ETV Bharat / bharat

ಶಿವಸೇನಾ ಪ್ರಚಾರದಲ್ಲಿ ಪಾಕಿಸ್ತಾನದ ಧ್ವಜ ಬಳಸಲಾಗಿತ್ತಾ?: ಫ್ಯಾಕ್ಟ್​​ಚೆಕ್​​ನಲ್ಲಿ ಬಂದ ಫಲಿತಾಂಶವಿದು! - Pakistan Flag

author img

By ETV Bharat Karnataka Team

Published : May 18, 2024, 10:55 PM IST

Updated : May 30, 2024, 1:27 PM IST

ಬೂಮ್ ಫ್ಯಾಕ್ಟ್ ಚೆಕ್: ಮುಂಬೈನಲ್ಲಿ ಪಾಕಿಸ್ತಾನ ಧ್ವಜದ ವಿವಾದ ಸೃಷ್ಟಿಯಾಗಿದೆ. ಈ ಬಗ್ಗೆ ಫ್ಯಾಕ್ಟ್​ ಚೆಕ್​ ನಡೆಸಿದಾಗ ಬಂದ ಫಲಿತಾಂಶವೇ ಬೇರೆಯಾಗಿದೆ. ಏನೆಂಬುದು ಮುಂದೆ ಓದಿ.

ಶಿವಸೇನಾ ಪ್ರಚಾರದಲ್ಲಿ ಪಾಕಿಸ್ತಾನದ ಧ್ವಜ ವಿವಾದ
ಶಿವಸೇನಾ ಪ್ರಚಾರದಲ್ಲಿ ಪಾಕಿಸ್ತಾನದ ಧ್ವಜ ವಿವಾದ (ETV Bharat)

ಹೈದರಾಬಾದ್: ಉದ್ಧವ್​ ಠಾಕ್ರೆ ಬಣದ ಶಿವಸೇನಾ ಅಭ್ಯರ್ಥಿ ಅನಿಲ್​ ದೇಸಾಯಿ ಅವರ ಚುನಾವಣಾ ಪ್ರಚಾರದಲ್ಲಿ ಪಾಕಿಸ್ತಾನ ಧ್ವಜ ಹಾರಿಸಲಾಗಿದೆ ಎಂಬ ವಿಡಿಯೋ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಆದರೆ, ಇದರ ಅಸಲಿಯತ್ತು ಬೇರೆಯದೇ ಇದೆ ಎಂಬುದು ಫ್ಯಾಕ್ಟ್​ ಚೆಕ್​ನಲ್ಲಿ ತಿಳಿದುಬಂದಿದೆ.

ಹಸಿರು ಧ್ವಜವು ಹಾರಾಡುತ್ತಿರುವ ವೈರಲ್ ವೀಡಿಯೊವನ್ನು ಬಿಜೆಪಿ ನಾಯಕ ನೀಲೇಶ್ ರಾಣೆ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡು, ಉದ್ಧವ್​ ಸೇನಾ ಬಣದಲ್ಲಿ ಪಾಕಿಸ್ತಾನದ ಧ್ವಜ! ಈಗ PFI, SIMI, AL QAEDA ದ ಜನರು ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಬಾಳಾಸಾಹೇಬ್​ ಠಾಕ್ರೆ ಅವರ ನಿಜವಾದ ಮುಖವಾಡ ಎಂದು ಮರಾಠಿ ಭಾಷೆಯಲ್ಲಿ ಬರೆದುಕೊಂಡಿದ್ದರು.

ಸೋಷಿಯಲ್​ ಮೀಡಿಯಾದಲ್ಲಿ ಸುಳ್ಳು ಮಾಹಿತಿಯ ಪಾಕ್​ ಧ್ವಜದ ಚಿತ್ರ
ಸೋಷಿಯಲ್​ ಮೀಡಿಯಾದಲ್ಲಿ ಸುಳ್ಳು ಮಾಹಿತಿಯ ಪಾಕ್​ ಧ್ವಜದ ಚಿತ್ರ (Screengrab)

