ಗೌರವ ಡಾಕ್ಟರೇಟ್ ಸಿಕ್ಕ ಸಂತೋಷ ಸಂಪೂರ್ಣ ಕುಗ್ಗಿ ಹೋಯಿತು: ಸ್ಪಂದನ ಸಾವಿಗೆ ಟಿ.ಎಸ್.ನಾಗಾಭರಣ ಬೇಸರ

By

Published : Aug 7, 2023, 3:58 PM IST

Updated : Aug 7, 2023, 4:59 PM IST

thumbnail

ತುಮಕೂರು : "ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಲಭಿಸಿದ ಸಂತೋಷದಲ್ಲಿದ್ದ ನನಗೆ ವಿಜಯ ರಾಘವೇಂದ್ರರ ಪತ್ನಿ ಸ್ಪಂದನ ಅವರ ಸಾವಿನ ವಿಷಯ ತಿಳಿದು ಅತೀವ ದು:ಖವಾಯಿತು. ಪದವಿ ಸಂತೋಷ ಸಂಪೂರ್ಣ ಕುಗ್ಗಿ ಹೋಯಿತು" ಎಂದು ಹಿರಿಯ ಸಿನಿಮಾ ನಿರ್ದೇಶಕ ಟಿ.ಎಸ್.ನಾಗಾಭರಣ ಬೇಸರ ವ್ಯಕ್ತಪಡಿಸಿದರು.

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, "ನಮ್ಮದು ಮತ್ತು ಅವರದು ಬಹಳ ದೊಡ್ಡ ಒಡನಾಟ. ಚಿನ್ನಾರಿ ಮುತ್ತನ ಬೆಳವಣಿಗೆಯನ್ನು ಕಾಣ್ತಾ ಬಂದವನು ನಾನು. ಈ ವಿಷಯ ಕೇಳಿ ನಿಜವಾಗಿಯೂ ಶಾಕ್ ಆಗ್ತಿದೆ. ನಿನ್ನೆ ಅವರ ಮಗ ಶೌರ್ಯನ ಜೊತೆ ಕ್ಲಾಸ್ ನಡೀತಾ ಇತ್ತು. ಅದನ್ನು ಮುಗಿಸಿಕೊಂಡು ಸಂಜೆ 5:30ಕ್ಕೆ ವಿಜಯ ರಾಘವೇಂದ್ರ ಅವರು ಮಗನನ್ನು ಕರೆದುಕೊಂಡು ಹೋಗಿದ್ದರು. ನೀವು ಹೇಳ್ತಿರೋದನ್ನು ಕೇಳಿದ್ರೆ ಇದೆಲ್ಲಾ ಏನು ಅನಿಸುತ್ತಿದೆ. ನಿಜವಾಗಿಯೂ ಪರಿತಾಪಪಡುವ ದುಃಖದ ವಿಷಯ. ನನಗೆ ರಿಯಾಕ್ಟ್ ಮಾಡೋಕೆ ಆಗ್ತಿಲ್ಲ. ಯಾಕೋ ಆ ಕುಟುಂಬದ ಸುತ್ತ ಕರಾಳ ಛಾಯೆಗಳು ನಿರಂತರವಾಗಿ ಎರಗ್ತಿದೆಯಲ್ಲ ಎಂಬುದೇ ಬಹಳ ದುಃಖದ ಸಂಗತಿ" ಎಂದರು. 

ಇದನ್ನೂ ಓದಿ: ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ: ಗಣ್ಯರಿಂದ ಸಂತಾಪ

Last Updated : Aug 7, 2023, 4:59 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.