ETV Bharat / bharat

ಹರಿಯಾಣದಲ್ಲಿ ರಾಜಕೀಯ ಅನಿಶ್ಚಿತತೆ: ರಾಜಕೀಯ ವಿಶ್ಲೇಷಕರು ಹೇಳುವುದೇನು? - haryana government floor test

author img

By ETV Bharat Karnataka Team

Published : May 10, 2024, 4:17 PM IST

ಬಹುಮತ ಸಾಬೀತುಪಡಿಸಲು ಹರಿಯಾಣ ಸರ್ಕಾರಕ್ಕೆ ವಿಶ್ವಾಸಮತ ಪರೀಕ್ಷೆ ನಡೆಸುವಂತೆ ಪ್ರತಿಪಕ್ಷಗಳು ಒತ್ತಾಯಿಸಿವೆ. ಈ ಕುರಿತು ರಾಜಕೀಯ ವಿಶ್ಲೇಷಕರ ಅಭಿಪ್ರಾಯ ಇಲ್ಲಿದೆ.
ಹರಿಯಾಣ ಬಿಜೆಪಿ ಸರ್ಕಾರಕ್ಕೆ ರಾಜಕೀಯ ಅನಿಶ್ಚಿತತೆ
ಹರಿಯಾಣ ಬಿಜೆಪಿ ಸರ್ಕಾರಕ್ಕೆ ರಾಜಕೀಯ ಅನಿಶ್ಚಿತತೆ (ETV Bharat)

ಚಂಡೀಗಢ(ಹರಿಯಾಣ): ಇಲ್ಲಿನ ರಾಜ್ಯ ಸರ್ಕಾರಕ್ಕೆ ಎದುರಾಗಿರುವ ರಾಜಕೀಯ ಬಿಕ್ಕಟ್ಟಿನಿಂದಾಗಿ ಎಲ್ಲರ ಕಣ್ಣು ಈಗ ರಾಜಭವನದತ್ತ ನೆಟ್ಟಿದೆ. ಕಾಂಗ್ರೆಸ್ ನಿಯೋಗಕ್ಕೆ ರಾಜಭವನ ಭೇಟಿಗೆ ಅವಕಾಶ ಸಿಗುತ್ತದೆಯೇ? ಅಥವಾ ಇಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ. ಮತ್ತೊಂದೆಡೆ ಕಾಂಗ್ರೆಸ್, ಜನನಾಯಕ ಜನತಾ ಪಕ್ಷ ಮತ್ತು ಇಂಡಿಯನ್ ನ್ಯಾಷನಲ್ ಲೋಕದಳ ಪಕ್ಷಗಳು ಈಗಿರುವ ಹರಿಯಾಣ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಒತ್ತಾಯಿಸಿವೆ. ಸರ್ಕಾರದ ಬಹುಮತ ಸಾಬೀತುಪಡಿಸಲು ಪ್ರತಿಪಕ್ಷಗಳು ವಿಶ್ವಾಸಮತ ಪರೀಕ್ಷೆಗೆ ಆಗ್ರಹಿಸಿವೆ. ಈ ಸಂಬಂಧ ಎಲ್ಲರ ಕಣ್ಣು ಈಗ ರಾಜಭವನದತ್ತ ನೆಟ್ಟಿದೆ.

ರಾಜಕೀಯ ವಿಶ್ಲೇಷಕ ಧೀರೇಂದ್ರ ಅವಸ್ಥಿ ಮಾತನಾಡಿ, "ಪ್ರಸ್ತುತ ಪರಿಸ್ಥಿತಿಯಲ್ಲಿ, ಈ ಬಿಕ್ಕಟ್ಟು ನಿವಾರಿಸಲು ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತದೆ ಎಂದು ತೋರುತ್ತದೆ. ಆಡಳಿತ ಪಕ್ಷವು 43 ಶಾಸಕರನ್ನು ಹೊಂದಿದ್ದರೆ, ವಿರೋಧ ಪಕ್ಷಗಳು 45 ಶಾಸಕರನ್ನು ಹೊಂದಿದೆ. ಇವರಲ್ಲಿ ಕಾಂಗ್ರೆಸ್ ಪಕ್ಷದ 30, ಜನನಾಯಕ ಜನತಾ ಪಕ್ಷದ 10, ಭಾರತೀಯ ರಾಷ್ಟ್ರೀಯ ಲೋಕದಳದ ಒಬ್ಬರು ಮತ್ತು ನಾಲ್ವರು ಸ್ವತಂತ್ರ ಅಭ್ಯರ್ಥಿಗಳು ಸೇರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ರಾಜ್ಯಪಾಲರು ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತುಪಡಿಸಲು ಸರ್ಕಾರವನ್ನು ಕೇಳಿದರೆ ಬಹುಮತ ಸಾಬೀತುಪಡಿಸುವುದು ಕಷ್ಟ ಎಂಬಂತೆ ತೋರುತ್ತಿದೆ ಎಂದು ಹೇಳಿದ್ದಾರೆ.

