ETV Bharat / sukhibhava

ಅತಿ ರುಚಿಕರವಾದ ಆಹಾರಗಳ ಪರಿಣಾಮಗಳೇನು?: ಹೊಸ ಅಧ್ಯಯನ ಹೇಳುವುದಿಷ್ಟು!

author img

By

Published : Jan 31, 2023, 5:58 PM IST

ಉತ್ತಮ ಆರೋಗ್ಯಕ್ಕೆ ಏನು ಹಾಗೂ ಎಷ್ಟನ್ನು ತಿಂದರೆ ಉತ್ತಮ ಎಂಬ ಬಗ್ಗೆ ನಿರಂತರ ಅಧ್ಯಯನಗಳು ನಡೆಯುತ್ತಲೇ ಇವೆ. - ಈಗ ಇಂತಹುದೇ ಮತ್ತೊಂದು ಅಧ್ಯಯನ ಮಾಡಲಾಗುತ್ತಿದೆ.

Study reveals impact of hyper-palatable foods
ಅತಿ ರುಚಿಕರವಾದ ಆಹಾರಗಳ ಪರಿಣಾಮಗಳೇನು:ಈ ಬಗ್ಗೆ ಹೊಸ ಅಧ್ಯಯನ ಮಾಹಿತಿ ಇಲ್ಲಿದೆ ಓದಿ..

ಕಾನ್ಸಾಸ್(ಅಮೆರಿಕ): 2023ರ ಹೊಸ ವರ್ಷಕ್ಕೆ ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂಬ ನಿರ್ಣಯ ಮಾಡಿದ್ದರೆ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ (ಎನ್ಐಎಚ್) ಮತ್ತು ಕಾನ್ಸಾಸ್ ವಿಶ್ವವಿದ್ಯಾಲಯದ ತಜ್ಞರ ಸಂಶೋಧನೆಗಳು ನೀವು ಸೇವಿಸುವ ಆಹಾರದ ಬಗ್ಗೆ ಹೆಚ್ಚು ನಿಖರವಾದ ಸೂಚನೆಗಳನ್ನು ನೀಡಬಹುದು. ಹೇಗೆ ಎಂದು ಯೋಚಿಸುತ್ತಿದ್ದೀರಾ ಹಿಂದಿನ ಅಧ್ಯಯನಗಳ ಅಂಕಿ- ಅಂಶಗಳನ್ನು ಬಳಸಿಕೊಂಡು ಎಷ್ಟು ಕ್ಯಾಲೊರಿಗಳನ್ನು ಸೇವಿಸಲಾಯಿತು ಎಂಬುದನ್ನು ನಿರ್ಧರಿಸಲು, ಊಟದ ಯಾವ ಅಂಶಗಳು ನಿರ್ಣಾಯಕವಾಗಿವೆ ಎಂಬುದನ್ನು ಗುರುತಿಸಲು ಸಂಶೋಧಕರು ಈ ಪ್ರಯತ್ನ ಮಾಡಿದ್ದಾರೆ.

ಸಂಶೋಧಕರು ಪ್ರಮುಖವಾಗಿ ನಮ್ಮ ಊಟದ ಮೂರು ಅಂಶಗಳನ್ನು ಪತ್ತೆ ಹಚ್ಚಿದ್ದಾರೆ. ಊಟದ ಶಕ್ತಿಯ ಸಾಂದ್ರತೆ (ಅಂದರೆ, ಪ್ರತಿ ಗ್ರಾಂ ಆಹಾರಕ್ಕೆ ಲಭ್ಯವಾಗುವ ಕ್ಯಾಲೊರಿಗಳು), ಅತಿ ರುಚಿಕರ ಆಹಾರದ ಪ್ರಮಾಣ, ಮತ್ತು ಊಟವನ್ನು ಎಷ್ಟು ವೇಗವಾಗಿ ಸೇವಿಸಲಾಗುತ್ತದೆ ಎಂಬುದನ್ನು ಈ ಅಧ್ಯಯನದ ಮೂಲಕ ಕಂಡುಕೊಂಡಿದ್ದಾರೆ. ನಾಲ್ಕು ವಿಭಿನ್ನ ಆಹಾರ ಪದ್ಧತಿಗಳಲ್ಲಿ ಹೆಚ್ಚಿನ ಕ್ಯಾಲೋರಿ ಸೇವನೆ ಮಾಡುವುದು ಆರೋಗ್ಯಕ್ಕೆ ಸ್ಥಿರವಾದ ಕೊಡುಗೆ ನೀಡುತ್ತದೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಊಟದಲ್ಲಿ ಪ್ರೋಟೀನ್ ಸಂಯೋಜನೆಯು ಕ್ಯಾಲೋರಿ ಹೆಚ್ಚಾಗಲು ಕೊಡುಗೆ ನೀಡುತ್ತದೆ, ಆದರೆ ಅದರ ಪರಿಣಾಮವು ಕಡಿಮೆ ಸ್ಥಿರವಾಗಿತ್ತು ಎಂಬುದು ಅಧ್ಯಯನದ ವೇಳೆ ತಿಳಿದು ಬಂದಿದೆ.

