ETV Bharat / education-and-career

ಭಾರತೀಯ ಸೇನೆಯಲ್ಲಿದೆ ಉದ್ಯೋಗಾವಕಾಶ: ಇಲ್ಲಿದೆ ಸಂಪೂರ್ಣ ಮಾಹಿತಿ

author img

By ETV Bharat Karnataka Team

Published : Jan 27, 2024, 4:58 PM IST

http://10.10.50.85:6060/reg-lowres/27-January-2024/job-alert-1_2701newsroom_1706350032_909.jpg
http://10.10.50.85:6060/reg-lowres/27-January-2024/job-alert-1_2701newsroom_1706350032_909.jpg

ಭಾರತೀಯ ಸೇನೆಯಲ್ಲಿ ಎಸ್​​ಎಸ್​ಸಿ ತಾಂತ್ರಿಕದ 381 ಮತ್ತು ಡಿಆರ್​​ಡಿಒದ ರಿಸರ್ಚ್​​ ಫೆಲೋ ಹುದ್ದೆಗಳ ಕುರಿತ ಮಾಹಿತಿ ಇಲ್ಲಿದೆ.

ಹೈದರಾಬಾದ್​: ಭಾರತೀಯ ಸೇನೆಯಲ್ಲಿ ಖಾಲಿ ಇರುವ 381 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಎಸ್​ಎಸ್​ಸಿ ತಾಂತ್ರಿಕ ಹುದ್ದೆಗಳು ಇವಾಗಿವೆ. ಈ ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಅಧಿಸೂಚನೆ
ಅಧಿಸೂಚನೆ

ಹುದ್ದೆ ವಿವರ: ಭಾರತೀಯ ಸೇನೆಯಲ್ಲಿ ಎಸ್​ಎಸ್​ಸಿ ತಾಂತ್ರಿಕ ಹುದ್ದೆಗಳ ವಿವರ ಇಲ್ಲಿದೆ

  • ಎಸ್​ಎಸ್​ಸಿ (ತಾಂತ್ರಿಕ) - 63 ಪುರುಷ : 350 ಹುದ್ದೆ
  • ಎಸ್​​ಎಸ್​ಸಿ (ತಾಂತ್ರಿಕ - 34 ಮಹಿಳಾ : 29 ಹುದ್ದೆ
  • ಎಸ್​​ಎಸ್​ಸಿ (ಡಬ್ಲ್ಯೂ) ತಾಂತ್ರಿಕ : 1 ಹುದ್ದೆ
  • ಎಸ್​ಎಸ್​ಸಿ (ಡಬ್ಲ್ಯೂ ) ತಾಂತ್ರಿಕೇತರ (ಯುಪಿಎಸ್​ಸಿ ಹೊರತಾಗಿ) : 1 ಹುದ್ದೆ

ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಿವಿಲ್​, ಕಂಪ್ಯೂಟರ್​​, ಎಲೆಕ್ಟ್ರಿಕಲ್​, ಎಲೆಕ್ಟ್ರಾನಿಕ್ಸ್​​​, ಮೆಕಾನಿಕಲ್​​ ಇಂಜಿನಿಯರಿಂಗ್​ನಲ್ಲಿ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 20 ರಿಂದ ಗರಿಷ್ಠ ವಯೋಮಿತಿ 27 ವರ್ಷಗಳಾಗಿವೆ. ವಿಧವಾ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 35 ವರ್ಷಗಳಾಗಿವೆ.

ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಆಯ್ಕೆ: ಈ ಹುದ್ದೆಗೆ ಅಭ್ಯರ್ಥಿಗಳನ್ನು ಎಸ್​ಎಸ್​ಬಿ ಸಂದರ್ಶನ, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುವುದು.

ಈ ಹುದ್ದೆಗೆ ಅಭ್ಯರ್ಥಿಗಳು ಜನವರಿ 23ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಫೆಬ್ರವರಿ 1 ಆಗಿದೆ.

ಡಿಆರ್​ಡಿಒದಲ್ಲಿ ಜ್ಯೂನಿಯರ್​ ರಿಸರ್ಚ್​​ ಫೆಲೋ ಹುದ್ದೆ: ಬೆಂಗಳೂರಿನ ಡಿಆರ್​ಡಿಒ ಡಿವೈಎಸ್​ಎಲ್ ​ -ಎಐನಲ್ಲಿ 2 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಬಿಇ, ಬಿಟೆಕ್​ ಅಥವಾ ಎಂಇ, ಎಂಟೆಕ್​ ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಮಾಸಿಕ 37,000 ದಿಂದ 46,990 ರೂ ವೇತನ ನಿಗದಿ ಮಾಡಲಾಗಿದೆ.

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 28 ವರ್ಷ ದಾಟುವಂತಿಲ್ಲ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಈ ಹುದ್ದೆಗೆ ಅಭ್ಯರ್ಥಿಗಳು ಆಫ್​​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ಸೇರಿದಂತೆ ಅಗತ್ಯ ದಾಖಲಾತಿಗಳನ್ನು ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕಾಗಿದೆ.

ನಿರ್ದೇಶಕರು, ಡಿಆರ್​ಡಿಒ ಯಂಗ್​ ಸೈಂಟಿಸ್ಟ್​​ ಲ್ಯಾಬ್ ​- ಆರ್ಟಿಫಿಷಿಯಲ್​​ ಇಂಟಲಿಜೆನ್ಸ್​​, ಡಾ ರಾಜಾ ರಾಮಣ್ಣ ಕಾಂಪ್ಲೆಕ್ಸ್​​​, ರಾಜ ಭವನ ಕಾಂಪ್ಲೆಕ್ಸ್​, ಹೈ ಗ್ರೌಂಡ್ಸ್​​, ಬೆಂಗಳೂರು- 560001.

ಈ ಹುದ್ದೆಗಳನ್ನು ಅಭ್ಯರ್ಥಿಗಳ ಗೇಟ್​ ಸ್ಕೋರ್​, ಆನ್​ಲೈನ್​​ ಕೋಡಿಂಗ್​ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಈ ಹುದ್ದೆಗೆ ಜನವರಿ 17ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಫೆಬ್ರವರಿ 7 ಆಗಿದೆ. ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು drdo.gov.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ಜವಾನ ಹುದ್ದೆಗೆ ಅರ್ಜಿ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.