ಟ್ರ್ಯಾಕ್ಟರ್​ಗೆ ಬೈಕ್​ ಡಿಕ್ಕಿ ವಾಹನ ಸವಾರ ಸಾವು: ಸಿಸಿಟಿವಿಯಲ್ಲಿ ಅಪಘಾತದ ದೃಶ್ಯ ಸೆರೆ

By

Published : Feb 15, 2023, 6:25 PM IST

Updated : Feb 15, 2023, 6:54 PM IST

thumbnail

ಹುಬ್ಬಳ್ಳಿ: ಇಲ್ಲಿನ ನವನಗರ ಹತ್ತಿರ ಟ್ರಾಕ್ಟರ್​ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಪರುಶುರಾಮ್​ ವಾಲಿಕರ್​ ಮೃತ ವ್ಯಕ್ತಿ. ನವನಗರದ ಕ್ಯಾನ್ಸರ್ ಆಸ್ಪತ್ರೆ ಹತ್ತಿರ ಪರುಶುರಾಮ್​ ಮತ್ತು ಅವರ ಸ್ನೇಹಿತ ಬೈಕ್ ಮೇಲೆ ಚಲಿಸುತ್ತಿದ್ದ ವೇಳೆ ಎದುರಿಗೆ ಬಂದ ಟ್ರ್ಯಾಕ್ಟರ್​ಗೆ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಸವಾರ ಪರುಶುರಾಮ್​ ತಲೆಗೆ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಸ್ಥಳದಲೇ ಮೃತಪಟ್ಟಿದ್ದಾರೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಕುರಿತಂತೆ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯೋಧನಾಗುವ ಕನಸು ಕಂಡಿದ್ದ ಯುವಕ ಈಜಲು ತೆರಳಿ ಸಾವು:  ಯೋಧನಾಗುವ ಆಸೆ ಹೊತ್ತಿದ್ದ ಯುವಕನೊಬ್ಬ ಕೆರೆಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ ಘಟನೆ ಕಲಘಟಗಿಯ ಮಡಕಿಹೊನ್ನಳ್ಳಿ ಕೆರೆಯಲ್ಲಿ ನಡೆದಿದೆ. ಕಲಘಟಗಿ ಪಟ್ಟಣದ ಬೆಂಡಿಗೇರಿ ನಿವಾಸಿಯಾದ್ ಪವನ್​ ನಾರಾಯಣಕರ (19) ಮೃತ ಯುವಕ. ಮಂಗಳವಾರ ಸಂಜೆ ಪವನ್​ ಸ್ನೇಹಿತರೊಂದಿಗೆ ಈಜಲು ಕೆರೆಗೆ ಹೋಗಿದ್ದರು. ಕೆರೆ ಆಳವಾಗಿದ್ದ ಕಾರಣ ಈಜು ಬಾರದೆ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪವನ್​ ಕೆಲ ತಿಂಗಳ ಹಿಂದೆ ಮಿಲಿಟರಿ ಪರೀಕ್ಷೆಗೆ ಹಾಜರಾಗಿ ಬಂದಿದ್ದು, ಸೈನ್ಯ ಸೇರಿ ದೇಶ ಸೇವೆ ಮಾಡುವ ಆಸೆ ಇಟ್ಟುಕೊಂಡಿದ್ದ. ಆದ್ರೆ ನೇಮಕಾತಿ ಆದೇಶ ಬರುವ ಮುನ್ನವೇ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಆಂಬ್ಯುಲೆನ್ಸ್ ಮತ್ತು ಟೆಂಪೋ ನಡುವೆ ಅಪಘಾತ: ಎಂಟು ಜನರಿಗೆ ಗಾಯ

Last Updated : Feb 15, 2023, 6:54 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.