ಏನು ಹೇಳುತ್ತೆ ಹೊಸ ಅಧ್ಯಯನ: 2019 ರಲ್ಲಿ ಕೆಯು ವಿಜ್ಞಾನಿ ಟೆರಾ ಫಾಝಿನೊ ಅವರು ಮೊದಲ ಬಾರಿಗೆ ಈ ಕುರಿತು ವಿವರಿಸಿದ್ದಾರೆ, ಅತಿ ರುಚಿಕರ ಆಹಾರಗಳು ಕೊಬ್ಬು, ಸಕ್ಕರೆ ಸೋಡಿಯಂ ಮತ್ತು ಕಾರ್ಬೋಹೈಡ್ರೇಟ್‌ಗಳ ನಿರ್ದಿಷ್ಟ ಸಂಯೋಜನೆಯನ್ನು ಹೊಂದಿವೆ. ಉದಾಹರಣೆಗೆ ಆಲೂಗಡ್ಡೆ ಚಿಪ್ಸ್​ ಬಗ್ಗೆ ಯೋಚಿಸಿದರೆ, ಅವು ತಿನ್ನಲು ರುಚಿಕರವಾಗಿತ್ತದೆ ಮತ್ತು ಒಮ್ಮೆ ತಿನ್ನಲು ಪ್ರಾರಂಭಿಸಿದರೆ ತಿನ್ನುವುದನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಈ ಆಧಾರದ ಮೇಲೆ ಒಬ್ಬ ವ್ಯಕ್ತಿಯು ಊಟದಲ್ಲಿ ಎಷ್ಟು ಕ್ಯಾಲೊರಿಗಳನ್ನು ಸೇವಿಸುತ್ತಾನೆ. ಅದು ಹೇಗೆ ಆತನ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ಕಂಡುಕೊಳ್ಳುವುದಕ್ಕೋಸ್ಕರ ಈ ಅಧ್ಯಯನ ಎಂದು ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಫಾಝಿನೊ ಹೇಳಿದರು. ಕೋಫ್ರಿನ್ ಲೋಗನ್ ಸೆಂಟರ್ ಫಾರ್ ಅಡಿಕ್ಷನ್ ರಿಸರ್ಚ್ ಅಂಡ್ ಟ್ರೀಟ್‌ಮೆಂಟ್‌ನ ಸಹಾಯಕ ನಿರ್ದೇಶಕರಾಗಿ ಫಾಝಿನೋ ಕಾರ್ಯನಿರ್ವಹಿಸುತ್ತಿದ್ದಾರೆ.

ಎನ್‌ಐಎಚ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಯಾಬಿಟಿಸ್ ಅಂಡ್ ಡೈಜೆಸ್ಟಿವ್ ಮತ್ತು ಕಿಡ್ನಿ ಡಿಸೀಸ್‌ನ ಸಂಶೋಧಕರೊಂದಿಗೆ ಫಾಝಿನೊ ನೇಚರ್ ಫುಡ್ ಜರ್ನಲ್‌ನಲ್ಲಿ ಈ ಕುರಿತು ಅವರು ಲೇಖನವೊಂದನ್ನು ಅವರು ಬರೆದಿದ್ದಾರೆ. ಹೈಪರ್-ಪ್ಯಾಲಟಬಿಲಿಟಿ(ಅತಿ ರುಚಿಕರ ಆಹಾರ) ನಾಲ್ಕು ಆಹಾರ ಪದ್ಧತಿಗಳಲ್ಲಿ ಸೇವಿಸುವ ಆಹಾರದ ಶಕ್ತಿಯ ಪ್ರಮಾಣವನ್ನು ಹೆಚ್ಚಿಸಿದೆ ಅಂತಾರೆ ಸಂಶೋಧಕರು. ಕಡಿಮೆ ಕಾರ್ಬೋಹೈಡ್ರೇಟ್, ಕಡಿಮೆ ಕೊಬ್ಬು, ಸಂಸ್ಕರಿಸದ ಆಹಾರಗಳನ್ನು ಆಧರಿಸಿದ ಆಹಾರ ಮತ್ತು ಅಲ್ಟ್ರಾ-ಸಂಸ್ಕರಿಸಿದ ಆಹಾರಗಳನ್ನು ಸೇವನೆ ಆಧರಿಸಿ, ತೂಕ ನಿರ್ವಹಣೆಗಾಗಿ ಆಹಾರ ಶಿಫಾರಸುಗಳನ್ನು ಮಾಡಲಾಗುತ್ತದೆ.

