ETV Bharat / bharat

ನಾಗ್ಪುರ: ಭಾರತೀಯ ವಾಯುಸೇನೆ ಮುಖ್ಯಸ್ಥರಿಂದ ಯುದ್ಧ ಸಾಮಗ್ರಿ ಪರಿಶೀಲನೆ

author img

By ETV Bharat Karnataka Team

Published : Dec 23, 2023, 11:38 AM IST

ಐಎಎಫ್ ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ನಾಗ್ಪುರದಲ್ಲಿ ಯುದ್ಧ ಸಾಮಗ್ರಿಗಳ ಪರಿಶೀಲನೆ ನಡೆಸಿದರು.

ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ
ನಾಗ್ಪುರದಲ್ಲಿ ಭಾರತೀಯ ವಾಯುಸೇನೆ ಮುಖ್ಯಸ್ಥರಿಂದ ಯುದ್ಧಸಾಮಗ್ರಿಗಳ ಪರಿಶೀಲನೆ

ನವದೆಹಲಿ: ಐಎಎಫ್ ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಅವರು ಶುಕ್ರವಾರ ಮಿಲಿಟರಿ ಸ್ಫೋಟಕಗಳು, ರಾಕೆಟ್‌ಗಳು, ಯುದ್ಧಸಾಮಗ್ರಿ ವ್ಯವಸ್ಥೆಗಳು, ಶಸ್ತ್ರಸಜ್ಜಿತ ಡ್ರೋನ್‌ಗಳು (ಹೆಕ್ಸಾಕಾಪ್ಟರ್‌ಗಳು), ಡ್ರೋನ್ ವಿರೋಧಿ ಕ್ಷಿಪಣಿಗಳು, ಬಾಂಬ್‌ಗಳು ಮತ್ತು ವಿವಿಧ ಯುದ್ಧೋಪಕರಣಗಳು ಸೇರಿದಂತೆ ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದ ಪ್ರಮುಖ ಯೋಜನೆಗಳನ್ನು ಪರಿಶೀಲಿಸಿದರು ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ವಿ.ಆರ್. ಚೌಧರಿ ಅವರು ಎರಡು ದಿನಗಳ ಭೇಟಿಗಾಗಿ ಶುಕ್ರವಾರ ನಾಗ್ಪುರದ ಹೆಚ್‌ಕ್ಯು ಮೆಂಟೆನೆನ್ಸ್ ಕಮಾಂಡ್‌ ಪ್ರದೇಶಕ್ಕೆ ಆಗಮಿಸಿದ್ದರು. ವಿವಿಧ ಸಂಯೋಜಿತ ಸ್ಥಾವರಗಳು ಮತ್ತು ಮದ್ದುಗುಂಡುಗಳು ಮತ್ತು ಸ್ಫೋಟಕಗಳ ಉತ್ಪಾದನಾ ಸೌಲಭ್ಯಗಳಾದ ಚಾಫ್ ಸೌಲಭ್ಯ, ಪಿನಾಕಾ ರಾಕೆಟ್‌ಗಳು ಹಾಗೂ ವಿವಿಧ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಅಲ್ಲದೆ, ಐಎಎಫ್‌ಗಾಗಿ 125 ಕೆ.ಜಿ ಬಾಂಬ್‌ಗಳು ಮತ್ತು ಚಾಫ್ ಮತ್ತು ಫ್ಲೇರ್‌ಗಳ ಅಭಿವೃದ್ಧಿಗೆ ಸಂಬಂಧಿಸಿದ ಎರಡು ಯೋಜನೆಗಳಿಗೆ ಕುರಿತು ಎಕನಾಮಿಕ್ ಎಕ್ಸ್‌ಪ್ಲೋಸಿವ್ಸ್ ಲಿಮಿಟೆಡ್ ಅಧ್ಯಕ್ಷರೊಂದಿಗೆ ನಡೆದ ಸಂವಾದದಲ್ಲಿ ಪಾಲ್ಗೊಂಡರು.

ಇದೇ ವೇಳೆ ಸೋಲಾರ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಸಂಸ್ಥಾಪಕ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಸತ್ಯನಾರಾಯಣ್ ನಂದಲಾಲ್ ನುವಾಲ್ ಅವರನ್ನು ಐಎಎಫ್ ಮುಖ್ಯಸ್ಥರು ಭೇಟಿ ಮಾಡಿದರು. ವಿವಿಧ ಲ್ಯಾಬ್‌ ಮತ್ತು ಅಲ್ಲಿನ ಸೌಲಭ್ಯಗಳನ್ನು ವೀಕ್ಷಿಸಿದರು. ಕಂಪನಿಯು ಅಭಿವೃದ್ಧಿಪಡಿಸುತ್ತಿರುವ ಇತ್ತೀಚೆಗಿನ ಉತ್ಪನ್ನಗಳನ್ನು ಪರಿಶೀಲಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಎಎಫ್ ಮುಖ್ಯಸ್ಥರು ವಿವಿಧ ದೇಶೀಯ ಯೋಜನೆಗಳ ಬಗ್ಗೆ ಮಾಹಿತಿ ಪಡೆದು, ಉತ್ತಮ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಯೂನಿವರ್ಸಲ್ ಬಾಂಬ್‌ನ ಸ್ಥಳೀಯ ಅಭಿವೃದ್ಧಿ, ಮದ್ದುಗುಂಡು ಹಾಗೂ ರಕ್ಷಣಾ ವ್ಯವಸ್ಥೆಗಳ ಕ್ಷೇತ್ರದಲ್ಲಿ 'ಆತ್ಮ ನಿರ್ಭರತೆ'ಗೆ ದೊಡ್ಡಮಟ್ಟದ ಕೊಡುಗೆ ಬಗ್ಗೆ ವಿ.ಆರ್. ಚೌಧರಿ ಒತ್ತಿ ಹೇಳಿದರು ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರ: ಭಯೋತ್ಪಾದಕ ದಾಳಿ ನಡೆದ ಸ್ಥಳದಲ್ಲೇ ಮೂವರ ಶವಗಳು ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.