ಚೋಳರ, ಗಂಗರ ಇತಿಹಾಸ ಸಾರುತ್ತವೆಯಂತೆ ಈ ಮೂರ್ತಿಗಳು?
ಕೋಟೆನಾಡಿನಲ್ಲಿ ಪವಾಡ ಸದೃಶವೆಂಬಂತೆ ದೇವರ ವಿಗ್ರಹಗಳು ಪತ್ತೆಯಾಗಿವೆ. ಅವು 800 ವರ್ಷಗಳಷ್ಟು ಹಳೆಯದಾದ ವಿಗ್ರಹಗಳಾಗಿದ್ದು, ಚೋಳರ, ಗಂಗರ ಇತಿಹಾಸವನ್ನು ಸಾರುತ್ತಿವೆಯಂತೆ. ಚೋಳರು ಹಾಗೂ ಗಂಗರ ನಡುವಿನ ಧಾರ್ಮಿಕ ಯುದ್ಧಕ್ಕೆ ಸಿಲುಕಿ ಹರಿಹರ ದೇವಾಲಯ ಧ್ವಂಸಗೊಂಡಿರಬಹುದೇ ಎಂಬ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.