ETV Bharat / international

ಚೀನಾದಲ್ಲಿ ಮತ್ತೊಂದು ನಿಗೂಢ ವೈರಸ್: ನ್ಯುಮೋನಿಯಾ ರೋಗಲಕ್ಷಣಗಳಿಂದ ಬಳಲುತ್ತಿರುವ ಶಾಲಾ ಮಕ್ಕಳು

author img

By ETV Bharat Karnataka Team

Published : Nov 23, 2023, 9:33 AM IST

Mystery Pneumonia Sweeps Chinese Schools: ಚೀನಾ ದೇಶದಲ್ಲಿ ಮಕ್ಕಳು ನ್ಯುಮೋನಿಯಾ ರೋಗಲಕ್ಷಣಗಳಿಂದ ಬಳಲುತ್ತಿದ್ದಾರೆ. ಬುಧವಾರ ನೂರಾರು ಮಕ್ಕಳನ್ನು ಬೀಜಿಂಗ್ ಮತ್ತು ಲಿಯಾನಿಂಗ್ ಪ್ರದೇಶಗಳಲ್ಲಿರುವ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

Mystery Pneumonia Sweeps  Pneumonia Sweeps Through Chinese Schools  COVID 19 pandemic  Hospitals in Beijing and Liaoning  ಮತ್ತೊಂದು ನಿಗೂಢ ವೈರಸ್  ನ್ಯುಮೋನಿಯಾ ರೋಗಲಕ್ಷಣಗಳಿಂದ ಬಳಲುತ್ತಿರುವ ಚೀನಾ  ರೋಗಲಕ್ಷಣಗಳಿಂದ ಬಳಲುತ್ತಿರುವ ಚೀನಾದ ಮಕ್ಕಳು  ನ್ಯುಮೋನಿಯಾ ರೋಗಲಕ್ಷಣ  ಬೀಜಿಂಗ್ ಮತ್ತು ಲಿಯಾನಿಂಗ್ ಪ್ರದೇಶ  ವಿಶ್ವಾದ್ಯಂತ ಲಕ್ಷಾಂತರ ಜನ  ಕೋವಿಡ್ 19 ವೈರಸ್  ಮಹಾಮಾರಿ ಬಿಟ್ಟ ದುರಂತ  ಶ್ವಾಸಕೋಶದ ಸೋಂಕು  ಉಸಿರಾಟದ ತೊಂದರೆ
ಮತ್ತೊಂದು ನಿಗೂಢ ವೈರಸ್

ಬೀಜಿಂಗ್​(ಚೀನಾ): ವಿಶ್ವಾದ್ಯಂತ ಲಕ್ಷಾಂತರ ಜನರನ್ನು ಆಪೋಶನ ಪಡೆದಿರುವ ಕೋವಿಡ್ 19 ವೈರಸ್ ಚೀನಾದಿಂದ ಹರಡಿರುವುದು ಗೊತ್ತೇ ಇದೆ. ಈ ಮಹಾಮಾರಿ ಸೃಷ್ಟಿಸಿದ ದುರಂತದಿಂದ ಚೇತರಿಸಿಕೊಳ್ಳುತ್ತಿರುವ ದೇಶಕ್ಕೆ ಮತ್ತೊಂದು ಮಾರಕ ರೋಗಬಾಧೆ ಕಾಡುತ್ತಿದೆಯೇ ಎಂಬು ಅನುಮಾನ ಮೂಡಿದೆ. ಶಾಲೆಗೆ ಹೋಗುವ ಅನೇಕ ಮಕ್ಕಳು ನ್ಯುಮೋನಿಯಾದ ಲಕ್ಷಣಗಳಿಂದ ಬಳಲುತ್ತಿದ್ದಾರೆ. ಪ್ರಪಂಚಾದ್ಯಂತ ಹರಡುವ ರೋಗಗಳ ಬಗ್ಗೆ ನಿಗಾ ವಹಿಸುವ ಪ್ರೊಮೆಡ್ ಸಂಸ್ಥೆಯು ಈ ಬಗ್ಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಬೀಜಿಂಗ್ ಮತ್ತು ಲಿಯಾನಿಂಗ್ ಪ್ರದೇಶಗಳಲ್ಲಿನ ಆಸ್ಪತ್ರೆಗಳು ಬುಧವಾರ ಬೆಳಿಗ್ಗೆ ಮಕ್ಕಳಿಂದ ತುಂಬಿದ್ದವು. ಶ್ವಾಸಕೋಶದ ಸೋಂಕು, ಉಸಿರಾಟದ ತೊಂದರೆ, ಜ್ವರ ಮುಂತಾದ ಲಕ್ಷಣಗಳಿರುವ ಮಕ್ಕಳನ್ನು ದಾಖಲಿಸಲಾಗಿತ್ತು. ಶಂಕಿತ ನ್ಯುಮೋನಿಯಾ ಹರಡುವಿಕೆ ತಡೆಯಲು ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುತ್ತಿದೆ ಎಂದು ಪ್ರೊಮೆಡ್ ಕಂಪನಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