ಜೆಜೆಪಿಯ ಬಂಡಾಯ ಶಾಸಕರು ಬಿಜೆಪಿಯ ಹಾದಿ ಸುಲಭ: ಮುಂದುವರಿದು ಮಾತನಾಡಿದ ಅವರು, ಜನನಾಯಕ ಜನತಾ ಪಕ್ಷದ ಮೂವರು ಶಾಸಕರು ಈಗಾಗಲೇ ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ, ಆ ಮೂವರು ಶಾಸಕರು ಪಾಣಿಪತ್‌ನಲ್ಲಿ ಮಾಜಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದಾರೆ. ಸದನದಲ್ಲಿ ಸರ್ಕಾರ ಬಹುಮತ ಪಡೆಯಬೇಕಾದರೆ, ಮೂರು ಜೆಜೆಪಿ ಶಾಸಕರು ರಾಜೀನಾಮೆ ನೀಡಬಹುದು. ಇದರಿಂದಾಗಿ ಸದನದ ಸದಸ್ಯರ ಸಂಖ್ಯೆ 85 ಆಗುತ್ತದೆ. ಇದರೊಂದಿಗೆ ಆಡಳಿತ ಪಕ್ಷವು 43 ಮತ್ತು ವಿರೋಧ ಪಕ್ಷವು 42 ಅನ್ನು ಹೊಂದಿರುತ್ತದೆ. ಅಂದರೆ ಆಡಳಿತ ಪಕ್ಷವು ಬಹುಮತ ಗಳಿಸಲು ಸಾಧ್ಯವಾಗುತ್ತದೆ.

ಮತ್ತೊಬ್ಬ ರಾಜಕೀಯ ವಿಶ್ಲೇಷಕ ಮಾತನಾಡಿ, ಜನನಾಯಕ ಜನತಾ ಪಕ್ಷದ ವಿರುದ್ಧ ಬಂಡೆದ್ದ ಶಾಸಕರು ತಮ್ಮದೇ ಆದ ಬಣವನ್ನು ರಚಿಸಬಹುದು ಎಂಬ ಚರ್ಚೆಯೂ ನಡೆಯುತ್ತಿದೆ. ಆದರೆ, ಅದಕ್ಕಾಗಿ ಕನಿಷ್ಠ ಏಳು ಶಾಸಕರು ಒಗ್ಗೂಡಬೇಕು. ಇದರ ನಂತರ, ಅವರು ಆ ಏಳು ಮಂದಿ ಕಾಂಗ್ರೆಸ್ ಅಥವಾ ಬಿಜೆಪಿಯೊಂದಿಗೆ ಹೋಗಬಹುದು ಅಥವಾ ತಮ್ಮದೇ ಆದ ಪ್ರತ್ಯೇಕ ಪಕ್ಷವನ್ನು ರಚಿಸಬಹುದು. ಆದರೆ ಈ ಏಳು ಶಾಸಕರು ಬಿಜೆಪಿ ಅಥವಾ ಕಾಂಗ್ರೆಸ್ ಪಾಳಯಕ್ಕೆ ಹೋಗುವ ಸಾಧ್ಯತೆ ಕಡಿಮೆ ಎಂದಿದ್ದಾರೆ.

ಇದನ್ನೂ ಓದಿ: '...ಪಾಕಿಸ್ತಾನವನ್ನು ಭಾರತ ಗೌರವದಿಂದ ಕಾಣಬೇಕು': ಕಾಂಗ್ರೆಸ್​ ಮುಖಂಡ ಮಣಿಶಂಕರ್ ಅಯ್ಯರ್ - Pro Pak Statement

ETV Bharat Logo

Copyright © 2024 Ushodaya Enterprises Pvt. Ltd., All Rights Reserved.