ETV Bharat / business

Good news; 'ಆ ಬಡ್ಡಿ ಹಿಂತಿರುಗಿಸಿ', ಬ್ಯಾಂಕ್‌ಗಳಿಗೆ ಆರ್‌ಬಿಐ ನಿರ್ದೇಶನ; ಸಾಲಗಾರರಿಗೆ ಸಂತಸದ ಸುದ್ದಿ - RBI ON INTEREST CHARGES

author img

By ETV Bharat Karnataka Team

Published : May 1, 2024, 6:53 AM IST

Updated : May 1, 2024, 9:08 AM IST

rbi-on-interest-charges-rbi-asks-lenders-to-follow-fair-practices-refund-excess-charges-to-customers
Good news; 'ಆ ಬಡ್ಡಿ ಹಿಂತಿರುಗಿಸಿ', ಬ್ಯಾಂಕ್‌ಗಳಿಗೆ ಆರ್‌ಬಿಐ ನಿರ್ದೇಶನ; ಸಾಲಗಾರರಿಗೆ ಸಂತಸದ ಸುದ್ದಿ

ಭಾರತೀಯ ರಿಸರ್ವ್ ಬ್ಯಾಂಕ್ ಸಾಲಗಾರ ಮೇಲೆ ವಿಧಿಸಲಾದ ಹೆಚ್ಚುವರಿ ಬಡ್ಡಿಯನ್ನು ಮರುಪಾವತಿಸಲು ನಿರ್ದೇಶಿಸಿದೆ. ಸಾಲಗಳ ಮೇಲಿನ ಬಡ್ಡಿಯನ್ನು ವಿಧಿಸುವಲ್ಲಿ ಅನ್ಯಾಯದ ಅಭ್ಯಾಸಗಳನ್ನು ಅನುಸರಿಸುತ್ತಿರುವ ಬ್ಯಾಂಕ್‌ಗಳ ಬಗ್ಗೆ ಆರ್​​ಬಿಐ ಕಳವಳ ವ್ಯಕ್ತಪಡಿಸಿದೆ.

ಹೈದರಾಬಾದ್​: ಭಾರತೀಯ ರಿಸರ್ವ್ ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿ ದರಗಳನ್ನು ವಿಧಿಸುವಲ್ಲಿ ಅನ್ಯಾಯದ ಅಭ್ಯಾಸಗಳನ್ನು ಅನುಸರಿಸುತ್ತಿರುವ ಬ್ಯಾಂಕುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಸಾಲಗಾರರ ಮೇಲೆ ವಿಧಿಸಲಾದ ಹೆಚ್ಚುವರಿ ಬಡ್ಡಿಯನ್ನು ಮರು ಪಾವತಿಸುವಂತೆ ಬ್ಯಾಂಕ್‌ಗಳಿಗೆ ಸೋಮವಾರ ಸೂಚಿಸಲಾಗಿದೆ. 2003 ರಿಂದ RBI ಹಲವಾರು ಸಂದರ್ಭಗಳಲ್ಲಿ ತನ್ನ ನಿಯಂತ್ರಿತ ಘಟಕಗಳಿಗೆ ಮಾರ್ಗಸೂಚಿಗಳನ್ನು ನೀಡಿದೆ.

'ಅನ್ಯಾಯದ ಮಾರ್ಗಗಳ ಅನುಸರಣೆಗೆ ಅಸಮಾಧಾನ: ಸಾಲದಾತರು ತನ್ನ ಗ್ರಾಹಕರ ಮೇಲೆ ನ್ಯಾಯಯುತ ಬಡ್ಡಿದರಗಳನ್ನು ಮಾತ್ರವೇ ವಿಧಿಸಬೇಕು. ಇದಕ್ಕಾಗಿ ಬ್ಯಾಂಕ್​​ಗಳು ನ್ಯಾಯಯುತ ಮತ್ತು ಪಾರದರ್ಶಕವಾಗಿರಬೇಕಾದ ಅಗತ್ಯವಿದೆ ಎಂದು ಆರ್​​​ಬಿಐ ಹೊಸದಾಗಿ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಸೂಚಿಸಿದೆ. ಅದೇ ಸಮಯದಲ್ಲಿ ಸಾಲಗಳ ಬಡ್ಡಿದರ ನೀತಿಯ ಬಗ್ಗೆ ಸ್ವಾತಂತ್ರ್ಯವನ್ನೂ ನೀಡಿದೆ. ಮಾರ್ಚ್ 31, 2023 ಕ್ಕೆ ಕೊನೆಗೊಳ್ಳುವ ಅವಧಿಯ ಮಾರ್ಗಸೂಚಿಗಳ ಪಾಲನೆ ಬಗ್ಗೆ ಪರಿಶೀಲಿಸುವಾಗ, ಸಾಲದಾತರು ಕೆಲವು ಅನ್ಯಾಯದ ಅಭ್ಯಾಸಗಳನ್ನು ಅನುಸರಿಸುತ್ತಿದ್ದಾರೆ ಎಂದು RBI ಇತ್ತೀಚೆಗೆ ಕಂಡುಕೊಂಡಿತ್ತು.

