ETV Bharat / sukhibhava

ಲಸಿಕೆಯಿಂದ ಕೋವಿಡ್​ ಸೋಂಕು ಅಪಾಯ ಕಡಿಮೆ

author img

By

Published : Mar 24, 2023, 1:30 PM IST

ಕೋವಿಡ್​ ಸೋಂಕಿನ ಪರಿಣಾಮವನ್ನು ಕಡಿಮೆ ಮಾಡುವಲ್ಲಿ ಲಸಿಕೆ ಪ್ರಮುಖ ಪಾತ್ರವಹಿಸಿದೆ ಎಂಬುದನ್ನು ಅಧ್ಯಯನ ತಿಳಿಸಿದೆ.

the-vaccine-reduces-the-risk-of-covid-infection
the-vaccine-reduces-the-risk-of-covid-infection

ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕಿನ​ ಅಪಾಯ ಕಡಿಮೆ ಆಗುತ್ತದೆ. ಲಸಿಕೆ​ ಪಡೆದ ಬಳಿಕ ವ್ಯಕ್ತಿಯೊಬ್ಬನ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ ಎಂದು ಸಂಶೋಧನೆ ವಿವರಿಸಿದೆ. ಸ್ಟ್ಯಾನ್‌ಫೋರ್ಡ್​ ಯೂನಿವರ್ಸಿಟಿ ಸಂಶೋಧಕರು ಈ ಕುರಿತು ಅಧ್ಯಯನ ನಡೆಸಿದ್ದಾರೆ. ಅಧ್ಯಯನದಲ್ಲಿ ಪೈಜರ್​, ಬಯೋಟೆಕ್​ ಕೋವಿಡ್​ ಲಸಿಕೆ ಪಡೆದವರಲ್ಲಿ ಪ್ರತಿರಕ್ಷಣಾ ಕೋಶ ಹೆಚ್ಚಿದೆ. ಲಸಿಕೆಯ ನಂತರದಲ್ಲಿ ಸಾರ್ಸ್​- ಕೋವ್​-2 ಸೋಂಕು ಅಧ್ಯಯನ ನಡೆಸಿದಾಗ ಅದರ ತೀವ್ರತೆಯ ಮಟ್ಟ ಕಡಿಮೆಯಾಗಿದೆ ಎಂದು ಅಧ್ಯಯನ ಹೇಳುತ್ತದೆ.

ಪ್ರತಿರಕ್ಷಣೆ ಹಾನಿ ತಡೆಯುತ್ತದೆ: ಕೋವಿಡ್​ ಲಸಿಕೆ ಪಡೆಯದವರಿಗಿಂತ ಪಡೆದವರಲ್ಲಿ ಸಾರ್ಸ್​-ಕೋವ್​-2 ಲಕ್ಷಣಗಳ ಪ್ರಭಾವ ಕಡಿಮೆ ಇದೆ. ಅಲ್ಲದೇ ಸಾರ್ಸ್​ ಕೋವ್​- 2 ಸ್ಪೈಕ್ ಪ್ರೋಟೀನ್ ಅನ್ನು ಗುರಿಯಾಗಿಸುವ ಪ್ರತಿರಕ್ಷಣಾ ಕೋಶದಲ್ಲೂ ಸುಧಾರಣೆ ಕಾಣಬಹುದಾಗಿದೆ. ಸಾರ್ಸ್​​-ಕೋವ್​-2 ಸೋಂಕಿನಿಂದ ಚೇತರಿಕೆ ಕಂಡು ಲಸಿಕೆ ಪಡೆದವರು, ಲಸಿಕೆ ಪಡೆಯದವರಿಗಿಂತ ಹೆಚ್ಚು ರಕ್ಷಣೆಗೆ ಒಳಗಾಗುತ್ತಾರೆ. ಸೋಂಕು ನಮ್ಮ ಪ್ರಮುಖ ಪ್ರತಿರಕ್ಷಣೆ ಮೇಲೆ ಹಾನಿ ಮಾಡುವುದನ್ನು ಲಸಿಕೆ ತಡೆಯುತ್ತದೆ ಎಂಬುದನ್ನು ಫಲಿತಾಂಶ ತಿಳಿಸಿದೆ. ಈ ಸಂಬಂಧ ಜರ್ನಲ್​ ಇಮ್ಯುನಿಟಿಯಲ್ಲಿ ಕೂಡ ಪ್ರಕಟವಾಗಿದೆ.