ಕೆಲವು ಆಹಾರಗಳು ಜನರಿಗೆ ಹಸಿವಾಗದಂತೆ ಕಡಿಮೆ ಕ್ಯಾಲೊರಿಗಳನ್ನು ತಿನ್ನಲು ಹೇಗೆ ಕಾರಣವಾಗುತ್ತವೆ ಎಂಬುದನ್ನು ಈ ಅಧ್ಯಯನ ನೆರವಾಗಿದೆ. ಅತಿಯಾಗಿ ತಿನ್ನಲು ಕಾರಣವಾಗುವ ಕುಕೀಸ್ ಅಥವಾ ಚೀಸ್ ನಂತಹ ಆಹಾರಗಳನ್ನು ಸೇವಿಸದಂತೆ ಜನರಿಗೆ ಸಾಮಾನ್ಯವಾಗಿ ವೈದ್ಯರು ಸಲಹೆ ನೀಡುತ್ತಾರೆ. ಬದಲಾಗಿ, ಕಡಿಮೆ ಶಕ್ತಿಯ ಸಾಂದ್ರತೆಯ ಆಹಾರಗಳಾದ ಪಾಲಕ, ಕ್ಯಾರೆಟ್ ಮತ್ತು ಸೇಬು ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವಂತೆ ಸಲಹೆ ನೀಡಲಾಗುತ್ತದೆ. ಆದರೆ, ಅತಿ ರುಚಿಕರವಾದ ಆಹಾರಗಳನ್ನು ಅವುಗಳ ಬಗ್ಗೆ ತಿಳಿಯದೇ ಸೇವಿಸುತ್ತಿರಲೂಬಹುದು, ಆಗ ಇದು ಅಡ್ಡ ಪರಿಣಾಮಗಳಿಗೂ ಕಾರಣವಾಗಬಹುದು ಎನ್ನುವುದು ಸಂಶೋಧಕರ ಮಾತಾಗಿದೆ.

ದೇಹ ತೂಕದಲ್ಲಿ ಹೈಪರ್ - ಪ್ಯಾಲಟಬಿಲಿಟಿ ಪ್ರಾಮುಖ ಪಾತ್ರವನ್ನು ವಹಿಸುತ್ತದೆ: ಅತಿ ರುಚಿಕರವಾದ ಆಹಾರಗಳಲ್ಲಿ ಕೆಲವೊಮ್ಮೆ ಶಕ್ತಿಯ ಸಾಂದ್ರತೆ ಹೆಚ್ಚಾಗಿರುತ್ತದೆ. ಹೊಸ ಅಧ್ಯಯನವು ಈ ಅತಿ ರುಚಿಕರವಾದ ಆಹಾರಗಳನ್ನು ಸೇವನೆ ಮಾಡುವುದರಿಂದ ಹೆಚ್ಚಿನ ಕ್ಯಾಲೋರಿ ದೇಹಕ್ಕೆ ಸಿಗಬಹುದು ಎಂದು ಸೂಚಿಸುತ್ತದೆ. ಜನರು ಮಾಡುವ ಆಹಾರದ ಆಯ್ಕೆಗಳಲ್ಲಿ ಮತ್ತು ಅವರ ದೇಹ ತೂಕದಲ್ಲಿ ಹೈಪರ್-ಪ್ಯಾಲಟಬಿಲಿಟಿ(ಅತಿ ರುಚಿಕರ ಆಹಾರ) ಪ್ರಾಮುಖ ಪಾತ್ರವನ್ನು ವಹಿಸುತ್ತದೆ ಎಂದು ತಿಳಿಯಲು ಸಂಶೋಧನೆಗಳು ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಂಡಿವೆ ಎಂದು ಫಾಝಿನೊ ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ: ಸಿರಿಧಾನ್ಯ ಆಧಾರಿತ ಉತ್ಪನ್ನಗಳ ಆರೋಗ್ಯ ಪ್ರಯೋಜನಕಾರಿತ್ವ ಮೌಲ್ಯೀಕರಿಸಲು ವಿಜ್ಞಾನಿಗಳ ಕಾರ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.