ETV Bharat / education-and-career

RRB ನೇಮಕಾತಿ; 9144 ಟೆಕ್ನಿಕಲ್​ ಹುದ್ದೆಗೆ ಅಧಿಸೂಚನೆ

author img

By ETV Bharat Karnataka Team

Published : Mar 11, 2024, 1:17 PM IST

ರೈಲ್ವೇ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

9144 Technical Post Recruitment by RRB
9144 Technical Post Recruitment by RRB

ಬೆಂಗಳೂರು: ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ ಟೆಕ್ನಿಕಲ್​ ಗ್ರೇಡ್​ -1 ಸಿಗ್ನಲ್​ ಮತ್ತು ಟೆಕ್ನಿಕಲ್​ ಗ್ರೇಡ್​ 3 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. 9144 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.

ಹುದ್ದೆ ವಿವರ: ಆರ್​ಆರ್​ಬಿಯಿಂದ ದೇಶಾದ್ಯಂತ 9144 ತಾಂತ್ರಿಕ ಹುದ್ದೆಗಳ ಭರ್ತಿಗೆ ಕ್ರಮ

ವಿದ್ಯಾರ್ಹತೆ: ಟೆಕ್ನಿಕಲ್​ ಗ್ರೇಡ್​ 1 ಸಿಗ್ನಲ್​ ಹುದ್ದೆಗೆ ಡಿಪ್ಲೊಮಾ, ಬಿಎಸ್ಸಿ, ಬಿಇ ಮತ್ತು ಬಿಟೆಕ್​ ಮತ್ತು ಟೆಕ್ನಿಕಲ್​ 3 ಹುದ್ದೆಗೆ 10ನೇ ತರಗತಿ, ಪಿಯುಸಿ ಮತ್ತು ಐಟಿಐ ವಿದ್ಯಾರ್ಹತೆಯನ್ನು ಹೊಂದಿರಬೇಕು.

ವಯೋಮಿತಿ: ಟೆಕ್ನಿಕಲ್​ ಗ್ರೇಡ್​ 1 ಸಿಗ್ನಲ್​ ಹುದ್ದೆಗೆ ಗರಿಷ್ಠ 36 ವರ್ಷ. ಟೆಕ್ನಿಕಲ್​ 3 ಹುದ್ದೆಗೆ ಗರಿಷ್ಠ ವಯೋಮಿತಿ 33 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3 ಮತ್ತು ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ವೇತನ: ಟೆಕ್ನಿಕಲ್​ ಗ್ರೇಡ್​ 1 ಸಿಗ್ನಲ್​ ಹುದ್ದೆಗೆ 29,200 ರೂ ಮಾಸಿಕ, ಟೆಕ್ನಿಕಲ್​ 3 ಹುದ್ದೆಗೆ 19,900 ರೂ ಮಾಸಿಕ.

ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಪ.ಜಾ, ಪ.ಪಂ, ವಿಕಲಚೇತನ, ಮಹಿಳಾ ಅಭ್ಯರ್ಥಿಗಳಿಗೆ 250 ರೂ ಅರ್ಜಿ ಶುಲ್ಕ ಇತರೆ ಅಭ್ಯರ್ಥಿಗಳಿಗೆ 500 ರೂ ಅರ್ಜಿ ಶುಲ್ಕ.

ಅಧಿಸೂಚನೆ
ಅಧಿಸೂಚನೆ

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅಭ್ಯರ್ಥಿಗಳು ಕಂಪ್ಯೂಟರ್​ ಆಧಾರಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ತಪಾಸಣೆ ಮೂಲಕ ಆಯ್ಕೆ ಮಾಡಲಾಗುವುದು.

ಈ ಹುದ್ದೆಗೆ ಅಭ್ಯರ್ಥಿಗಳು ಮಾರ್ಚ್​ 9ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಏಪ್ರಿಲ್​ 8 ಆಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು indianrailways.gov.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.

HAL ನೇಮಕಾತಿ:

ಹಿಂದೂಸ್ತಾನ್​ ಏರೋನಾಟಿಕ್​ ಲಿಮಿಟೆಡ್​ನಲ್ಲಿ ಖಾಲಿ ಇರುವ 160 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಡಿಪ್ಲೊಮಾ ಟೆಕ್ನಿಷಿಯನ್​ 137, ಏರ್​ಕ್ರಾಫ್ಟ್​ ಟೆಕ್ನಿಷಿಯನ್​ 23 ಹುದ್ದೆಗಳ ನೇಮಕಾತಿ ನಡೆಯಲಿದೆ. ಅಭ್ಯರ್ಥಿಗಳು ಇಸಿಇ, ಇಇಇ, ಮೆಕಾನಿಕಲ್​ನಲ್ಲಿ ಡಿಪ್ಲೊಮಾ ಪದವಿಯನ್ನು ಹೊಂದಿರಬೇಕು. ಗರಿಷ್ಠ ವಯೋಮಿತಿ 28 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3 ಮತ್ತು ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ

ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ. ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ. ಮಾರ್ಚ್​ 3 ರಿಂದ ಅರ್ಜಿ ಸಲ್ಲಿಕೆ ಆರಂಭ. ಕಡೆಯ ದಿನಾಂಕ ಮಾರ್ಚ್​ 16. ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು hal-india.co.in ಭೇಟಿ ನೀಡಿ.

ಇದನ್ನೂ ಓದಿ: ಕೆಇಎ ನೇಮಕಾತಿ: ಪ್ರೋಗ್ರಾಮರ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.