ಸ್ಟ್ಯಾನ್‌ಫೋರ್ಡ್ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಮೈಕ್ರೋಬಯಾಲಜಿ ಮತ್ತು ಇಮ್ಯುನೊಲಾಜಿಯ ಪ್ರಾಧ್ಯಾಪಕರಾದ ಮಾರ್ಕ್ ಎಂ ಡೇವಿಸ್ ನೇತೃತ್ವದಲ್ಲಿ ಈ ಸಂಶೋಧನೆ ನಡೆಸಲಾಗಿದೆ. ಸಂಶೋಧಕರು CD4+ T ಜೀವಕೋಶಗಳು ಮತ್ತು CD8+ T ಜೀವಕೋಶಗಳು SARS-CoV-2 ಸೋಂಕು ಮತ್ತು ಲಸಿಕೆಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ವಿಶ್ಲೇಷಿಸಲು ಅತ್ಯಂತ ಸೂಕ್ಷ್ಮವಾದ ಸಾಧನವನ್ನು ವಿನ್ಯಾಸಗೊಳಿಸಿದ್ದಾರೆ.

ಟಿ.ಕೋಶದ ಮೇಲೆ ಅಧ್ಯಯನ: ಈ ಜೀವಕೋಶಗಳು ವೈರಸ್‌ಗೆ ಪ್ರತಿರಕ್ಷಣಾ ವ್ಯವಸ್ಥೆಯ ಪ್ರತಿಕ್ರಿಯೆಯನ್ನು ಬಲಗೊಳಿಸುತ್ತದೆ. ಜೊತೆಗೆ ಸೋಂಕಿಗೆ ಒಳಗಾದ ಇತರ ಜೀವಕೋಶಗಳನ್ನು ಕೊಲ್ಲುತ್ತವೆ. ಅಲ್ಲದೇ ಕೋವಿಡ್ ಅನ್ನು ಮತ್ತೆ ಬಾರದಂತೆ ತಡೆಯಲು ಸಹಾಯ ಮಾಡುತ್ತದೆ. ಅಧ್ಯಯನಕ್ಕೆ ಟಿ.ಕೋಶಗಳನ್ನು ಪತ್ತೆ ಮಾಡಿ ಅದರ ಮೇಲೆ ವೈರಸ್​ ಸ್ಪೈಕ್​​ ಪ್ರೋಟಿನ್​ ದಾಳಿ ಅನುಸಾರ ಸಾಧನವನ್ನು ವಿನ್ಯಾಸ ಮಾಡಲಾಗಿದೆ. ಈ ವೇಳೆ ಲಸಿಕೆಗಳು ಯಾವ ರೀತಿ ಪ್ರತಿ ರಕ್ಷಣಾ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ನಡೆಸಲಾಗಿದೆ.

ಈ ಅಧ್ಯಯನಕ್ಕೆ ಮೂರು ಸ್ವಯಂಪ್ರೇರಿತ ಗುಂಪುಗಳ ಮೇಲೆ ಸಂಶೋಧನೆ ನಡೆಸಲಾಗಿದೆ. ಇದರಲ್ಲಿ ಒಂದು ಗುಂಪು ಸಾರ್ಸ್​ ಕೋವ್​- 2 ಸೋಂಕಿಗೆ ತುತ್ತಾಗದ ಎರಡು ಡೋಸ್​ ಲಸಿಕೆ ಪಡೆದಿದೆ. ಎರಡನೇ ಗುಂಪು ಈ ಹಿಂದೆ ಸಾರ್ಸ್​- ಕೋವ್​-2 ಸೋಂಕಿಗೆ ತುತ್ತಾಗಿ ಬಳಿಕ ಫೈಜರ್​ ಬಯೋಟೆಕ್​ ಕೋವಿಡ್​ ಲಸಿಕೆ ಪಡೆದಿದೆ. ಮೂರನೇ ಗುಂಪು ಯಾವುದೇ ಲಸಿಕೆಯನ್ನು ಪಡೆದಿಲ್ಲ. ಲಸಿಕೆಗೆ ಮೊದಲು ಸಾರ್ಸ್​ ಕೋವ್​-2 ಸೋಂಕಿಗೆ ಒಳಗಾದ ಜನರಲ್ಲಿ ಸ್ಪೈಕ್-ನಿರ್ದಿಷ್ಟ CD8+ T ಕೋಶಗಳನ್ನು ಗಣನೀಯವಾಗಿ ಕಡಿಮೆ ಮಟ್ಟದಲ್ಲಿ ಉತ್ಪಾದಿಸಿದೆ ಎಂದು ಅಧ್ಯಯನ ತಿಳಿಸಿದೆ.

ಇದನ್ನೂ ಓದಿ: ಓಮ್ರಿಕಾನ್​ XBB 1.5 ತಳಿಯು ಹೆಚ್ಚು ರೂಪಾಂತರ ಹೊಂದಿದ್ದು, ಬಲು ಬೇಗ ಹರಡುತ್ತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.