ಹಳಿ ಪಕ್ಕ ರೀಲ್ಸ್ ಮಾಡುವಾಗ ಯುವಕನಿಗೆ ಗುದ್ದಿದ ರೈಲು: ಭಯಾನಕ ವಿಡಿಯೋ

By

Published : Sep 4, 2022, 6:45 PM IST

thumbnail

ಹನುಮಕೊಂಡ(ತೆಲಂಗಾಣ) ಸೋಷಿಯಲ್ ಮೀಡಿಯಾದಲ್ಲಿ ಖ್ಯಾತಿಯಾಗಲು ಯುವಕ-ಯುವತಿಯರು ಹುಚ್ಚು ಸಾಹಸ ಮಾಡಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡ ಘಟನೆಗಳು ನಡೆಯುತ್ತಿವೆ. ತೆಲಂಗಾಣದ ಹನುಮಕೊಂಡ ಜಿಲ್ಲಾ ಕೇಂದ್ರದಲ್ಲಿ ಯುವಕನೊಬ್ಬ ಹುಚ್ಚಾಟ ಮಾಡಲು ಹೋಗಿ ಪ್ರಾಣವನ್ನೇ ಪಣಕ್ಕಿಟ್ಟಿದ್ದಾನೆ. ರೀಲ್ಸ್​ ಮಾಡಲು ಯುವಕ ರೈಲ್ವೆ ಹಳಿ ಪಕ್ಕ ನಡೆದುಕೊಂಡು ಹೋಗಿದ್ದಾನೆ. ಇದನ್ನು ಮೂವರು ಸ್ನೇಹಿತರು ವಿಡಿಯೋ ಮಾಡುತ್ತಿದ್ದರು. ಈ ವೇಳೆ ರಭಸವಾಗಿ ಬಂದ ರೈಲು ಯುವಕನಿಗೆ ಗುದ್ದಿಕೊಂಡು ಗೋಗಿದೆ. ಇದರಿಂದ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣವೇ ಸ್ನೇಹಿತರು ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಸದ್ಯ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.