ETV Bharat / bharat

ತೇಜ್‌ಪುರದಿಂದ ತವಾಂಗ್‌ಗೆ ಪ್ರಯಾಣ: ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ನೀವು ಮಾರು ಹೋಗೋದಂತೂ ಪಕ್ಕಾ.. ಇಲ್ಲಿಗೆ ಹೋಗೋದು ಹೇಗೆ? - A journey to Tawang from Tezpur

author img

By ETV Bharat Karnataka Team

Published : May 8, 2024, 10:51 PM IST

ಅಸ್ಸೋಂನ ಬ್ರಹ್ಮಪುತ್ರ ನದಿಯ ಉತ್ತರದ ದಂಡೆಯ ಮೇಲಿರುವ ತೇಜ್‌ಪುರ ನಗರದಿಂದ ಅರುಣಾಚಲ ಪ್ರದೇಶದ ತವಾಂಗ್‌ಗೆ ಕಾರ್ ಸವಾರಿ ಮಾಡುವ ಮೂಲಕ ಹಿಮಾಲಯದ ತಪ್ಪಲಿನ ಬೆಟ್ಟಗಳು ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿರುವ ಅನೇಕ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ತೇಜ್‌ಪುರದಿಂದ ತವಾಂಗ್‌ಗೆ ಪ್ರಯಾಣ
ತೇಜ್‌ಪುರದಿಂದ ತವಾಂಗ್‌ಗೆ ಪ್ರಯಾಣ (ETV Bharat)

ತೇಜ್​ಪುರ್(ಅಸ್ಸೋಂ): ​ಜಗತ್ತಿನಲ್ಲೇ ಅತ್ಯಂತ ಸುಂದರ, ಪ್ರಕೃತಿ ರಮಣೀಯತೆಗೆ ಹೆಸರು ಪಡೆದಿರುವ ದೇಶ ಭಾರತ. ಅದರಲ್ಲೂ ದೇಶದ ಈಶಾನ್ಯ ರಾಜ್ಯಗಳನ್ನು ಭೂಮಿ ಮೇಲಿನ ಸ್ವರ್ಗ ಎಂದರೆ ತಪ್ಪಾಗಲಾರದು. ನೀವು ದೇಶದ ಈಶಾನ್ಯದಲ್ಲಿರುವ ಪ್ರಕೃತಿಯ ಸೌಂದರ್ಯ ನೋಡಿ ಕಣ್ತುಂಬಿಕೊಂಡು ಆನಂದಿಸಲು ಬಯಸುವುದಾದರೆ ತೇಜ್‌ಪುರ ನಗರಕ್ಕೆ ಭೇಟಿ ನೀಡಬೇಕು. ಹೌದು, ತೇಜ್​ಪುರ ನಗರವು ಬ್ರಹ್ಮಪುತ್ರ ನದಿಯ ಉತ್ತರದ ದಡದಲ್ಲಿದೆ. ನಗರದ ಹೃದಯಭಾಗದಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಸೇವೆ ಪ್ರವಾಸಿಗರಿಗೆ ಲಭ್ಯವಿದೆ. ನೀವು ಅಲ್ಲಿಂದ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಇರುವ ಹಿಮಾಲಯ ಪರ್ವತಗಳ ಸಾಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು.

ತೇಜ್‌ಪುರದಿಂದ ತವಾಂಗ್‌ಗೆ ಪ್ರಯಾಣ
ತೇಜ್‌ಪುರದಿಂದ ತವಾಂಗ್‌ಗೆ ಪ್ರಯಾಣ (Tourist Attractions in Northeast (ETV Bharat))

