ಫೈನಲ್ ಪಂದ್ಯದತ್ತ ದಿಟ್ಟ ಹೆಜ್ಜೆ ಹಾಕಿದ ಟೀಂ ಇಂಡಿಯಾ; ಸ್ಟೇಡಿಯಂ ಸುತ್ತ ಜನಸಾಗರ! -ವಿಡಿಯೋ
Published : Nov 19, 2023, 12:37 PM IST
ಅಹಮದಾಬಾದ್: ವಿಶ್ವವೇ ತುದಿಗಾಲ ಮೇಲೆ ನಿಂತು ಕಾಯುತ್ತಿರುವ ಏಕದಿನ ವಿಶ್ವಕಪ್ ಫೈನಲ್ಗೆ ಕ್ಷಣಗಣನೆ ಆರಂಭವಾಗಿದೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ಅಂತಿಮ ಕದನ ನಡೆಯಲಿದೆ. ಭಾರತ ಕ್ರಿಕೆಟ್ ತಂಡದ ಆಟಗಾರರು ತಂಗಿದ್ದ ಹೋಟೆಲ್ನಿಂದ ಬಸ್ನಲ್ಲಿ ಸ್ಟೇಡಿಯಂಗೆ ತೆರಳಿದರು. ಮಧ್ಯಾಹ್ನ ಪಂದ್ಯ ಆರಂಭವಾಗಲಿದ್ದರೂ ಬೆಳಗ್ಗೆಯಿಂದಲೇ ಕ್ರಿಕೆಟ್ ಪ್ರಿಯರು ಕ್ರೀಡಾಂಗಣದ ಮುಂದೆ ಜಮಾಯಿಸಿದ್ದಾರೆ.
ಭಾರತ ತಂಡದ ಜೆರ್ಸಿ, ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಬೂಮ್ರಾ ಸೇರಿದಂತೆ ಆಟಗಾರರ ಹೆಸರುಳ್ಳ ಜೆರ್ಸಿ ಮತ್ತು ಫೋಟೋಗಳನ್ನು ಹಿಡಿದುಕೊಂಡು ಅಭಿಮಾನಿಗಳು ಕ್ರೀಡಾಂಗಣದ ಮುಂದೆ 'ಬಿಗ್' ಕದನಕ್ಕಾಗಿ ಕಾಯುತ್ತಿದ್ದಾರೆ.
ಕ್ರೀಡಾಂಗಣಕ್ಕೆ ಪೊಲೀಸರು ಬಿಗಿಭದ್ರತೆ ಒದಗಿಸಿದ್ದು, 6 ಸಾವಿರ ಖಾಕಿ ಸರ್ಪಗಾವಲು ಹಾಕಲಾಗಿದೆ. ಒಳಗಡೆ ಮತ್ತು ಹೊರಭಾಗದಲ್ಲಿ ತಲಾ 3 ಸಾವಿರ ಪೊಲೀಸರು ಭದ್ರತೆ ಒದಗಿಸಲಿದ್ದಾರೆ. ಭಾರತ ತಂಡ ವಿಶ್ವಕಪ್ ಎತ್ತಿಹಿಡಿಯಬೇಕು ಎಂದು 140 ಕೋಟಿಗೂ ಅಧಿಕ ಭಾರತೀಯರು ದೇವಾನುದೇವತೆಗಳಿಗೆ ಮೊರೆ ಹೋಗುತ್ತಿದ್ದಾರೆ. 2003 ರ ಫೈನಲ್ ಸೇಡು ತೀರಿಸಿಕೊಳ್ಳಲಿ ಎಂಬುದು ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳ ಆಶಯ.
ಇದನ್ನೂ ಓದಿ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್: ಕೊಹ್ಲಿ, ಅಶ್ವಿನ್ಗೆ ವಿಶಿಷ್ಟ ದಾಖಲೆ ಬರೆಯುವ ಅವಕಾಶ