ಅಯೋಧ್ಯಾ ರಾಮ ಮಂದಿರಕ್ಕೆ ವಾರಾಣಸಿಯ ಹೋಮ ಪರಿಕರ ಬಳಕೆ

By ETV Bharat Karnataka Team

Published : Jan 17, 2024, 10:27 PM IST

thumbnail

ವಾರಾಣಸಿ: ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಉದ್ಘಾಟನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ. ಈ ದಿನ ಪ್ರಧಾನಿ ಮೋದಿ ಅವರು ಅಯೋಧ್ಯೆಗೆ ತೆರಳಿ ದೇವಾಲಯದ ಗರ್ಭಗುಡಿಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಮಾಡಲಿದ್ದಾರೆ. ಇದಕ್ಕಾಗಿ ನಿನ್ನೆಯಿಂದಲೇ ದೇವಸ್ಥಾನದಲ್ಲಿ ವಿಧಿವಿಧಾನಗಳು ಆರಂಭವಾಗಿವೆ.

ಇಲ್ಲಿ ನಿರ್ಮಿಸಲಾಗಿರುವ 9 ವಿವಿಧ ಹವನ ಕುಂಡಗಳಲ್ಲಿ ಧಾರ್ಮಿಕ ವಿಧಿವಿಧಾನಗಳು ನಿರಂತರವಾಗಿ ನಡೆಯಲಿದ್ದು, 22ರಂದು ಮುಖ್ಯ ಕಾರ್ಯಕ್ರಮ ಮುಗಿದ ಬಳಿಕ ಪೂರ್ಣಾಹುತಿ ಅಂದರೆ ಕಾರ್ಯಕ್ರಮದ ಸಮಾರೋಪವೂ ನಡೆಯಲಿದೆ. ಇದಕ್ಕಾಗಿ ಹವನ್ ಕುಂಡದಲ್ಲಿ ಬಳಸುವ ಕೆಲವು ವಿಶೇಷ ರೀತಿಯ ಸಾಮಗ್ರಿಗಳನ್ನು ಈಗಾಗಲೇ ಕಳುಹಿಸಲಾಗಿದೆ. 

ಇದೀಗ ಕಾಶಿಯಲ್ಲಿ ಹೋಮ ಪರಿಕರ ಸುಕ್​ಸೃವನ್ನು ಸಿದ್ಧಪಡಿಸಲಾಗಿದೆ. ಪೂರ್ಣಾಹುತಿ ದಿನ ಇದನ್ನು ಬಳಸಲಾಗುತ್ತದೆ. ಈ ಮರದ ಸುಕ್​ಸೃವಕ್ಕೆ ಬೆಳ್ಳಿ ಮತ್ತು ಚಿನ್ನದ ಲೇಪನ ಮಾಡಲಾಗಿದೆ. ವಾರಾಣಸಿಯ ಲಾಲು ವರ್ಮಾ ಮತ್ತು ಹವನ ಸಾಮಗ್ರಿಗಳನ್ನು ಸಿದ್ಧಪಡಿಸುವ ಸೂರಜ್ ವಿಶ್ವಕರ್ಮ ಅವರು ಕಾಶಿ ಸೇರಿದಂತೆ ರಾಮಮಂದಿರದ ಆಚರಣೆಗಳಿಗೆ ಎಲ್ಲ ವಸ್ತುಗಳನ್ನು ಸಿದ್ಧಪಡಿಸಿದ್ದಾರೆ. ಈ ಈ ಸುಕ್​ಸೃವ ಸರಿಸುಮಾರು 4 ಅಡಿ ಉದ್ದವಿದೆ. 

ಇದನ್ನೂ ಓದಿ: ಶ್ರೀರಾಮ ಮಂದಿರದ ಗರ್ಭಗುಡಿಯ ಚಿನ್ನದ ಬಾಗಿಲಿನ ಕೆಲಸ ಪೂರ್ಣ: ಏನಿದರ ವಿಶೇಷತೆ?

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.