ETV Bharat / sukhibhava

ಹವಾಮಾನ ಬದಲಾವಣೆಯಿಂದ ಅಮೆರಿಕದತ್ತ ತೆರಳುತ್ತಿರುವ ವಾಂಪೈರ್​ ಬಾವಲಿಗಳು; ರೇಬೀಸ್​ ಭೀತಿ

author img

By ETV Bharat Karnataka Team

Published : Nov 29, 2023, 12:06 PM IST

Vampire bats moves us due to climate change may spread rabies in US
Vampire bats moves us due to climate change may spread rabies in US

Climate change problems: ಅಪಾಯಕಾರಿ ವಾಂಪೈರ್ ಬಾವಲಿಗಳು ಸದ್ಯ ಮೆಕ್ಸಿಕೋ, ದಕ್ಷಿಣ ಮತ್ತು ಕೇಂದ್ರ ಅಮೆರಿಕದಲ್ಲಿ ಪತ್ತೆಯಾಗುತ್ತಿವೆ. ಇದೀಗ ಅವು 27 ವರ್ಷಗಳ ಬಳಿಕ ಅಮೆರಿಕಕ್ಕೆ ಮರಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ನ್ಯೂಯಾರ್ಕ್​: ಅತ್ಯಂತ ಅಪಾಯಕಾರಿಯಾಗಿರುವ ವಾಂಪೈರ್​ ಬಾವಲಿಗಳು ಶೀಘ್ರದಲ್ಲೇ ಅಮೆರಿಕದಲ್ಲಿ ವಾಸಿಸಲಿದ್ದು, ಇದು ರೇಬೀಸ್​ ವೈರಸ್​ನಂತಹ ಹಲವು ರೋಗಕಾರಕಗಳನ್ನು ತರುತ್ತವೆ ಎಂದು ಹೊಸ ಅಧ್ಯಯನ ವರದಿ ತಿಳಿಸಿದೆ.

ವಾಂಪೈರ್​ ಬಾವಲಿಗಳು ರೇಬೀಸ್​​ ರೋಗವನ್ನು ಹೊತ್ತು ತರುತ್ತವೆ. ಈ ರೋಗದಿಂದ ಸಾವಿನ ದರ ಹೆಚ್ಚಲಿದೆ. ಇದು 3,000 ವರ್ಷಗಳಷ್ಟು ಹಳೆಯ ರೋಗಕಾರಕವಾಗಿದೆ. ಇಂಥ ಅಪಾಯಕಾರಿ ಬಾವಲಿಗಳು ಸದ್ಯ ಮೆಕ್ಸಿಕೋ, ದಕ್ಷಿಣ ಮತ್ತು ಕೇಂದ್ರ ಅಮೆರಿಕದಲ್ಲಿ ಪತ್ತೆಯಾಗುತ್ತಿವೆ. ಇದೀಗ ಅವು 27 ವರ್ಷಗಳ ತರುವಾಯ ಅಮೆರಿಕಕ್ಕೆ ಮರಳುತ್ತಿವೆ.