ಜನರು ಹೇಳುವಂತೆ "ತಾಶಿ ಡಾಲಿಕ್" (ಈಶಾನ್ಯ ಸ್ವಿಟ್ಜರ್​ಲ್ಯಾಂಡ್​ ) ಎಂದು ಕರೆಯಲ್ಪಡುವ ಪ್ರಸಿದ್ಧ ಸ್ಥಳಕ್ಕೆ ಸ್ವಾಗತ. ಈ ಆಕರ್ಷಕ ಪ್ರವಾಸಿ ತಾಣಗಳು ತವಾಂಗ್ ಜಿಲ್ಲೆಯ ವಿವಿಧ ಗಡಿ ಪ್ರದೇಶಗಳಲ್ಲಿವೆ. ಇಂಡೋ - ಚೀನಾ ಗಡಿಯಲ್ಲಿರುವ ಬುಮ್ಲಾದ ತವಾಂಗ್ ಮೊನಾಸ್ಟರಿ ಏಳು ಜಲಪಾತಗಳ ಸಂಗಮವಾಗಿದೆ. ಇಲ್ಲಿನ ಮತ್ತೊಂದು ಪ್ರಮುಖ ಸ್ಥಳವೆಂದರೆ ತವಾಂಗ್ ಯುದ್ಧ ಸ್ಮಾರಕ, ಇದು 1962ರ ಸಿನೋ-ಇಂಡಿಯನ್ ಯುದ್ಧದ ವೀರರ ಸ್ಮಾರಕವಾಗಿದೆ. ನೀವು ಇಲ್ಲಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಹೇಗೆ ಪ್ರಯಾಣ ಮಾಡಬಹುದು ಎಂಬ ಮಾಹಿತಿ ಇಲ್ಲಿ ತಿಳಿಯೋಣ.

ತೇಜ್‌ಪುರದಿಂದ ತವಾಂಗ್‌ಗೆ ಪ್ರಯಾಣ
ತೇಜ್‌ಪುರದಿಂದ ತವಾಂಗ್‌ಗೆ ಪ್ರಯಾಣ (Tourist Attractions in Northeast (ETV Bharat))

ತೇಜ್​ಪುರ ನಗರದಿಂದ ತವಾಂಗ್​ಗೆ ನಿತ್ಯ ಬೆಳಿಗ್ಗೆ ಸುಮೋ ವಾಹನ ಸೇವೆಗಳಿವೆ. ಈ ಸುಮೋಗಳು ಮುಂಜಾನೆಯಿಂದ ಪರ್ವತ, ಪ್ರವೇಶಿಸಲಾಗದ ಮತ್ತು ಕಡಿದಾದ ತಿರುವಿನ ರಸ್ತೆಗಳಲ್ಲಿ ಪ್ರಯಾಣಿಸಿ ರಾತ್ರಿ ವೇಳೆಗೆ ತವಾಂಗ್ ತಲುಪುತ್ತವೆ. ಒಂದು ಸುಮೋದಲ್ಲಿ 9 ಪ್ರಯಾಣಿಕರು ಪ್ರಯಾಣಿಸಬಹುದಾಗಿದ್ದು, ತವಾಂಗ್, ಬಾಮ್ಡಿಲಾ, ಸೀಪಾ, ದಿರಾಂಗ್ ಪ್ರದೇಶಗಳಿಗೆ ಭೇಟಿ ನೀಡಬಹುದು. ತೇಜ್​ಪುರದಿಂದ ಈ ಸ್ಥಳಗಳಿಗೆ ಭೇಟಿ ನೀಡಲು ಬಯಸುವವರು ಮುಂಚಿತವಾಗಿ ಪ್ರವಾಸವನ್ನು ಕಾಯ್ದಿರಿಸಬೇಕು.

ಎನ್ಎಚ್ -211 ಎಂದು ಕರೆಯಲ್ಪಡುವ ಈ ರಸ್ತೆ ಭಾಲೋಕ್ಪಾಂಗ್-ಚರಿದುವಾರ್-ತವಾಂಗ್ ಅನ್ನು ಸಂಪರ್ಕಿಸುತ್ತದೆ. ಸದ್ಯ ಇಲ್ಲಿ ಎರಡು ಸುರಂಗಗಳನ್ನು ನಿರ್ಮಿಸಿರುವುದರಿಂದ ಕಡಿಮೆ ಸಮಯದಲ್ಲೇ ಗಮ್ಯಸ್ಥಾನವನ್ನು ತಲುಪಬಹುದು. ಈ ಅವಧಿಯಲ್ಲಿ ಪರ್ವತ ಪ್ರದೇಶಗಳಲ್ಲಿ ಭೂಕುಸಿತದ ಸಾಧ್ಯತೆಯಿಲ್ಲದ ಕಾರಣ ಮೇ ಯಿಂದ ಅಕ್ಟೋಬರ್ ವರೆಗೆ ಇಲ್ಲಿ ಪ್ರವಾಸ ಕೈಗೊಳ್ಳಲು ಉತ್ತಮ ಸಮಯ. ಮಳೆಗಾಲದಲ್ಲಿ ಪರ್ವತ ಪ್ರದೇಶಗಳಲ್ಲಿ ಆಗಾಗ ಭೂಕುಸಿತಗಳು ಸಂಭವಿಸುತ್ತವೆ.

