ETV Bharat / sukhibhava

ಸಿರಿಧಾನ್ಯ ಆಧಾರಿತ ಉತ್ಪನ್ನಗಳ ಆರೋಗ್ಯ ಪ್ರಯೋಜನಕಾರಿತ್ವ ಮೌಲ್ಯೀಕರಿಸಲು ವಿಜ್ಞಾನಿಗಳ ಕಾರ್ಯ

author img

By

Published : Jan 31, 2023, 4:34 PM IST

ಸಿರಿಧಾನ್ಯಗಳ ಆರೋಗ್ಯಕರ ಲಾಭದ ಪರಿಣಾಮಕಾರಿತ್ವ ಸಾಬೀತಿಗೆ ಮುಂದಾದ ವಿಜ್ಞಾನಿಗಳು - ಸಿರಿಧಾನ್ಯ ಆಧಾರಿತ ಶೆಲ್ಫ್​ ಜೀವಿತಾವಧಿ ಹೆಚ್ಚಳ ಸಂಬಂಧ ಅಧ್ಯಯನ - ಜಾಗತಿಕವಾಗಿ ಅಧಿಕ ಪ್ರಮಾಣದ ಸಿರಿಧಾನ್ಯ ಉತ್ಪಾದನೆ ಮಾಡುತ್ತಿರುವ ಭಾರತ

ಸಿರಿಧಾನ್ಯ ಆಧಾರಿತ ಉತ್ಪನ್ನಗಳ ಆರೋಗ್ಯ ಪ್ರಯೋಜನಕಾರಿತ್ವ ಮೌಲ್ಯೀಕರಿಸಲು ವಿಜ್ಞಾನಿಗಳ ಕಾರ್ಯ
scientists-work-to-validate-the-health-benefits-of-cereal-based-products

ನವದೆಹಲಿ: ಭಾರತದ ಸಿರಿ ಧಾನ್ಯಗಳಿಗೆ ಜಾಗತಿಕ ವೇದಿಕೆ ಸಿಕ್ಕ ಬಳಿಕ, ವಿಜ್ಞಾನಿಗಳು ಪೌಷ್ಟಿಕಾಂಶದ ಮೌಲ್ಯದಲ್ಲಿ ರಾಜಿ ಮಾಡಿಕೊಳ್ಳದೇ ಒರಟಾದ ಧಾನ್ಯಗಳಿಂದ ತಯಾರಿಸಿದ ಉತ್ಪನ್ನಗಳ ತೊಗಟೆಯ (ಶೆಲ್ಫ್​) ಜೀವಿತಾವಧಿ ಹೆಚ್ಚಿಸಲು ಕೆಲಸ ಮಾಡುತ್ತಿದ್ದಾರೆ. ಮೈಸೂರಿನ ಮೂಲಕ ಸಿಎಸ್​ಐಆರ್​​ - ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನ ಸಂಸ್ಥೆ ವಿಜ್ಞಾನಿಗಳು ಕೂಡ ಈ ಸಂಬಂಧ ಸಂಶೋಧನೆಗೆ ಮುಂದಾಗಿದ್ದಾರೆ. ಸಿರಿಧಾನ್ಯದ ಹಲವು ಆರೋಗ್ಯಕರ ಲಾಭಾಗಳ ಪರಿಣಾಮಕಾರಿತ್ವದ ಬಗ್ಗೆ ಕೆಲಸ ಮಾಡಲಾಗುತ್ತಿದೆ.

ಮಿಲೆಟ್​ನಲ್ಲಿ ಕ್ರಿಯಾಶೀಲವಾದ ಎಂಜೆಮೆ ಎಂದು ಕರೆಯುವ ಲಿಪಸೆ ಹೊಂದಿದೆ. ಇದು ಸಿರಿಧಾನ್ಯ ಉತ್ಪನ್ನಗಳ ತೊಗಟೆ ವಾಸನೆಯನ್ನು ಕಡಿಮೆ ಮಾಡುತ್ತದೆ ಎಂದು ಸಿಎಸ್​ಐಆರ್ ​- ಸಿಎಫ್​​ಟಿಆರ್​ಐ ನಿರ್ದೆಶಕರಅದ ಶ್ರೀದೇವಿ ಅನ್ನಪೂರ್ಣ ಸಿಂಗ್​ ತಿಳಿಸಿದ್ದಾರೆ. ಸಿರಿಧಾನ್ಯಗಳಲ್ಲಿನ ಲಿಪ್ಸೆ ಎಂಜೆಮೆ ಅನ್ನು ನಿಷ್ಕೃಯಗೊಳಿಸುವ ಪ್ರಕ್ರಿಯೆ ಮತ್ತು ವಿಧಾನ ಕುರಿತು ಸಿಎಫ್​ಟಿಆರ್​ಐ ವಿಜ್ಞಾನಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಶೆಲ್ಫ್​​ ಜೀವಿತಾವಧಿಯನ್ನು ಹೆಚ್ಚಿಸುತ್ತದೆ.

