'ಇದು ನನ್ನ ಕೊನೆ ಚುನಾವಣೆ ಆದ್ರೆ ರಾಜಕೀಯದಿಂದ ನಿವೃತ್ತಿಯಾಗುವುದಿಲ್ಲ': ವರುಣದಲ್ಲಿ ಸಿದ್ದರಾಮಯ್ಯ

By

Published : May 10, 2023, 11:59 AM IST

Updated : May 10, 2023, 1:14 PM IST

thumbnail

ವರುಣ(ಮೈಸೂರು): ರಾಜ್ಯದಲ್ಲಿ ಮತದಾನ ಉತ್ಸಾಹ ಜೋರಾಗಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. "60 ಪ್ರತಿಶತದಷ್ಟು ಮತಗಳು ಕಾಂಗ್ರೆಸ್​ಗೆ ಸಿಗಲಿವೆ. ಪಕ್ಷ ಕನಿಷ್ಠ 130 ಗರಿಷ್ಠ 160 ಸ್ಥಾನಗಳನ್ನು ಪಡೆದು, ಪೂರ್ಣ ಬಹುಮತದಿಂದ ಸರ್ಕಾರ ರಚನೆ ಮಾಡಲಿದೆ" ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ವರುಣದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮತದಾನ ಮಾಡಲು ಮತಗಟ್ಟೆ ಕೇಂದ್ರಕ್ಕೆ ಹೋಗುವ ಮೊದಲು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, "ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರಲಿದೆ. ಸಂಪೂರ್ಣ ಬಹುಮತದಿಂದಲೇ ನಾವು ಸರ್ಕಾರ ರಚನೆ ಮಾಡುತ್ತೇವೆ. 130 ಕ್ಕೂ ಅಧಿಕ ಸ್ಥಾನವನ್ನು ಪಕ್ಷ ಗೆಲ್ಲಲಿದೆ" ಎಂದರು.

"ನಾನು ರಾಜಕೀಯದಿಂದ ನಿವೃತ್ತಿಯಾಗುವುದಿಲ್ಲ. ಆದರೆ, ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಇದು ನನ್ನ ಕೊನೆಯ ಚುನಾವಣೆ. ಸಿಎಂ ಅಭ್ಯರ್ಥಿಯನ್ನು ಹೈಕಮಾಂಡ್​​ ನಿರ್ಧರಿಸಲಿದೆ" ಎಂದು ಹೇಳಿದರು.

ಮತದಾನ: ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಮೈಸೂರು ಜಿಲ್ಲೆಯ ವರುಣ ಕ್ಷೇತ್ರಕ್ಕೆ ಬರುವ ಸಿದ್ದರಾಮನಹುಂಡಿ ಗ್ರಾಮದಲ್ಲಿ ಮತದಾನ ಮಾಡಿದರು. ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಮತಗಟ್ಟೆ 86ರಲ್ಲಿ ಅವರು ಹಕ್ಕು ಚಲಾಯಿಸಿದರು. ಈ ವೇಳೆ "ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ" ಎಂದು ಘೋಷಣೆ ಅಭಿಮಾನಿಗಳು ಕೂಗಿದರು.

ಮತದಾನದ ವೇಳೆ ಸಿದ್ದರಾಮಯ್ಯಗೆ ಪುತ್ರ ಯತೀಂದ್ರ ಸಿದ್ದರಾಮಯ್ಯ, ಸೊಸೆ ಸ್ಮಿತಾ ಜೊತೆಗಿದ್ದರು. ಮತದಾನಕ್ಕೂ ಮೊದಲು ಸಿದ್ದರಾಮೇಶ್ವರ ದೇವಸ್ಥಾನಕ್ಕೆ ನಡೆದುಕೊಂಡೆ ಹೋಗಿ ಪೂಜೆ ಸಲ್ಲಿಸಿದರು.

ಇದನ್ನೂ ಓದಿ: ಕುಟುಂಬ ಸಮೇತ ಯಡಿಯೂರಪ್ಪ ಮತದಾನ: ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ

Last Updated : May 10, 2023, 1:14 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.