ಕಡಬ: ಗಾಳಿ ಮಳೆಗೆ ತತ್ತರಿಸಿದ ಮೆಸ್ಕಾಂ, 15 ರಿಂದ 20 ಲಕ್ಷ ರೂಪಾಯಿ ನಷ್ಟ

By

Published : Apr 25, 2023, 11:08 PM IST

thumbnail

ಕಡಬ (ದಕ್ಷಿಣ ಕನ್ನಡ): ಇಂದು ಸಂಜೆ ಕಡಬ ತಾಲೂಕಿನಾದ್ಯಂತ ಬೀಸಿದ ರಭಸದ ಗಾಳಿ ಮತ್ತು ಮಳೆಗೆ ಮೆಸ್ಕಾಂಗೆ ಅಂದಾಜು 15 ರಿಂದ 20 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತಗೊಂಡಿತ್ತು. 

ಕಡಬ ತಾಲೂಕಿನಲ್ಲಿ ಮಂಗಳವಾರ ಸಂಜೆ ಏಕಾಏಕಿ ಗುಡುಗು, ಗಾಳಿಯೊಂದಿಗೆ ಬಾರೀ ಮಳೆ ಸುರಿದಿದ್ದು, ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯದಲ್ಲಿ ಮರ ಮುರಿದು ಬಿದ್ದು, ಬಸ್ ತಂಗುದಾಣ, 63kva ವಿದ್ಯುತ್ ಪರಿವರ್ತಕ ಸೇರಿದಂತೆ ಹಲವಾರು ವಿದ್ಯುತ್ ಕಂಬಗಳು, ತಂತಿಗಳು ಧರಶಾಹಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ಸಂಚಾರವು ಸುಮಾರು ಒಂದು ಗಂಟೆಗಳ ಕಾಲ ಬಂದ್ ಆಗಿತ್ತು. ನಂತರದಲ್ಲಿ ಸ್ಥಳೀಯರು ಸೇರಿ ಬಿದ್ದ ಮರಗಳನ್ನು ತೆರವುಗೊಳಿಸಿದರು. 

ಉದನೆ ಸಮೀಪದ ಕಳಪ್ಪಾರು ಮತ್ತು ಶೆರ್ವತಡ್ಕ ಎಂಬಲ್ಲೂ ವಿದ್ಯುತ್ ಕಂಬಗಳು ತಂತಿಗಳು ನೆಳಕ್ಕುರುಳಿವೆ. ಕಡಬ, ಅಲಂಕಾರು, ನೆಲ್ಯಾಡಿ, ಬಿಳಿನೆಲೆ ಮೆಸ್ಕಾಂ ವ್ಯಾಪ್ತಿಯಲ್ಲಿ ಅಂದಾಜು 15 ರಿಂದ 20 ಲಕ್ಷ ರೂಪಾಯಿಗಳ ನಷ್ಟ ಆಗಿರಬಹುದೆಂದು ಕಡಬ ಮೆಸ್ಕಾಂ ಎಇಟಿ ಸಜಿಕುಮಾರ್ ಮಾಹಿತಿ ನೀಡಿದ್ದಾರೆ. ಕಂಬಗಳು, ವಿದ್ಯುತ್ ಪರಿವರ್ತಕ, ತಂತಿಗಳು ಮುರಿದು ಬಿದ್ದ ಕಡೆಗಳಲ್ಲಿ ಮೆಸ್ಕಾಂ ಸಿಬ್ಬಂದಿಗಳು ತುರ್ತು ಕೆಲಸಗಳಲ್ಲಿ ನಿರತರಾಗಿದ್ದಾರೆ ಮತ್ತು ನಾಳೆ ಸಂಜೆಯೊಳಗೆ ವಿದ್ಯುತ್ ವ್ಯತ್ಯಯಗೊಂಡಿರುವ ಕಡೆಗಳಲ್ಲಿ ಕೆಲಸವನ್ನು ಪೂರ್ಣಗೊಳಿಸಲಾಗುವುದೆಂದು ತಿಳಿಸಿದ್ದಾರೆ.

ಇದನ್ನೂ ಓದಿ: ಅಮಾವಾಸ್ಯೆ ದಿನ ಸ್ಮಶಾನದಲ್ಲಿ ವಾಮಾಚಾರ ಶಂಕೆ : ಗ್ರಾಮಸ್ಥರಲ್ಲಿ ಆತಂಕ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.