ಆಂಬ್ಯುಲೆನ್ಸ್‌ ಬಳಿ ನಿಂತು ಡ್ಯಾನ್ಸರ್​ಗಳ ಅಶ್ಲೀಲ ನೃತ್ಯ.. ವಿಡಿಯೋ ವೈರಲ್​

By

Published : Jan 4, 2023, 9:17 PM IST

Updated : Feb 3, 2023, 8:38 PM IST

thumbnail

ಸಿವಾನ್ (ಬಿಹಾರ): ರೋಗಿಗಳನ್ನು ತಕ್ಷಣಕ್ಕೆ ಆಸ್ಪತ್ರೆಗೆ ಸಾಗಿಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದಿರುವ ಆಂಬ್ಯುಲೆನ್ಸ್‌ನ ಹೊರಗೆಯೇ ಡ್ಯಾನ್ಸರ್​ಗಳು ನೃತ್ಯ ಮಾಡಿರುವ ವಿಡಿಯೋ ಬಿಹಾರದ ಸಿವಾನ್​ ಜಿಲ್ಲೆಯಲ್ಲಿ ವೈರಲ್ ಆಗಿದೆ. ಇಲ್ಲಿನ ಗೌರಿ ಗ್ರಾಮದಲ್ಲಿ ಜನವರಿ 2ರಂದು ಮದುವೆ ಸಮಾರಂಭ ನಿಮಿತ್ತ ಆರ್ಕೆಸ್ಟ್ರಾ ತರಿಸಲಾಗಿತ್ತು. ಅದೇ ಸಮಯದಲ್ಲಿ ಹೋಗುತ್ತಿದ್ದ ಆಂಬ್ಯುಲೆನ್ಸ್ ಸಿಬ್ಬಂದಿ, ತಮ್ಮ ಆಂಬ್ಯುಲೆನ್ಸ್ ನಿಲ್ಲಿಸಿ ಆರ್ಕೆಸ್ಟ್ರಾದ ಡ್ಯಾನ್ಸರ್​ಗಳು ಮಾಡುತ್ತಿದ್ದ ಡ್ಯಾನ್ಸ್ ನೋಡ ತೋಡಗಿದ್ದಾರೆ. ಈ ವೇಳೆ ಆಂಬ್ಯುಲೆನ್ಸ್ ಸಮೀಪವೇ ಬಂದು ಅಶ್ಲೀಲ ಹಾಡುಗಳಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಾ.ಸರ್ಫರಾಜ್ ಈ ಘಟನೆಯು ತಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.

Last Updated : Feb 3, 2023, 8:38 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.