ಇದರ ಬಳಿಕ ಈ ವಿಡಿಯೋ ಭಾರೀ ಪ್ರಮಾಣದಲ್ಲಿ ವೈರಲ್​ ಆಗಿತ್ತು. ಹಲವರು ಇದೇ ಹೇಳಿಕೆಯೊಂದಿಗೆ ಫೇಸ್‌ಬುಕ್‌ನಲ್ಲಿ ವ್ಯಾಪಕವಾಗಿ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು. ಚೆಂಬೂರಿನಲ್ಲಿ ಯುಬಿಟಿ ಅಭ್ಯರ್ಥಿ ಅನಿಲ್ ದೇಸಾಯಿ ಅವರ ಪ್ರಚಾರದ ವಿಡಿಯೋ. ಭಾರತದಲ್ಲಿ ಪಾಕಿಸ್ತಾನದ ಧ್ವಜ. ಇವರ ಹತಾಶೆಯ ಪ್ರಮಾಣ ನೋಡಿ. ಇದನ್ನು ಕಂಡಿದ್ದರೆ ಬಾಳಾಸಾಹೇಬ್ ಠಾಕ್ರೆ ಹೇಗೆ ಭಾವಿಸುತ್ತಾರೆ. ಸಂಜಯ್ ರಾವುತ್ ಮತ್ತು ಆದಿತ್ಯ ಠಾಕ್ರೆ ಅವರು ಶಿವಸೇನೆಯನ್ನೂ ನೆಲಸಮ ಮಾಡಲಿದ್ದಾರೆ. ಇದಕ್ಕೆ ಮಹಾರಾಷ್ಟ್ರದ ಮತದಾರರು ಸೂಕ್ತ ಉತ್ತರವನ್ನು ನೀಡುತ್ತಾರೆ ಎಂದು ಬರೆದುಕೊಳ್ಳಲಾಗಿದೆ.

ಫ್ಯಾಕ್ಟ್​ ಚೆಕ್​ನಲ್ಲಿ ಏನಿದೆ?: ಈ ವಿಡಿಯೋದ ಫ್ಯಾಕ್ಟ್​ ಚೆಕ್​ ನಡೆಸಿದಾಗ, ಮುಂಬೈನ ಚೆಂಬೂರಿನಲ್ಲಿ ಶಿವಸೇನೆ (ಯುಬಿಟಿ) ನಾಯಕ ಅನಿಲ್ ದೇಸಾಯಿ ಅವರ ರೋಡ್ ಶೋನ ವೈರಲ್ ವಿಡಿಯೋದಲ್ಲಿ ಬಳಸಲಾದ ಧ್ವಜವು ಇಸ್ಲಾಮಿಕ್ ಮತದ ಧ್ವಜವಾಗಿದೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಹರಿದಾಡುತ್ತಿರುವ ಪಾಕಿಸ್ತಾನದ ಧ್ವಜ ಅಲ್ಲ ಎಂಬುದು ಗೊತ್ತಾಗಿದೆ.

ಪಾಕ್​ ಧ್ವಜ ಮತ್ತು ಇಸ್ಲಾಂ ಧ್ವಜದ ನಡುವಿನ ವ್ಯತ್ಯಾಸ
ಪಾಕ್​ ಧ್ವಜ ಮತ್ತು ಇಸ್ಲಾಂ ಧ್ವಜದ ನಡುವಿನ ವ್ಯತ್ಯಾಸ (Screengrab)

ವಿಡಿಯೋದಲ್ಲಿರುವ ಧ್ವಜವು ಹಸಿರು ಬಣ್ಣ ಮತ್ತು ಅರ್ಧಚಂದ್ರನ ಗುರುತನ್ನು ಹೊಂದಿದೆ. ಆದರೆ, ಇದು ಪಾಕಿಸ್ತಾನದ ಧ್ವಜವಲ್ಲ. ಮೊಹರಂ ಮತ್ತು ಈದ್ ಮಿಲಾದ್ ಮೆರವಣಿಗೆಗಳಲ್ಲಿ ಬಳಸುವ ಧ್ವಜವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿನ ಧ್ವಜದ ಮೇಲೆ ಬಿಳಿ ಚುಕ್ಕೆಗಳಿವೆ. ಆದರೆ, ಪಾಕಿಸ್ತಾನದ ರಾಷ್ಟ್ರೀಯ ಧ್ವಜವು ಎಡಭಾಗದಲ್ಲಿ ಬಿಳಿ ಗೆರೆಯನ್ನು ಹೊಂದಿದೆ.