  • ⚠️UNDIAGNOSED PNEUMONIA OUTBREAK—An emerging large outbreak of pneumonia in China, with pediatric hospitals in Beijing, Liaoning overwhelmed with sick children, & many schools suspended. Beijing Children's Hospital overflowing. 🧵on what we know so far:pic.twitter.com/hmgsQO4NEZ

    — Eric Feigl-Ding (@DrEricDing) November 22, 2023 " class="align-text-top noRightClick twitterSection" data=" ">

ನೂರಾರು ಮಕ್ಕಳು ಏಕಕಾಲದಲ್ಲಿ ಅಸ್ವಸ್ಥರಾಗುವುದು ಅಸಹಜ ಬೆಳವಣಿಗೆ ಎಂದು ಹೇಳಲಾಗಿದ್ದು, ಈ ರೋಗ ಯಾವಾಗ ಮತ್ತು ಹೇಗೆ ಹುಟ್ಟಿಕೊಂಡಿತು ಎಂಬುದು ಸ್ಪಷ್ಟವಾಗಿಲ್ಲ. ಸೋಂಕಿನಿಂದ ಹಲವು ಶಿಕ್ಷಕರೂ ಬಳಲುತ್ತಿರುವುದು ಬೆಳಕಿಗೆ ಬಂದಿದೆ. ಇದು ಕೊರೊನಾದಂತಹ ಮತ್ತೊಂದು ಸಾಂಕ್ರಾಮಿಕವಾಗುವ ಸಾಧ್ಯತೆಯ ಬಗ್ಗೆ ಸದ್ಯಕ್ಕೆ ಏನೂ ಹೇಳಲಾಗದು ಎಂದು ಪ್ರೊಮೆಡ್ ಪ್ರತಿನಿಧಿಗಳು ಹೇಳಿದ್ದಾರೆ.

ಈ ವರ್ಷಾರಂಭದಲ್ಲಿ ಚೀನಾ ಕೊರೊನಾ ನಿಯಮಗಳನ್ನು ತೆಗೆದುಹಾಕಿತು. ಅಂದಿನಿಂದ ಆಗಾಗ್ಗೆ ಕೆಲವು ಸೋಂಕುಗಳು ಹರಡುತ್ತಿವೆ ಎಂದು ಅವರು ತಿಳಿಸಿದರು. ಎರಡು ದಿನಗಳ ಹಿಂದೆ ಮಕ್ಕಳು ಮತ್ತು ಅವರ ಕುಟುಂಬ ಸದಸ್ಯರು ಆಸ್ಪತ್ರೆಗಳಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ವಿಡಿಯೋ ವೈರಲ್ ಆಗಿತ್ತು.

ರೋಗದ ಸಂಪೂರ್ಣ ವಿವರ ನೀಡಿ: ಉತ್ತರ ಚೀನಾದಲ್ಲಿ ಗುಣಪಡಿಸಲಾಗದ ನ್ಯುಮೋನಿಯಾ ರೋಗಲಕ್ಷಣಗಳೊಂದಿಗೆ ಆಸ್ಪತ್ರೆಗಳಿಗೆ ದಾಖಲಾಗುವ ಪ್ರಕರಣಗಳಿಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರತಿಕ್ರಿಯಿಸಿದೆ. ಈ ಬಗ್ಗೆ ಸಂಪೂರ್ಣ ವಿವರ ನೀಡುವಂತೆ ಚೀನಾವನ್ನು ಕೋರಿದೆ. ರೋಗ ಲಕ್ಷಣಗಳು ಮತ್ತು ಮಕ್ಕಳು ಯಾವ ಪ್ರದೇಶಗಳಲ್ಲಿ ಬಳಲುತ್ತಿದ್ದಾರೆ ಎಂಬ ವಿವರ ನೀಡಬೇಕು. ರೋಗ ಹರಡುವುದನ್ನು ತಪ್ಪಿಸಲು ಚೀನಾದ ಜನರಿಗೆ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ.

ಇದನ್ನೂ ಓದಿ: ಒಡಿಶಾದಲ್ಲಿ ಬ್ರಾಹ್ಮಣರಿಗೆ ಮೀಸಲಿದ್ದ ಸ್ಮಶಾನ: ಜನರ ವಿರೋಧದ ಬಳಿಕ 'ಸ್ವರ್ಗದ್ವಾರ' ವಾಗಿ ಬದಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.