ಮುಂಗಡ ಬಡ್ಡಿ ವಿಧಿಸುವುದರ ವಿರುದ್ಧ ಗರಂ: ಎಲ್ಲಾ ಆರ್‌ಇಗಳು ಸಾಲಗಳ ವಿತರಣೆ, ಬಡ್ಡಿ ಶುಲ್ಕಗಳು ಮತ್ತು ಇತರ ಶುಲ್ಕಗಳನ್ನು ಪರಿಶೀಲಿಸಬೇಕು ಎಂದು ಭಾರತೀಯ ರಿಸರ್ವ್​ ಬ್ಯಾಂಕ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇದರ ಪ್ರಕಾರ, ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡಬೇಕು ಮತ್ತು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕು. RE( ರೆಗ್ಯುಲೆಟೆಡ್​ ಎಂಟಿಟಿ) ಗಳ ಕ್ಷೇತ್ರ ಪರಿಶೀಲನೆಯ ಸಮಯದಲ್ಲಿ, ಸಾಲವನ್ನು ಮಂಜೂರು ಮಾಡಿದ ದಿನಾಂಕದಿಂದ ಅಥವಾ ಸಾಲದ ಒಪ್ಪಂದವನ್ನು ಕಾರ್ಯಗತಗೊಳಿಸಿದ ದಿನಾಂಕದಿಂದ ಬಡ್ಡಿ ವಿಧಿಸಲಾಗಿದೆ ಎಂದು ಗಮನಿಸಲಾಗಿದೆ. ವಾಸ್ತವವಾಗಿ ಅದನ್ನು ಸಾಲ ವಿತರಣೆಯ ದಿನಾಂಕದಿಂದ ಲೆಕ್ಕ ಹಾಕಬೇಕು. ಸಾಲ ಮಂಜೂರಾಗಿ ಹಲವು ದಿನ ಕಳೆದರೂ ಬಡ್ಡಿಯನ್ನು ಮುಂಗಡವಾಗಿ ವಸೂಲಿ ಮಾಡಲಾಗುತ್ತಿದೆ ಎಂದು ಅದು ಕಳವಳ ವ್ಯಕ್ತಪಡಿಸಿದೆ.

ಕೆಲವು ಆರ್‌ಇಗಳು ಸಾಲದ ಬಾಕಿ ಅವಧಿಗೆ ಮಾತ್ರವಲ್ಲದೇ ಇಡೀ ತಿಂಗಳಿಗೆ ಬಡ್ಡಿಯನ್ನು ವಿಧಿಸುತ್ತಿರುವುದನ್ನು RBI ಕಂಡುಹಿಡಿದಿದೆ. ಕೆಲವು ಸಂದರ್ಭಗಳಲ್ಲಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಒಂದು ಅಥವಾ ಹೆಚ್ಚಿನ ಕಂತುಗಳನ್ನು ಮುಂಗಡವಾಗಿ ವಿಧಿಸುತ್ತಿವೆ ಎಂದು ಎಂಬುದನ್ನು ಕಂಡುಹಿಡಿದಿದೆ. ಇವೆಲ್ಲವೂ ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯ ಮನೋಭಾವಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಆರ್‌ಬಿಐ ಹೇಳಿದೆ.

ಈ ಎಲ್ಲ ಲೋಪಗಳನ್ನು ಕಂಡು ಹಿಡಿದಿರುವ ಆರ್​ಬಿಐ ಸುತ್ತೋಲೆಯೊಂದನ್ನು ಹೊರಡಿಸಿದೆ. ತಾನು ಗುರುತಿಸಿದ ತಪ್ಪು ಮಾಡಿರುವ ಬ್ಯಾಂಕ್​ಗಳು ಹೆಚ್ಚುವರಿ ಬಡ್ಡಿ ವಿಧಿಸಿದ್ದರೆ 'ತಕ್ಷಣ ಮರುಪಾವತಿ' ವಿಧಾನಗಳನ್ನು ಅನುಸರಿಸಿ ಸಾಲಗಾರರಿಗೆ ಹೆಚ್ಚುವರಿ ಬಡ್ಡಿ ಮತ್ತು ಇತರ ಶುಲ್ಕಗಳನ್ನು ತಕ್ಷಣವೇ ಮರುಪಾವತಿಸಲು ನಿರ್ದೇಶಿಸಲಾಗಿದೆ. ಸಾಲ ವಿತರಣೆಗೆ ಚೆಕ್‌ಗಳ ಬದಲಿಗೆ ಆನ್‌ಲೈನ್ ವರ್ಗಾವಣೆಯನ್ನು ಸಹ ಸೂಚಿಸಿದೆ. ಸುತ್ತೋಲೆಯಲ್ಲಿ ಉಲ್ಲೇಖಿಸಿರುವ ಆದೇಶಗಳು ತಕ್ಷಣವೇ ಜಾರಿಗೆ ಬರಲಿವೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ಇದನ್ನು ಓದಿ: ಬೆಲೆ ಹೆಚ್ಚಾದರೂ ತಗ್ಗದ ವ್ಯಾಮೋಹ: ಭಾರತದಲ್ಲಿ ಚಿನ್ನದ ಬೇಡಿಕೆ ಶೇ 8ರಷ್ಟು ಹೆಚ್ಚಳ - Gold Demand In India

Last Updated :May 1, 2024, 9:08 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.