ಶಾಲಾ ಮಕ್ಕಳಿಂದ 'ರಾಮ ನಾಮ ಹಾಡಿರೋ ರಾಮ ಬರುವನು'- ವಿಡಿಯೋ ನೋಡಿ

By ETV Bharat Karnataka Team

Published : Jan 11, 2024, 3:58 PM IST

thumbnail

ದಾವಣಗೆರೆ: ಇಡೀ ಪ್ರಪಂಚವೇ ಶ್ರೀ ರಾಮಮಂದಿರ ಉದ್ಘಾಟನೆಗೆ, ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆಗಾಗಿ ಎದುರು ನೋಡುತ್ತಿದೆ. ಈ ಸಂತಸದ ವಿಚಾರದಲ್ಲಿ ದಾವಣಗೆರೆಯ ಶಾಲೆಯ ಮಕ್ಕಳು ಕೂಡ ಭಾಗಿಯಾಗಿದ್ದಾರೆ. ರಾಮ ಲಕ್ಷ್ಮಣ ಸೀತೆ ಹನುಮಂತ ಹೀಗೆ ನಾನಾ ವೇಷಭೂಷಣ ಧರಿಸಿ ರಾಮ ನಾಮ ಹಾಡಿರೋ ರಾಮ ಬರುವನು ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಜೊತೆಗೆ ಹಗಲು ವೇಷಧಾರಿಗಳು ನಾಟಕ ಪ್ರದರ್ಶನ ಮಾಡಿ ಗಮನ ಸೆಳೆದರು.

ದಾವಣಗೆರೆ ನಗರದ ತಿಮ್ಮರೆಡ್ಡಿ ಇಂಟರ್​ ನ್ಯಾಷನಲ್ ಪಬ್ಲಿಕ್​ ಸ್ಕೂಲ್​ ವತಿಯಿಂದ ಶ್ರೀ ರಾಮಮಂದಿರ ಉದ್ಘಾಟನೆ ಹಿನ್ನೆಲೆ ಇಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಶಾಮನೂರು ಶ್ರೀ ರಾಮ ಮಂದಿರದಲ್ಲಿ ಪೂಜಾ ಕೈಂಕರ್ಯ ನೆರವೇರಿಸಿದ ಬಳಿಕ ಶಾಲಾ ಆವರಣದಲ್ಲಿ ಮಕ್ಕಳು ರಾಮ ನಾಮ ಹಾಡಿರುವ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಇದೆ ವೇಳೆ ರಾಮನ ವಿವಿಧ ಅವತಾರಗಳ ವೇಷಗಳನ್ನು ಧರಿಸಿ ರಾಮನಿಗೆ ಪ್ರಾರ್ಥನೆ ಸಲ್ಲಿಸಿದರು. ಇದಲ್ಲದೆ ಹಗಲು ವೇಷ ತಂಡದಿಂದ ಭೀಮಾಂಜನೇಯ ಯುದ್ಧದ ಪ್ರಸಂಗದ ನಾಟಕವನ್ನು ಮಕ್ಕಳ ಮುಂದೆ ಪ್ರದರ್ಶಿಸುವ ಮೂಲಕ ಭಾರತದ ಸಂಸ್ಕೃತಿ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲಾಯಿತು. 

ಇದನ್ನೂ ಓದಿ: ಅಯೋಧ್ಯೆಯಲ್ಲಿ ನಡೆಯುತ್ತಿರುವುದು ಕಾಂಗ್ರೆಸ್ ಪಕ್ಷದ ಚುನಾವಣಾ ರ್‍ಯಾಲಿ ಅಲ್ಲ: ಪ್ರಹ್ಲಾದ ಜೋಶಿ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.