ಕರ್ನಾಟಕಕ್ಕೆ ಯಾರು ಸಿಎಂ? ದೆಹಲಿಯಲ್ಲಿ ರಾಹುಲ್‌ ಭೇಟಿಯಾದ ಸಿದ್ದರಾಮಯ್ಯ, ಡಿಕೆಶಿ

By

Published : May 17, 2023, 12:42 PM IST

Updated : May 17, 2023, 1:22 PM IST

thumbnail

ನವದೆಹಲಿ: ಕರ್ನಾಟಕ ಸಿಎಂ ಸಸ್ಪೆನ್ಸ್​ ಮುಂದುವರಿದಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರು ಇಂದು ಪಕ್ಷದ ನಾಯಕ ರಾಹುಲ್​ ಗಾಂಧಿ ಅವರನ್ನು ಭೇಟಿ ಮಾಡಿದರು. ದೆಹಲಿಯ 10 ಜನಪತ್​ನಲ್ಲಿರುವ ನಿವಾಸಕ್ಕೆ ಬೆಳಗ್ಗೆ ಆಗಮಿಸಿದ್ದ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಗಳ ಜೊತೆ ಅವರು ಮಾತುಕತೆ ನಡೆಸಿದರು.

ನಿನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರು ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ಸುರ್ಜೇವಾಲಾ, ವೇಣುಗೋಪಾಲ್​ ಅವರ ಜೊತೆಗೆ ನಡೆಸಿದ ಹಲವು ಸುತ್ತಿನ ಸಭೆಗಳ ಹೊರತಾಗಿಯೂ ಸಿಎಂ ಆಯ್ಕೆ ಕಗ್ಗಂಟು ಬಿಡಿಸಲಾಗಿಲ್ಲ. 

ಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದಿರುವ ಸಿದ್ದರಾಮಯ್ಯ ಅವರ ಜೊತೆಗೆ ರಾಹುಲ್​ ಗಾಂಧಿ ಅವರು ಮೊದಲು ಚರ್ಚೆ ನಡೆಸಿದರು. ಸಿದ್ದು ನಿವಾಸದಿಂದ ತೆರಳಿದ ಬಳಿಕ, ಡಿ.ಕೆ.ಶಿವಕುಮಾರ್ ಭೇಟಿ ನೀಡಿದರು. ಡಿಕೆಶಿ ಅವರ ಜೊತೆ ರಾಹುಲ್​ ಗಾಂಧಿ ಅವರು ಚರ್ಚಿಸಿದ ಬಳಿಕ ಸಿಎಂ ಯಾರಾಗಲಿದ್ದಾರೆ ಎಂಬುದು ಗೊತ್ತಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಮುಖ್ಯಮಂತ್ರಿ ಆಯ್ಕೆ: ಒಳ್ಳೆಯ ನಿರ್ಧಾರ ಹೊರ ಬರಲಿದೆ- ಕೆ.ಸಿ.ವೇಣುಗೋಪಾಲ್

Last Updated : May 17, 2023, 1:22 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.