ETV Bharat / bharat

ವಿಶ್ವ ಭೂಮಿ ದಿನ: ಪ್ರಕೃತಿಯ ಫೋಟೋಗಳ ಡೂಡಲ್​ ಮೂಲಕವೇ ಗೂಗಲ್​ ಅಕ್ಷರ - google doodle on world Earth day

author img

By ETV Bharat Karnataka Team

Published : Apr 22, 2024, 10:57 AM IST

on-world-earth-day-google-doodle-showcases-planet-earth-natural-beauty
on-world-earth-day-google-doodle-showcases-planet-earth-natural-beauty

ಗೂಗಲ್​ ಡೂಡಲ್​ ಭೂಮಿಯ ನೈಸರ್ಗಿಕ ಸೌಂದರ್ಯಗಳಿಂದಲೇ ಪ್ರಕೃತಿಕವಾಗಿ ಉಂಟಾಗಿರುವ ಅಕ್ಷರಣಗಳಿಂದಲೇ ಭೂಮಿ ದಿನದ ಸಂಭ್ರಮ ಆಚರಿಸಿದೆ.

ಹೈದರಾಬಾದ್​: ಇಂದು ವಿಶ್ವ ಭೂಮಿ ದಿನ. ಈ ವಿಶೇಷ ದಿನದ ಹಿನ್ನೆಲೆ ಗೂಗಲ್​​ ಡೂಡಲ್​ ವಿಶೇಷ ಚಿತ್ರವನ್ನು ಹಂಚಿಕೊಂಡಿದೆ. ಭೂಮಿಯ ಸುಂದರ ಚಿತ್ರದ ಏರಿಯಲ್​​ ಫೋಟೋವನ್ನು ಹಂಚಿಕೊಂಡಿದ್ದು, ಆ ಚಿತ್ರಗಳ ಮೂಲಕವೇ ಗೂಗಲ್ ಎಂಬ ಪದವನ್ನು ನಿರ್ಮಿಸಿದೆ. ಲೋಗೋದಲ್ಲಿ ಗೂಗಲ್​ ಭೂಮಿಯ ವಿವಿಧ ಭಾಗಗಳ ಆಕೃತಿಯ ಒಟ್ಟು ಐದು ಚಿತ್ರವನ್ನು ಹಂಚಿಕೊಂಡಿದೆ. ಈ ಮೂಲಕ ಭೂರಮೆಯ ಸೌಂದರ್ಯದ ಜೊತೆಗೆ ಅದರ ಅದ್ಬುತ ರಚನೆಗಳನ್ನು ಆಹ್ಲಾದಿಸಬಹುದು.

ಭೂಮಿ ದಿನದ ಲೋಗೋದಲ್ಲಿ ಭೂಮಿಯ ಜೀವವೈವಿಧ್ಯ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಲು ಜನರು, ಸಮುದಾಯಗಳು ಮತ್ತು ಸರ್ಕಾರಗಳ ನಡೆಯುತ್ತಿರುವ ಪ್ರಯತ್ನಗಳನ್ನು ಪ್ರತಿಬಿಂಬಿಸಲಾಗಿದೆ. ಅಷ್ಟೇ ಅಲ್ಲದೆ, ಭೂಮಿ ದಿನದ ನಿಮಿತ್ತ ಹಂಚಿಕೊಂಡಿರುವ ಧರೆಯ ವಿವಿಧ ಚಿತ್ರಗಳನ್ನು ಹೇಗೆ ಆಯ್ಕೆ ಮಾಡಲಾಯಿತು ಎಂಬ ಕುರಿತು ಗೂಗಲ್​ ಡೂಡಲ್​ ಇಂದು ಚಿಕ್ಕ ವಿಡಿಯೋವನ್ನೂ ಕೂಡಾ ಹಂಚಿಕೊಂಡಿದೆ.

ಪ್ರಮುಖ ಸರ್ಚ್​ ಇಂಜಿನ್​​ ಆಗಿರುವ ಗೂಗಲ್ ವಿಶಿಷ್ಟ ದಿನ, ರಜೆ ದಿನ, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳಿಗೆ ಕಾರಣವಾದ ಪ್ರಭಾವಿ ವ್ಯಕ್ತಿಗಳು ಅಥವಾ ಸ್ಥಳೀಯ ಅಥವಾ ಜಾಗತಿಕ ಥೀಮ್​ ಮಾಡುವ ಉದ್ದೇಶದಿಂದ ತಮ್ಮ​ ಲೋಗೊವನ್ನು​ ಅಲ್ಪಾವಧಿಯ ಬದಲಾವಣೆ ಮಾಡುವ ಮೂಲಕ ಗೂಗಲ್​ ಡೂಡಲ್​ ಅನ್ನು ರೂಪಿಸುತ್ತದೆ.

