ಪುರಿ ಕಡಲ ತೀರದಲ್ಲಿ ಘರ್ಜಿಸುತ್ತಿರುವ ಹುಲಿಗಳ 15 ಅಡಿ ಎತ್ತರದ ಮರಳು ಶಿಲ್ಪಕಲಾಕೃತಿ

By

Published : Jul 29, 2023, 11:01 AM IST

Updated : Jul 29, 2023, 11:18 AM IST

thumbnail

ಪುರಿ (ಒಡಿಶಾ): ಪ್ರತಿ ವರ್ಷ ಜುಲೈ 29 ಅನ್ನು ಅಂತಾರಾಷ್ಟ್ರೀಯ ಹುಲಿ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಹೀಗಾಗಿ, ಅಳಿವಿನಂಚಿನಲ್ಲಿರುವ ಹುಲಿಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಖ್ಯಾತ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿ ಕಡಲತೀರದಲ್ಲಿ 15 ಅಡಿ ಎತ್ತರದ ಅದ್ಭುತವಾದ ಮತ್ತು ಆಸಕ್ತಿದಾಯಕ ಮರಳು ಶಿಲ್ಪಕಲಾಕೃತಿಯನ್ನು ರಚಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.  

"ಪರಿಸರವನ್ನು ಉಳಿಸಲು ನಮ್ಮನ್ನು ಉಳಿಸಿ" (Save us to Save the environment) ಎಂಬ ಥೀಮ್ ಇಟ್ಟುಕೊಂಡು ಮರಳು ಶಿಲ್ಪ ಪ್ರದರ್ಶನ ಮಾಡಲಾಗಿದೆ. ಈ ಮೂಲಕ ಪರಿಸರ ಸಂರಕ್ಷಣೆ ಹಾಗೂ ಹುಲಿಗಳ ರಕ್ಷಣೆಗೆ ಒತ್ತು ನೀಡಿ ಎಂದು ಪಟ್ನಾಯಕ್​ ಮನವಿ ಮಾಡಿದ್ದಾರೆ. ವಿಶ್ವದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಆದ್ದರಿಂದ, ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳುವುದು ಮತ್ತು ಹುಲಿಗಳ ಸಂಖ್ಯೆಯನ್ನು ಹೆಚ್ಚಿಸುವುದು ಅಂತಾರಾಷ್ಟ್ರೀಯ ಹುಲಿ ದಿನದ ಮುಖ್ಯ ಉದ್ದೇಶವಾಗಿದೆ. ಹೀಗಾಗಿ, ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ತಮ್ಮ ಮರಳು ಕಲೆಯ ಮೂಲಕ ಜಗತ್ತಿನ ಜನತೆಗೆ ಜಾಗೃತಿಯ ಸಂದೇಶವನ್ನು ರವಾನಿಸಿದ್ದಾರೆ. ಇನ್ನೊಂದೆಡೆ, ಈ ಸುಂದರ ಮರಳು ಕಲೆಯನ್ನು ನೋಡಲು ನೀಲಾದ್ರಿ ಕಡಲತೀರಕ್ಕೆ ಪ್ರವಾಸಿಗರ ದಂಡೇ ಬರಿದು ಬರುತ್ತಿದೆ.  

ಇದನ್ನೂ ಓದಿ : 'ತಂಬಾಕು ತ್ಯಜಿಸಿ': ವಿಶೇಷ ಮರಳು ಕಲಾಕೃತಿ ನೋಡಿ..

Last Updated : Jul 29, 2023, 11:18 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.