ಬಿಜೆಪಿ ಶಾಸಕ ಬಸವರಾಜ ಮತ್ತಿಮಡು ಕಾರು ಪಲ್ಟಿ, ಗಾಯ- ವಿಡಿಯೋ

By ETV Bharat Karnataka Team

Published : Jan 14, 2024, 3:17 PM IST

thumbnail

ಕಲಬುರಗಿ: ಇಲ್ಲಿನ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ಮತ್ತಿಮಡು ಅವರು ಸಂಚರಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಕಲಬುರಗಿ ತಾಲೂಕಿನ ಪಾಳಾ ಗ್ರಾಮದ ಬಳಿ ಭಾನುವಾರ ನಡೆದಿದೆ. ಶಹಬಾದ್​ ಪಟ್ಟಣಕ್ಕೆ ಕಾರ್ಯಕ್ರಮದ ನಿಮಿತ್ತ ಶಾಸಕರು ತೆರಳುತ್ತಿದ್ದಾಗ ಅವಘಡ ಸಂಭವಿಸಿತು.

ಪಾಳಾ ಎಂಬಲ್ಲಿ ಹೋಗುವಾಗ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಆಯತಪ್ಪಿ ರಸ್ತೆ ಬದಿ ಜಮೀನಿಗೆ ಉರುಳಿ ಬಿದ್ದಿದೆ. ಕಾರಿನಲ್ಲಿ ಶಾಸಕ ಮತ್ತಿಮಡು, ಅಂಗರಕ್ಷಕ, ಬೆಂಬಲಿಗರು ಇದ್ದರು. ಪಲ್ಟಿಯಾದ ಕಾರಿನಲ್ಲಿ ಸಿಕ್ಕಿಬಿದ್ದ ಶಾಸಕರನ್ನು ಹೊರತರಲಾಗಿದ್ದು, ಅವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಘಟನೆಯನ್ನು ಕಾರಿನಲ್ಲಿದ್ದವರೇ ವಿಡಿಯೋ ಮಾಡಿದ್ದಾರೆ. ಕಾರಿನ ಗಾಜುಗಳು ಪುಡಿಪುಡಿಯಾಗಿವೆ.

ಬಳಿಕ ಶಾಸಕರನ್ನು ಬೇರೊಂದು ಕಾರಿನಲ್ಲಿ ಕಲಬುರಗಿ ನಗರಕ್ಕೆ ವಾಪಸ್​ ಕರೆದುಕೊಂಡು ಬಂದು ಯುನೈಟೆಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿದ ಪತ್ನಿ ಜಯಶ್ರೀ ಮತ್ತಿಮಡು ಮತ್ತು ಪುತ್ರ ಆಕಾಶ್​ ಮತ್ತಿಮಡು ಆಸ್ಪತ್ರೆಗೆ ಭೇಟಿ ನೀಡಿದರು. ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಸಂಸದ ಅನಂತ್​ ಕುಮಾರ್ ಹೆಗಡೆ ವಿರುದ್ಧ ಸುಮೊಟೊ ಪ್ರಕರಣ ದಾಖಲು

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.