ETV Bharat / bharat

ಭಾರತೀಯ ವಾಯುಸೇನೆ ಸೇರಿದ ಬೆಂಕಿ ಅನಾಹುತ ತಡೆಯುವ ಸ್ವದೇಶಿ ನಿರ್ಮಿತ ಫೈರ್​ ಎಂಜಿನ್​ - Crash Fire Tender

author img

By ANI

Published : Apr 3, 2024, 7:07 PM IST

ಸ್ವದೇಶಿ ನಿರ್ಮಿತ ಫೈರ್​ ಎಂಜಿನ್​
ಸ್ವದೇಶಿ ನಿರ್ಮಿತ ಫೈರ್​ ಎಂಜಿನ್​

ಬೆಂಕಿ ಅನಾಹುತಗಳನ್ನು ತಡೆಯುವ ಸ್ವದೇಶಿ ನಿರ್ಮಿತ ಫೈರ್​ ಎಂಜಿನ್​ (ಸಿಎಫ್​ಟಿ) ಭಾರತೀಯ ವಾಯುಸೇನೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿತು.

ನವದೆಹಲಿ: ಅಪಾಯದ ಸಂದರ್ಭಗಳಲ್ಲಿ ಶೀಘ್ರ ನೆರವಿಗೆ ಬರುವ ಕ್ರಾಶ್ ಫೈರ್ ಟೆಂಡರ್ (ನೀರು ಚಿಮ್ಮಿಸುವ ಯಂತ್ರ) ಅನ್ನು ಭಾರತೀಯ ವಾಯುಪಡೆಯು ಬುಧವಾರ ಪಡೆದಿದೆ. ಇದೇ ಮೊದಲ ಬಾರಿಗೆ ಸಿಎಫ್​ಟಿ ಯಂತ್ರ ಭಾರತೀಯ ಸೇನೆಗೆ ಸೇರಿದೆ. ಈ ಕ್ರಾಶ್ ಫೈರ್ ಟೆಂಡರ್ ಅನ್ನು ದೇಶೀಯವಾಗಿ ನಿರ್ಮಿಸಲಾಗಿದೆ. ನೋಯ್ಡಾ ಮೂಲದ ಕಂಪನಿ ಇದನ್ನು ಒಪ್ಪಂದ ಮಾಡಿಕೊಂಡ 14 ತಿಂಗಳ ಒಳಗೆ ತಯಾರಿಸಿ ಕೊಟ್ಟಿದೆ.

"ಭಾರತೀಯ ವಾಯುಪಡೆಯು ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಕ್ರ್ಯಾಶ್ ಫೈರ್ ಟೆಂಡರ್‌ ಅನ್ನು ಪಡೆದುಕೊಂಡಿದೆ. ನೋಯ್ಡಾ ಮೂಲದ ಭಾರತೀಯ ಎಂಎಸ್‌ಎಂಇ ಸಂಸ್ಥೆಯಿಂದ ಇದು ತಯಾರಿಸಲ್ಪಟ್ಟಿದೆ. 291 ಕೋಟಿ ಮೌಲ್ಯದ ಒಪ್ಪಂದವನ್ನು ನೋಯ್ಡಾ ಮೂಲದ ಭಾರತೀಯ ಕೈಗಾರಿಕಾ ಸಂಸ್ಥೆಯ ಜೊತೆ ಮಾಡಿಕೊಳ್ಳಲಾಗಿತ್ತು. ಮಾತುಕತೆ ನಡೆದ 14 ತಿಂಗಳ ಒಳಗೆ ಸಿಎಫ್‌ಟಿಯನ್ನು ತಯಾರಿಸಿ ಕೊಡಲಾಗಿದೆ ಎಂದು ಭಾರತೀಯ ವಾಯುಸೇನೆ ತನ್ನ ಎಕ್ಸ್ ಖಾತೆಯಲ್ಲಿ ಚಿತ್ರಗಳ ಸಮೇತ ಮಾಹಿತಿ ಹಂಚಿಕೊಂಡಿದೆ.

ಯಂತ್ರ ತಯಾರಿಕೆಗೆ ಜಾಗತಿಕ ಪೂರೈಕೆಯಲ್ಲಿ ವಿಳಂಬ, ಅಡ್ಡಿಗಳ ನಡುವೆಯೂ ಸಾಧಿಸಲಾಗಿದೆ. ಊಹಿಸಿದಂತೆ ಮತ್ತು ಭರವಸೆಯಂತೆ ವಾಯುಸೇನೆಯು ಫೈರ್ ಎಂಜಿನ್​ ಅನ್ನು ಪಡೆದುಕೊಂಡಿದೆ. ದೇಶೀಯ ಉತ್ಪಾದನೆಯಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲಾಗಿದೆ ಎಂದಿದೆ.

ಮೇಕ್​ ಇನ್​ ಇಂಡಿಯಾಗೆ ಉತ್ತೇಜನ: ಪ್ರಧಾನಿ ನರೇಂದ್ರ ಮೋದಿ ಅವರ ಒತ್ತಾಸೆಯಾದ ಮೇಕ್​ ಇನ್ ಇಂಡಿಯಾದ ತಳಹದಿಯಲ್ಲಿ ಇದನ್ನು ತಯಾರಿಸಲಾಗಿದೆ. ಭಾರತೀಯ ವಾಯುಪಡೆಯು ದೇಶೀಯ ಉತ್ಪನ್ನವನ್ನು ಉತ್ತೇಜಿಸುತ್ತಿದೆ. ಅದರ ಕಾರ್ಯಾಚರಣೆಗೆ ಬೇಕಾದ ಯಂತ್ರಗಳನ್ನು ಭಾರತದಲ್ಲಿ ತಯಾರಿಸಿದ ವಸ್ತುಗಳನ್ನೇ ಅವಲಂಬಿಸಿದೆ.

ಭಾರತೀಯ ವಾಯುಪಡೆಯು ಲಘು ಯುದ್ಧ ವಿಮಾನ ತೇಜಸ್ ಸೇರಿದಂತೆ ಸ್ವದೇಶಿ ಯುದ್ಧ ವಿಮಾನಗಳಿಗೆ ಸ್ಥಳೀಯ ಸಂಸ್ಥೆಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳುತ್ತಿದೆ. ಇತ್ತೀಚಿಗೆ ಐದನೇ ತಲೆಮಾರಿನ ಸುಧಾರಿತ ಮಧ್ಯಮ ಯುದ್ಧ ವಿಮಾನಗಳನ್ನು ಸೇನೆಗೆ ತಯಾರಿಸಿಕೊಡಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯ ಜೊತೆ ಒಪ್ಪಂದ ಮಾಡಿಕೊಂಡಿದೆ. ಮಾರ್ಚ್ 28 ರಂದು ತೇಜಸ್ ಎಂಕೆ1ಎ ಏರ್‌ಕ್ರಾಫ್ಟ್ ಸರಣಿಯ ಮೊದಲ ವಿಮಾನವು ಬೆಂಗಳೂರಿನ ಹೆಚ್​ಎಎಲ್​ನಲ್ಲಿ ನಭಕ್ಕೆ ಹಾರಿ ಪ್ರಾಯೋಗಿಕ ಯಶಸ್ಸು ಕಂಡಿತು.

ಇದನ್ನೂ ಓದಿ: ನಾಗ್ಪುರ: ಭಾರತೀಯ ವಾಯುಸೇನೆ ಮುಖ್ಯಸ್ಥರಿಂದ ಯುದ್ಧ ಸಾಮಗ್ರಿ ಪರಿಶೀಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.