ಬೆಂಕಿ ಅವಘಡದಿಂದ ಹೊತ್ತಿ ಉರಿದ ರೆಸಾರ್ಟ್​: ಅಪಾರ ಹಾನಿ

By ETV Bharat Karnataka Team

Published : Sep 4, 2023, 10:16 PM IST

thumbnail

ಗಂಗಾವತಿ(ಕೊಪ್ಪಳ) : ಬೆಂಕಿ ಅವಘಡದಿಂದ ರೆಸಾರ್ಟ್​ವೊಂದು​ ಹೊತ್ತಿ ಉರಿದಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮನಹಳ್ಳಿಯಲ್ಲಿ  ಸೋಮವಾರ ನಡೆದಿದೆ. ಹನುಮನಹಳ್ಳಿ ಗ್ರಾಮದ ಋಷಿಮುಖ ಪರ್ವತದ ರಸ್ತೆಯಲ್ಲಿರುವ ವಂಡರ್ಲಸ್ಟ್ ರೆಸಾರ್ಟ್​ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ರೆಸಾರ್ಟ್​ನ 10 ಕೊಠಡಿಗಳ ಪೈಕಿ ಎಂದು 8 ಕೊಠಡಿಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ಕೆನ್ನಾಲಿಗೆ ರೆಸಾರ್ಟ್​ ಪೂರ್ತಿ ಆವರಿಸಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಬೆಂಕಿ ಅವಘಡ ಹೇಗೆ ಸಂಭವಿಸಿದೆ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ರೆಸಾರ್ಟ್​ನಲ್ಲಿ ಕಿರುಚಿತ್ರ ನಿರ್ಮಾಣ ತಂಡವೊಂದು ಬೀಡು ಬಿಟ್ಟಿತ್ತು ಎಂದು ಹೇಳಲಾಗಿದೆ. 

ಇದನ್ನೂ ಓದಿ : ಸರೋಜಿನಿ ಬಾಬು ಮಾರ್ಕೆಟ್​ನಲ್ಲಿ ಬೆಂಕಿ ಅವಘಡ : ನಾಲ್ಕು ಗಾರ್ಮೆಂಟ್ಸ್ ಅಂಗಡಿಗಳು ಬೆಂಕಿಗಾಹುತಿ​

ಹಂಪಿ ಅಭಿವೃದ್ಧಿ ಪ್ರಾಧಿಕಾರದ ಕಟ್ಟುನಿಟ್ಟಿನ ಕ್ರಮದಿಂದಾಗಿ ಆನೆಗೊಂದಿ ಭಾಗದಲ್ಲಿ ಬೆರಳೆಣಿಕೆಯಷ್ಟು ರೆಸಾರ್ಟ್​ಗಳು ಮಾತ್ರ ಕಾರ್ಯಾಚರಣೆ ಮಾಡುತ್ತಿದೆ. ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಬಹುತೇಕ ರೆಸಾರ್ಟ್​ಗಳನ್ನು ಬಿದಿರು ಸೇರಿದಂತೆ ನೈಸರ್ಗಿಕ ವಸ್ತುಗಳಿಂದಲೇ ನಿರ್ಮಾಣ ಮಾಡಲಾಗಿದೆ. ಈ ರೆಸಾರ್ಟ್​ ಕೂಡ ಬಿದಿರಿನಿಂದ ನಿರ್ಮಾಣ ಮಾಡಲಾಗಿತ್ತು.

ಇದನ್ನೂ ಓದಿ : ಭಾರಿ ಅಗ್ನಿ ಅವಘಡ.. ನಾಲ್ವರು ಸಾವು, ಬೆಂಕಿ ನಂದಿಸಲು ಹರಸಾಹಸ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.