.nic.in ಅಥವಾ etonline.karnataka.gov.in/kea ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: RRB ನೇಮಕಾತಿ; 9144 ಟೆಕ್ನಿಕಲ್​ ಹುದ್ದೆಗೆ ಅಧಿಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.