ಗೂಗಲ್​ನಲ್ಲಿ ಅಕ್ಷರದ ರೂಪ ಹೋಲುವ ಐದು ಚಿತ್ರಗಳು ಎಲ್ಲಿಯವು ಎಂಬ ಮಾಹಿತಿ ಇಲ್ಲಿದೆ.

G: ಟರ್ಕ್ಸ್​ ಮತ್ತು ಕೈಕೋಸ್ ದ್ವೀಪಗಳು ಆಕಾರದಲ್ಲಿ ಜಿ ಎಂಬ ಅಕ್ಷರ ಕಾಣಬಹುದು. ಟರ್ಕ್ಸ್​ ಮತ್ತು ಕೈಕೋಸ್ ದ್ವೀಪಗಳ ರಾಕ್ ಇಗುವಾನಾಗಳಂತಹ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಮರುಸ್ಥಾಪಿಸುವುದರ ಮಹತ್ವವನ್ನು ತಿಳಿಸಿದೆ. ಜೊತೆಗೆ ನೈಸರ್ಗಿಕ ಸಂಪನ್ಮೂಲಗಳು ಮತ್ತು ಬಂಡೆಗಳನ್ನು ರಕ್ಷಣೆ ಜೊತೆಗೆ ಪರಿಸರ ಸವಾಲುಗಳನ್ನು ಎದುರಿಸುವ ಸಂರಕ್ಷಣಾ ಪ್ರಯತ್ನಗಳೊಂದಿಗೆ ಈ ದ್ವೀಪಗಳು ಪ್ರಮುಖ ಜೀವವೈವಿಧ್ಯ ಪ್ರದೇಶಗಳಿಗೆ ನೆಲೆಯಾಗಿದೆ.

O: ಒ ಅಕ್ಷರ ಪದದಲ್ಲಿ ಮೆಕ್ಸಿಕೋದ ಸ್ಕಾರ್ಪಿಯನ್​ ರೀಫ್​ ನ್ಯಾಷನಲ್​ ಪಾರ್ಕ್​ ಅನ್ನು ಕಾಣಬಹುದಾಗಿದೆ. ಅರೆಸಿಪೆ ಡೆ ಅಲಕ್ರೇನ್ಸ್​ ಎಂದು ಕರೆಯಲಾಗುತ್ತದೆ. ದಕ್ಷಿಣ ಗಲ್ಫ್ ಆಫ್ ಮೆಕ್ಸಿಕೋ ಮತ್ತು ಯುನೆಸ್ಕೋ ಜೀವಗೋಳ ಮೀಸಲು ಪ್ರದೇಶದಲ್ಲಿನ ಅತಿದೊಡ್ಡ ಬಂಡೆಯಾಗಿದೆ. ಈ ಸಮುದ್ರ ಸಂಕೀರ್ಣ ಹವಳ ಮತ್ತು ಹಲವಾರು ಅಳಿವಿನಂಚಿನಲ್ಲಿರುವ ಪಕ್ಷಿ ಮತ್ತು ಆಮೆ ಪ್ರಭೇದಗಳಿಗೆ ಆಶ್ರಯವಾಗಿದೆ.

O: ಮತ್ತೊಂದು ಒ ಅಕ್ಷರದಲ್ಲಿ ಐಸ್ಲ್ಯಾಂಡ್​ನ ವಟ್ನಾಜೊಕುಲ್ ರಾಷ್ಟ್ರೀಯ ಉದ್ಯಾನವನ್ನು ಕಾಣಬಹುದು. ಯುನೆಸ್ಕೋ ವಿಶ್ವ ಪರಂಪರೆಯ ತಾಣ ಇದಾಗಿದ್ದು, ಯುರೋಪ್‌ನ ಅತಿದೊಡ್ಡ ಹಿಮನದಿಯಲ್ಲಿ ಮತ್ತು ಸುತ್ತಮುತ್ತಲಿನ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುತ್ತದೆ. ಜ್ವಾಲಾಮುಖಿಗಳು ಮತ್ತು ಹಿಮನದಿಗಳ ಮಿಶ್ರಣದ ಅಪರೂಪದ ತಾಣವಾಗಿದೆ.

