ಹಾವೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಕೈಕೊಟ್ಟ ವಿದ್ಯುತ್​: ಮೊಬೈಲ್​ ಟಾರ್ಚ್​ನಲ್ಲೇ ರಾತ್ರಿ ಕಳೆದ ರೋಗಿಗಳು - ವಿಡಿಯೋ

By ETV Bharat Karnataka Team

Published : Dec 8, 2023, 7:19 AM IST

thumbnail

ಹಾವೇರಿ: ವಿದ್ಯುತ್ ಇಲ್ಲದೇ ರೋಗಿಗಳು‌ ಪರದಾಡಿದ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ನಡೆದಿದೆ. ಈ ಆಸ್ಪತ್ರೆಯಲ್ಲಿ ಕನಿಷ್ಠ ಒಂದು ಯುಪಿಎಸ್ ಕೂಡ ಇಲ್ಲದಿರುವುದರಿಂದ  ರೋಗಿಗಳ ಸಂಬಂಧಿಕರು ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆಸ್ಪತ್ರೆಯ ಹೆರಿಗೆ ವಾರ್ಡ್​ನಲ್ಲಂತೂ ಬೆಳಕಿಲ್ಲದೇ ಬಾಣಂತಿಯರು ನವಜಾತ ಶಿಶುಗಳೊಂದಿಗೆ ಕೆಲಗಂಟೆಗಳ ಕಾಲ ಆತಂಕದಲ್ಲಿ ಕಳೆದಿದ್ದಾರೆ. ಚಿಕಿತ್ಸೆಗಾಗಿ ಬಂದವರು ಕತ್ತಲಲ್ಲೇ ಸಮಯ ಕಳೆದರು. ಕರೆಂಟ್​ ಹೋದಾಗಿನಿಂದ ಆಸ್ಪತ್ರೆ ಒಳಗೆ ಭಯದ ವಾತಾವರಣ ಉಂಟಾಗಿದ್ದು, ಒಮ್ಮೆಲೆ ಎಲ್ಲರೂ ಪರದಾಡಿದರು. ರೋಗಿಗಳ ಸಂಬಂಧಿಕರು ಮೊಬೈಲ್​ ಟಾರ್ಚ್​ ಹಚ್ಚಿ ರಾತ್ರಿ ತಮ್ಮವರೊಂದಿಗೆ ಸಮಯ ಕಳೆದಿದ್ದು, ಆದಷ್ಟು ಬೇಗ ಸರಿಯಾದ ವಿದ್ಯುತ್​ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದ್ದಾರೆ. ತಾಲೂಕು ಆಸ್ಪತ್ರೆಯಲ್ಲಿ ಈ ರೀತಿಯಾಗುವುದು ಅಲ್ಲಿನ ಆಡಳಿತ ವ್ಯವಸ್ಥೆಯ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತಿದೆ. ವಿದ್ಯುತ್​ ಹೋದ ತಕ್ಷಣ ಅದಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲದೇ ಇರುವುದು ಆಸ್ಫತ್ರೆಯ ನಿರ್ಲಕ್ಷವೋ, ತಾಲೂಕು ಆಸ್ಪತ್ರೆಯಲ್ಲಿನ ಕುಂದು ಕೊರತೆಯೋ ತಿಳಿದಿಲ್ಲ. ಆದರೆ, ಇನ್ನು ಮುಂದಾದರು ಆಸ್ಪತ್ರೆ ಸಿಬ್ಬಂದಿ ಆದಷ್ಟು ಬೇಗ ಎಚ್ಚೆತ್ತುಕೊಂಡರೆ ಒಳಿತು. ಇಲ್ಲವಾದರೆ ರೋಗಿಗಳ ಕೆಂಗಣ್ಣಿಗೆ ಗುರಿಯಾಗಬೇಕಾದೀತು.

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.