ತೇಜ್​ಪುರದಿಂದ ತವಾಂಗ್​ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ 13,000 ಅಡಿ ಎತ್ತರದಲ್ಲಿ ಸೆಲಾ ಸುರಂಗವನ್ನು ನಿರ್ಮಿಸಲಾಗಿದೆ. 500 ಮೀಟರ್ ಉದ್ದದ ನೆಚಿಫು ಸುರಂಗವನ್ನು 2023 ರ ಸೆಪ್ಟೆಂಬರ್ 12 ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿ ದೇಶಕ್ಕೆ ಸಮರ್ಪಿಸಿದರು. ತವಾಂಗ್ ನಲ್ಲಿ ಮುಖ್ಯವಾಗಿ ಮೊನ್ಪಾ ಜನರು ವಾಸಿಸುತ್ತಿದ್ದಾರೆ. 5 ನೇ ದಲೈ ಲಾಮಾ, ಗವಾಂಗ್ ಲೋಬ್ಸಾಂಗ್ ಗ್ಯಾಟ್ಸೊ ಅವರ ಆದೇಶದ ಮೇರೆಗೆ 1681 ರಲ್ಲಿ ಮೇರಾ ಲಾಮಾ ಲಾರ್ಡ್ ಗ್ಯಾಟ್ಸೊ ಸ್ಥಾಪಿಸಿದ ತವಾಂಗ್ ಮೊನಾಸ್ಟರಿ ಹೆಸರಿನ ಸುತ್ತ ಒಂದು ದಂತಕಥೆ ಇದೆ.

ತಾ ಎಂದರೆ "ಕುದುರೆ" ಮತ್ತು ವಾಂಗ್ ಎಂದರೆ "ರೀಡ್" (ಹುಲ್ಲು) ಎಂದರ್ಥ. ದಂತಕಥೆಯ ಪ್ರಕಾರ, ಮೇರಾ ಲಾಮಾ ಲೋದ್ರೆ ಗ್ಯಾಟ್ಸೊ ಒಡೆತನದ ಕುದುರೆಯಿಂದ ಈ ಮೊನಾಸ್ಟರಿಯನ್ನು ಆಯ್ಕೆ ಮಾಡಲಾಗಿದೆ ಎಂದು ನಂಬಲಾಗಿದೆ. ಆರನೇ ದಲೈ ಲಾಮಾ ಸಂಗ್ಯಾಂಗ್ ಗ್ಯಾಟ್ಸೊ ತವಾಂಗ್‌ನಲ್ಲಿ ಜನಿಸಿದ್ದರು. ಈ ಪ್ರಯಾಣವು ದಿರಾಂಗ್ ನಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಮಂಡೇಲಾ 100 ಬುದ್ಧ ಸ್ತೂಪಕ್ಕೆ ಸಂಬಂಧಿಸಿದೆ.

ಇದನ್ನೂ ಓದಿ: ದೆಹಲಿ, ಹೈದರಾಬಾದ್​ ಸೇರಿ 5 ಕಡೆ ಅಮೆರಿಕದ ವಿದ್ಯಾರ್ಥಿ ವೀಸಾಗೆ ಸಂದರ್ಶನ: ಭಾನುವಾರವೂ ಬೆರಳಚ್ಚು ನೋಂದಣಿಗೆ ಅವಕಾಶ - US Student Visa

ETV Bharat Logo

Copyright © 2024 Ushodaya Enterprises Pvt. Ltd., All Rights Reserved.