G: ಬ್ರೆಜಿಲ್​ನ ಜೌ ರಾಷ್ಟ್ರೀಯ ಉದ್ಯಾನದ ಈ ಚಿತ್ರದಲ್ಲಿ ಜಿ ರೂಪವನ್ನು ಕಾಣಬಹುದಾಗಿದೆ. ಪಾರ್ಕ್ ನ್ಯಾಷನಲ್ ಡೊ ಜೌ ಎಂದೂ ಕೂಡ ಕರೆಯಲಾಗುವುದು. ಇದು ದಕ್ಷಿಣ ಅಮೆರಿಕದ ಅತಿದೊಡ್ಡ ಮೀಸಲು ಅರಣ್ಯವಾಗಿದೆ. ಜೊತೆಗೆ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ಅಮೆಜಾನ್ ಮಳೆಕಾಡಿನ ಹೃದಯಭಾಗ ಇದಾಗಿದ್ದು, ಇದು ಮಾರ್ಗೆ, ಜಾಗ್ವಾರ್, ನೀರುನಾಯಿ, ಮತ್ತು ಅಮೆಜೋನಿಯನ್ ಮನೇಟಿ ಸೇರಿದಂತೆ ಅನೇಕ ಜೀವಿಗಳ ಆಶ್ರಯತಾಣವಾಗಿದೆ.

L: ನೈಜೀರಿಯಾದ ಗ್ರೇಟ್ ಗ್ರೀನ್ ವಾಲ್ ಇದಾಗಿದ್ದು. 2007 ರಲ್ಲಿ ಪ್ರಾರಂಭವಾದ ಈ ಆಫ್ರಿಕನ್ ಯೂನಿಯನ್ ನೇತೃತ್ವದ ಉಪಕ್ರಮದಿಂದ ಮರುಭೂಮೀಕರಣದ ಪೀಡಿತ ಪ್ರದೇಶವನ್ನು ಪುನರ್​ಸ್ಥಾಪಿಸಲಾಯಿತು. ಸುಸ್ಥಿರ ಭೂಮಿ ನಿರ್ವಹಣೆ ಅಭ್ಯಾಸಕ್ಕಾಗಿ ಮರಗಳು ಮತ್ತು ಇತರ ಸಸ್ಯಗಳನ್ನು ನೆಡಲಾಯಿತು. ಈ ಪ್ರದೇಶವೂ ಜನರು ಮತ್ತು ಸಮುದಾಯಗಳಿಗೆ ಹೆಚ್ಚಿದ ಆರ್ಥಿಕ ಅವಕಾಶ, ಆಹಾರ ಭದ್ರತೆ ಒದಗಿಸುವ ಜೊತೆಗೆ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವ ನಿರ್ವಹಣೆ ನಡೆಸುತ್ತಿದೆ.

E: ಆಸ್ಟ್ರೇಲಿಯಾದ ಪಿಲ್ಬರಾ ದ್ವೀಪಗಳ ಪ್ರಕೃತಿ ಮೀಸಲು ಪ್ರದೇಶ ಇದಾಗಿದೆ. ಪಿಲ್ಬರಾ ದ್ವೀಪ ಪ್ರಕೃತಿ ಮೀಸಲು ಪ್ರದೇಶದಲ್ಲಿ ಇದನ್ನು ಕಾಣಬಹುದು. ಆಸ್ಟ್ರೇಲಿಯಾದಲ್ಲಿ 20 ನೈಸರ್ಗಿಕ ಮೀಸಲು ಪ್ರದೇಶಗಳಿದ್ದು, ಇವು ದುರ್ಬಲವಾದ ಪರಿಸರ ವ್ಯವಸ್ಥೆಗಳು ರಕ್ಷಿಸುವ ಜೊತೆಗೆ ಅಪರೂಪದ ನೈಸರ್ಗಿಕ ಆವಾಸಸ್ಥಾನಗಳ ಹೆಚ್ಚುವಿಕೆಗೆ ಕೊಡುಗೆ ನೀಡುತ್ತದೆ. ಹಲವಾರು ಅಪಾಯದ ಅಥವಾ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಬಹು ಜಾತಿಯ ಸಮುದ್ರ ಆಮೆಗಳು, ಕಡಲ ಹಕ್ಕಿಗಳು ಮತ್ತು ಕಡಲ ಪಕ್ಷಿಗಳು ಸೇರಿವೆ.

ಇದನ್ನೂ ಓದಿ: ಡೂಡಲ್​ ಮೂಲಕ ವಿಶ್ಬದ ಅತಿದೊಡ್ಡ ಚುನಾವಣಾ ಹಬ್ಬಕ್ಕೆ ಶುಭಕೋರಿದ ಗೂಗಲ್​ - GOOGLE DOODLE ON LOK SABHA

ETV Bharat Logo

Copyright © 2024 Ushodaya Enterprises Pvt. Ltd., All Rights Reserved.