ETV Bharat / t20-world-cup-2022

ಐಸಿಸಿ ಟಿ20 ವಿಶ್ವಕಪ್: ಗೆಲುವಿನ ಖಾತೆ ತೆರೆದ ನೆದರ್ಲ್ಯಾಂಡ್ಸ್​​​..​ ಜಿಂಬಾಬ್ವೆ ಸೆಮಿಪೈನಲ್ ಆಸೆ ನುಚ್ಚುನೂರು!

author img

By

Published : Nov 2, 2022, 6:41 PM IST

ICC t20 world cup Zimbabwe vs Nederland Match  ಪೌಲ್ ವ್ಯಾನ್ ಮಿಕೆರೆನ್​ರ ಮಿಂಚಿನ ಬೌಲಿಂಗ್ ದಾಳಿ  ಮ್ಯಾಕ್ಸ್ ಓಡೌಡ್​ರ ಅರ್ಧಶತಕ  icc t20 world cup  Nederland win against zimbambwe  ಜಿಂಬಾಬ್ವೆ ಸೆಮಿಪೈನಲ್ ಆಸೆ ನುಚ್ಚುನೂರು  ಗೆಲುವಿನ ಖಾತೆ ತೆಗೆದ ನೆದರ್ಲೆಂಡ್ಸ್​ ಐಸಿಸಿ ಟಿ20 ವಿಶ್ವಕಪ್  nederland won the match against Zimbabwe  ಜಿಂಬಾಬ್ವೆ ವಿರುದ್ಧ 5 ವಿಕೆಟ್ ಗಳ ಭರ್ಜರಿ ಜಯ  ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ
ಕೃಪೆ : ಐಸಿಸಿ ಟಿ20 ವಿಶ್ವಕಪ್ ಟ್ವಿಟ್ಟರ್​

ಐಸಿಸಿ ಟಿ20 ವಿಶ್ವಕಪ್ 2022 ರ ಸೂಪರ್-12 ನಲ್ಲಿ ನೆದರ್ಲ್ಯಾಂಡ್ಸ್ ಕೊನೆಗೂ ತನ್ನ ಮೊದಲ ಜಯವನ್ನು ದಾಖಲಿಸಿದೆ. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ನೆದರ್ಲೆಂಡ್ಸ್ 18 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿ ಗೆಲುವಿನ ಹಾದಿ ತಲುಪಿತು. ಇದರಿಂದಾಗಿ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಜಿಂಬಾಬ್ವೆಯ ಸೆಮಿ ಫೈನಲ್​ ಆಸೆ ನುಚ್ಚುನೂರಾಯ್ತು.

ಅಡಿಲೇಡ್: ಮ್ಯಾಕ್ಸ್ ಓಡೌಡ್​ರ ಅರ್ಧಶತಕ ಮತ್ತು ಪೌಲ್ ವ್ಯಾನ್ ಮಿಕೆರೆನ್​ರ ಮಿಂಚಿನ ಬೌಲಿಂಗ್ ದಾಳಿಯಿಂದ ನೆದರ್ಲ್ಯಾಂಡ್ಸ್​ ತಂಡವು ಜಿಂಬಾಬ್ವೆ ವಿರುದ್ಧ 5 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ. ಮೊದಲೆ ವಿಶ್ವಕಪ್ ಸೆಮಿಪೈನಲ್ ರೇಸ್​ನಿಂದ ಹೊರ ಬಿದಿದ್ದ ನೆದರ್ಲ್ಯಾಂಡ್ ತಂಡವು ಈಗ ಜಿಂಬಾಬ್ವೆ ತಂಡದ ಸೆಮಿಪೈನಲ್ ಕನಸನ್ನು ಭಗ್ನಗೊಳಿಸಿದೆ. ದಕ್ಷಿಣ ಆಫ್ರಿಕಾ, ಭಾರತ ಮತ್ತು ಪಾಕಿಸ್ತಾನ ಈಗ ಗುಂಪು 2 ರಿಂದ ಸೆಮಿಫೈನಲ್ ರೇಸ್‌ನಲ್ಲಿ ಉಳಿದಿವೆ. ಇದರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತಕ್ಕೆ ಸೆಮಿಫೈನಲ್ ತಲುಪುವ ಹೆಚ್ಚಿನ ಅವಕಾಶವಿದೆ.

ನೆದರ್ಲ್ಯಾಂಡ್ಸ್ ವಿರುದ್ಧ ಜಿಂಬಾಬ್ವೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನೆದರ್ಲ್ಯಾಂಡ್ಸ್ ಅಮೋಘ ಬೌಲಿಂಗ್ ಪ್ರದರ್ಶಿಸಿ ಜಿಂಬಾಬ್ವೆಯನ್ನು 19.2 ಓವರ್‌ಗಳಲ್ಲಿ 117 ರನ್‌ಗಳಿಗೆ ಆಲೌಟ್ ಮಾಡಿತು. ಜಿಂಬಾಬ್ವೆ ಪರ ಸಿಕಂದರ್ ರಜಾ 40 ರನ್ ಕೊಡುಗೆ ನೀಡಿದ್ದು, ಸೀನ್ ವಿಲಿಯಮ್ಸ್ 28 ರನ್​ಗಳ ಇನ್ನಿಂಗ್ಸ್ ಆಡಿದರು. ಇವರಿಬ್ಬರನ್ನು ಬಿಟ್ಟರೆ ಬೇರೆ ಯಾವುದೇ ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತವನ್ನು ತಲುಪಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು.

ನೆದರ್ಲ್ಯಾಂಡ್ಸ್ ಪರ ಪಾಲ್ ವ್ಯಾನ್ ಮೀಕರ್ನ್ ಮೂರು ವಿಕೆಟ್ ಪಡೆದರು. ಪಾಕಿಸ್ತಾನದ ವಿರುದ್ಧ ಗಾಯಗೊಂಡಿದ್ದ ಬಸ್ ಡಿ ಲೀಡೆ ಕೂಡ ಉತ್ತಮ ಬೌಲಿಂಗ್ ಮಾಡಿ ನಾಲ್ಕು ಓವರ್‌ಗಳಲ್ಲಿ 14 ರನ್ ನೀಡಿ ಎರಡು ವಿಕೆಟ್ ಪಡೆದರು.

ಜಿಂಬಾಬ್ವೆ ನೀಡಿದ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ನೆದರ್ಲ್ಯಾಂಡ್ಸ್ ತಂಡ 18 ಓವರ್‌ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ 120 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು. ಮ್ಯಾಕ್ಸ್ ಔದೌದ್ 47 ಎಸೆತಗಳಲ್ಲಿ 52 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಟಾಮ್ ಕೂಪರ್ 32 ರನ್ ಕೊಡುಗೆ ನೀಡಿದರು. ಬಸ್ ಡಿ ಲೀಡೆ 12 ಎಸೆತಗಳಲ್ಲಿ ಔಟಾಗದೆ 12 ರನ್ ಗಳಿಸಿ ಮಿಂಚಿದರು. ಜಿಂಬಾಬ್ವೆ ಪರ ರಿಚರ್ಡ್ ನ್ಗಾರವ ಮತ್ತು ಮುಜರಬಾನಿ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.

ಇದನ್ನೂ ಓದಿ: ಶುಭ್​ಮನ್​ ಗಿಲ್​ ಭರ್ಜರಿ ಶತಕ.. ಸೈಯದ್​ ಮುಷ್ತಾಕ್​ ಅಲಿ ಟ್ರೋಫಿಯಿಂದ ಕರ್ನಾಟಕ ಔಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.