ಹವಾಮಾನ ಬದಲಾವಣೆ ಕಾರಣ: ಹವಾಮಾನ ಬದಲಾವಣೆಗಳಿಂದಾಗಿ ವಾಂಪೈರ್​ ಬಾವಲಿಗಳು ಉತ್ತರ ದಿಕ್ಕಿನೆಡೆ ಸಂಚರಿಸುತ್ತಿರುವುದು ಕಂಡುಬಂದಿದೆ. ಇದು ಅನೇಕ ಲ್ಯಾಟಿನ್​ ಅಮೆರಿಕನ್​ ದೇಶಗಳಲ್ಲಿ ರೇಬೀಸ್ ಪ್ರಕರಣಗಳು ಹೆಚ್ಚಾಗುವುದಕ್ಕೆ ಕಾರಣವಾಗಲಿದೆ ಎಂದು ವರ್ಜೀನಿಯಾ ಟೆಕ್ಸ್​ ಟ್ರಾನ್ಸ್‌ಲಷನ್​ ಬಯೋಲಜಿ, ಮೆಡಿಸಿನ್​ ಮತ್ತು ಹೆಲ್ತ್​​ ಗ್ರಾಜುಯೇಟ್​ ಪ್ರೋಗ್ರಾಂನ ಡಾಕ್ಟರಲ್​ ವಿದ್ಯಾರ್ಥಿ ಪೈಗೆ ವ್ಯಾನ್ ಡಿ ವೂರ್ಸ್ಟ್ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಅಧ್ಯಯನ ವರದಿಯನ್ನು ಜರ್ನಲ್​ ಎಕೊಗ್ರಾಫಿಯಲ್ಲಿ ಪ್ರಕಟಿಸಲಾಗಿದೆ. ಭಾರಿ ಚಳಿ ಮತ್ತು ಹೆಚ್ಚು ಬೇಸಿಗೆ ಋತುಮಾನದಂತಹ ನಿರಂತರ ತಾಪಮಾನ ಬದಲಾವಣೆಗಳಿಂದ ಪಾರಾಗಲು ವಾಂಪೈರ್​ ಬಾವಲಿಗಳು ತಮ್ಮ ಸ್ಥಳವನ್ನು ಹೆಚ್ಚು ಸ್ಥಿರವಾಗಿರುವ ತಾಪಮಾನದ ಪ್ರದೇಶಗಳತ್ತ ವರ್ಗಾಯಿಸುತ್ತಿವೆ. ಈ ರೀತಿ ಸ್ಥಳ ಬದಲಾವಣೆ ಮಾಡುವುದರಿಂದ ಇವು ರೇಬೀಸ್​ ರೋಗ ಹಬ್ಬಿಸಲು ಕಾರಣವಾಗಬಹುದು. ಬಾವಲಿಗಳ ಗುರುತು ಪತ್ತೆಗಾಗಿ ತಜ್ಞರ ತಂಡ ಕೊಲಂಬಿಯಾದೆಲ್ಲೆಡೆ ಸಂಚರಿಸಿ, 70ಕ್ಕೂ ಹೆಚ್ಚು ಬಾವಲಿಗಳ ತಳಿ ಮಾದರಿ ಸಂಗ್ರಹಿಸಿದೆ.

ಅಧ್ಯಯನದ ಫಲಿತಾಂಶ: ಕಳೆದೊಂದು ಶತಮಾನದಿಂದ ವಾಂಪೈರ್​ ಬಾವಲಿಗಳು ಡೆಸ್ಮೋಡಸ್​ ರೋಟಂಡಸ್​​ನ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳ ಮೇಲೆ ಕೇಂದ್ರೀಕರಿಸಿವೆ. ವಿಶ್ಲೇಷಣೆಯಲ್ಲಿ ಹವಾಮಾನ ಬದಲಾವಣೆ ಮತ್ತು ಉತ್ತರ ಅಮೆರಿಕದಲ್ಲಿ ಡಿ ರೋಟಂಡನ್​ ವಿಸ್ತರಣೆಯಲ್ಲಿ ಸಂಬಂಧಗಳ ಸಕಾರಾತ್ಮಕತೆ ತಿಳಿದುಬಂದಿದೆ.

ಇದಕ್ಕಿಂತ ಹೆಚ್ಚಾಗಿ ಸಂಶೋಧಕರು 120 ವರ್ಷಗಳ ಅಧ್ಯಯನದ ಅವಧಿಯ ಕಳೆದ 50 ವರ್ಷಗಳಲ್ಲಿ ಡಿ ರೋಟಂಡಸ್‌ನಿಂದ ಜಾನುವಾರುಗಳಿಗೆ ರೇಬೀಸ್ ವೈರಸ್ ಪ್ರಸರಣದಲ್ಲಿ ಭೂಖಂಡದ ಮಟ್ಟದ ಏರಿಕೆ ನಡುವಿನ ಸಂಬಂಧವನ್ನು ಈ ಫಲಿತಾಂಶಗಳು ಸ್ಪಷ್ಟಪಡಿಸಿವೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಚೀನಾದಲ್ಲಿ ಮತ್ತೊಂದು ನಿಗೂಢ ವೈರಸ್: ನ್ಯುಮೋನಿಯಾ ರೋಗಲಕ್ಷಣಗಳಿಂದ ಬಳಲುತ್ತಿರುವ ಶಾಲಾ ಮಕ್ಕಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.