ಇಸ್ಲಾಮಿಕ್ ಧ್ವಜವನ್ನು ಪಾಕಿಸ್ತಾನದ ರಾಷ್ಟ್ರಧ್ವಜ ಎಂದು ತಪ್ಪಾಗಿ ಗುರುತಿಸಿರುವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ಗಳು ತಪ್ಪು ಮಾಹಿತಿಯನ್ನು ಹೊಂದಿವೆ ಎಂಬುದು ಸತ್ಯ ಶೋಧನೆಯಲ್ಲಿ ಪತ್ತೆಯಾಗಿದೆ.

ಪಾಕಿಸ್ತಾನ ಧ್ವಜ ಹಾರಿದ ಜಾಗ ಗೂಗಲ್​ ಮ್ಯಾಪ್​ನಲ್ಲಿ ಕಾಣಿಸಿದ್ದು
ಪಾಕಿಸ್ತಾನ ಧ್ವಜ ಹಾರಿದ ಜಾಗ ಗೂಗಲ್​ ಮ್ಯಾಪ್​ನಲ್ಲಿ ಕಾಣಿಸಿದ್ದು (Screengrab)

ಚೆಂಬೂರಿನಲ್ಲಿ ನಡೆದ ಘಟನೆ ಎಂದು ವೈರಲ್​ ವಿಡಿಯೋ ಹೇಳುತ್ತದೆ. ಆದರೆ, ಗೂಗಲ್​ ಮ್ಯಾಪ್​ನಲ್ಲಿ ಇದನ್ನು ಪರಿಶೀಲಿಸಿದಾಗ ಇಂಥದ್ದೇ ಸ್ಥಳಗಳು ಬೇರೆ ಕಡೆ ಕಂಡುಬಂದಿವೆ. ಗೂಗಲ್ ಮ್ಯಾಪ್‌ನಲ್ಲಿ ಪರಿಶೀಲಿಸಲಾಗಿದ್ದು, ವೈರಲ್ ವಿಡಿಯೋವನ್ನು ಚೆಂಬೂರ್ ನಿಲ್ದಾಣದ ಬಳಿಯ ರಸ್ತೆಯಲ್ಲಿ ಚಿತ್ರೀಕರಿಸಲಾಗಿದೆ ಎಂದು ಕಂಡುಬಂದಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಮುಸ್ಲಿಮರ ಬೆಂಬಲವನ್ನು ಪಡೆಯಲು ಈ ರೀತಿ ಮಾಡುತ್ತಿದ ಎಂದು ಆರೋಪಿಸಲಾಗಿತ್ತು.

ಮಹಾರಾಷ್ಟ್ರದ ಕೆಲ ಲೋಕಸಭೆ ಸ್ಥಾನಗಳಿಗೆ ಮೇ 20 ರಂದು ಮತದಾನ ನಡೆಯಲಿದೆ. ಶಿವಸೇನೆ (ಯುಬಿಟಿ) ಕಾಂಗ್ರೆಸ್, ಎನ್‌ಸಿಪಿ (ಶರದ್ ಪವಾರ್ ಬಣ) ಮತ್ತು ಕೋರ್ಟ್​ನಿಂದ ಆದೇಶ ಪಡೆದ ನಿಜವಾದ ಶಿವಸೇನೆ, ಎನ್‌ಸಿಪಿ, ಬಿಜೆಪಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

Note: This story was first published in Boom as part of Shakti Collective and has been republished by ETV Bharat.

ಇದನ್ನೂ ಓದಿ: 2019ರ ಚುನಾವಣೆ ಫಲಿತಾಂಶದ ಅಂಕಿ - ಅಂಶಗಳನ್ನು ಬಿಜೆಪಿ ದಾಟಬಹುದು: ಆಂಟಿಕ್​ ಬ್ರೋಕಿಂಗ್​​ ಭವಿಷ್ಯ - BJP may improve 2019 seat tally

Last Updated : May 30, 2024, 1:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.