ಪರಭಾಷಾ ಚಿತ್ರಗಳಿಗೆ ದುಬಾರಿ ಟಿಕೆಟ್‍ ದರ: ನಟ ಶಿವ ರಾಜ್‌ಕುಮಾರ್​ ಹೇಳಿದ್ದೇನು?- ವಿಡಿಯೋ

By ETV Bharat Karnataka Team

Published : Oct 27, 2023, 10:12 PM IST

thumbnail

ಬೆಂಗಳೂರು: ಕಳೆದ ವಾರ ಶಿವ ರಾಜ್‌ಕುಮಾರ್​ ಅಭಿನಯದ 'ಘೋಸ್ಟ್' ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದರೆ ಇದೇ ವೇಳೆ ತಮಿಳಿನ ‘ಲಿಯೋ’, ತೆಲುಗಿನ ‘ಟೈಗರ್ ನಾಗೇಶ್ವರ್ ರಾವ್‍’ ಮತ್ತು ‘ಭಗವಂತ್‍ ಕೇಸರಿ’ ಚಿತ್ರಗಳು ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿವೆ. ಹೀಗಾಗಿ, ಘೋಸ್ಟ್​ಗೆ ಸಿಗಬೇಕಿದ್ದ ಚಿತ್ರಮಂದಿರಗಳು ಕಡಿಮೆಯಾದವು. ಇತ್ತೀಚೆಗೆ ನಡೆದ ಘೋಸ್ಟ್ ಸಿನಿಮಾ ಸಕ್ಸಸ್ ಮೀಟ್​ನಲ್ಲಿ ಶಿವಣ್ಣ ಈ ಬಗ್ಗೆ ಮೌನ ಮುರಿದರು. ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳಿಗೆ ದುಬಾರಿ ಟಿಕೆಟ್‍ ದರ ಇರುವ ಬಗ್ಗೆ ಮಾತನಾಡಿದರು. 

ಟಿಕೆಟ್​ ದರ ಹೆಚ್ಚೂ, ಕಡಿಮೆ ಮಾಡುವ ವಿಚಾರದಲ್ಲಿ ಸರ್ಕಾರ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಚಿತ್ರರಂಗದವರು ಎಲ್ಲರೂ ಒಟ್ಟಾಗಿ ಕುಳಿತು ಮಾತನಾಡಿದರೆ ಈ ಸಮಸ್ಯೆ ಬಗೆಹರಿಯುತ್ತದೆ. ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳ ಸರ್ಕಾರಗಳು ಎಲ್ಲಾ ಸಿನಿಮಾಗಳಿಗೂ ಸಮಾನ ಟಿಕೆಟ್​ ದರ ನಿಗದಿಪಡಿಸಿವೆ. ಅದೇ ರೀತಿ ಯಾವುದೇ ಬೇದಭಾವ ಇಲ್ಲದೇ ಕೇವಲ ಸ್ಟಾರ್​ ಸಿನಿಮಾಗಳಿಗೆ ಟಿಕೆಟ್​ ದರ ಹೆಚ್ಚಿಸದೇ, ಎಲ್ಲ ಸಿನಿಮಾಗಳಿಗೂ ಒಂದೇ ರೀತಿಯ ಟಿಕೆಟ್​ ದರ ನಿಗದಿ ಮಾಡಬೇಕು. ಸ್ವಲ್ಪ ತಡವಾದರೂ ಪರವಾಗಿಲ್ಲ, ಲೇಟೆಸ್ಟ್​ ಆಗಿ ಮಾಡೋಣ ಎಂದು ಸಲಹೆ ನೀಡಿದರು.

ಇದನ್ನೂ ಓದಿ: ನಿರ್ದೇಶಕನ ಕ್ಯಾಪ್​ ತೊಟ್ಟ ನಟ ಅರುಣ್ ಕುಮಾರ್​; 'ನೆಲ್ಸನ್​' ಆದ್ರು ವಿನೋದ್ ಪ್ರಭಾಕರ್​​  

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.