ಪೌಷ್ಟಿಕಾಂಶ ಮೌಲ್ಯದಲ್ಲಿ ರಾಜೀಯಾಗದಂತೆ ಕಾರ್ಯನಿರ್ವಹಣೆ: ಕೆಲವು ಆಹಾರ ಪ್ರಕ್ರಿಯೆಗಳು ಒರಟು ಧಾನ್ಯ ಮತ್ತು ಸಿರಿಧಾನ್ಯಗಳ ಮೇಲೈ ಅಲ್ಲಿನ ಫೈಬರ್​ ಮತ್ತು ಮಿನರಲ್​ ಅಂಶ ತೆಗೆದು ಹಾಕುತ್ತದೆ. ಆದರೆ, ಇದು ವಿಟಮಿನ್​ ಅನ್ನು ಬೇರ್ಪಡಿಸುವ ಮತ್ತು ಸ್ಟಾರ್ಚ್​ನಲ್ಲಿ ಮಿನರಲ್ಸ್​ ಇಳಿಸುವ ಹಾಗೂ ಅಲ್ಪ ಪ್ರಮಾಣದ ಪ್ರೊಟೀನ್​ ಉಳಿಸುವಂತೆ ಆಗಬಾರದು. ನಾವು ಮಿಲೆಟ್​​ನ ಪೌಷ್ಟಿಕಾಂಶ ಮೌಲ್ಯದಲ್ಲಿ ಯಾವುದೇ ರಾಜಿ ನಡೆಸದೆ ಶೆಲ್ಫ್​​ ಜೀವಿತಾವಧಿ ಹೆಚ್ಚಿಸುವ ಸಂಬಂಧ ಸಿಎಫ್​ಟಿಆರ್​ಐ ಕಾರ್ಯ ನಿರ್ವಹಿಸುತ್ತಿದೆ. ಇದೇ ವೇಳೆ, ಹೆಚ್ಚಿನ ಆರೋಗ್ಯ ಲಾಭವನ್ನು ಹೊಂದಿರುವ ಸಿರಿಧಾನ್ಯಗಳ ಸಾಮರ್ಥ್ಯದ ಪ್ರಮಾಣೀಕರಣದ ಕುರಿತು ಕಾರ್ಯ ನಿರ್ವಹಿಸಲಾಗುತ್ತಿದೆ ಎಂದಿದ್ದಾರೆ

ಮಿಲೆಟ್​ಗಳ ಪರಿಣಾಮಕಾರಿತ್ವದ ಕುರಿತು ನಮ್ಮ ಅಜ್ಜಿಯರಿಂದ ಹಲವು ರೀತಿಯ ವಾಖ್ಯಾನದ ಆವೃತ್ತಿಗಳನ್ನು ಹೊಂದಿದ್ದೇವೆ. ಆದರೆ, ಇದು ಸಕ್ರಿಯ ಘಟಕ ಹಾಗೂ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ನಮಗೆ ತಿಳಿದಿಲ್ಲ. ಅಲ್ಲಿಯವರೆಗೆ ನಾವು ಮಾನ್ಯ ಮಾಡುವುದಿಲ್ಲ. ಅದಕ್ಕೆ ನಾವು ಆರೋಗ್ಯ ಹಕ್ಕು ಹೊಂದಲು ಸಾಧ್ಯವಿಲ್ಲ ಎಂದು ಸಿಂಗ್ ತಿಳಿಸಿದ್ದಾರೆ. ಸಿರಿಧಾನ್ಯಗಳ ಸೇವೆ ಸೇವನೆಯು ಮಧುಮೇಹಿಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ತಿಳಿದಿದೆ. ಆದರೆ, ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಇನ್ನೂ ತಿಳಿದಿಲ್ಲ. ಇದಕ್ಕಾಗಿ ಸಂಶೋಧನೆ ಮತ್ತು ಅಭಿವೃದ್ಧಿಯ ಮೂಲಕ ಇದನ್ನು ಸಾಧಿಸಬಹುದು.

ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ: ಆರೋಗ್ಯ ಪ್ರಯೋಜನಗಳಿಗೆ ಜವಾಬ್ದಾರರಾಗಿರುವ ಜೈವಿಕ ಸಕ್ರಿಯ ಘಟಕಗಳನ್ನು ನಾವು ಪ್ರತ್ಯೇಕಿಸಬೇಕು. ಇದು ಯಾವ ಸಾಂದ್ರತೆಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಅಕ್ಕಿ ಮತ್ತು ಗೋಧಿಯಂತಹ ಧಾನ್ಯಗಳಿಗೆ ಹೆಚ್ಚು ಕೈಗೆಟುಕುವ, ಸಮರ್ಥನೀಯ ಮತ್ತು ಪೌಷ್ಟಿಕಾಂಶದ ಪರ್ಯಾಯವಾಗಿ ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯು 2023 ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸಿದೆ.

ಶೇ 41ರಷ್ಟು ಉತ್ಪಾದನೆ: ಸಿರಿಧಾನ್ಯಗಳ ಉತ್ಪಾದನೆಯಲ್ಲಿ ಭಾರತ ಮುಂದೆ ಇದ್ವಾದು, ಜಾಗತಿಕವಾಗಿ ಶೇ 41ರಷ್ಟು ಉತ್ಪಾದನೆ ಮಾಡಲಾಗುತ್ತಿದೆ. ರಾಜಸ್ಥಾನ, ಮಹರಾಷ್ಟ್ರ, ಕರ್ನಾಟಕ, ಗುಜರಾತ್​ ಮತ್ತು ಮಧ್ಯಪ್ರದೇಶ ಭಾರತದ ಟಾಪ್​ ಐದು ಸಿರಿಧಾನ್ಯಗಳನ್ನು ಉತ್ಪಾದಿಸುವ ರಾಜ್ಯಗಳಾಗಿವೆ. ಯುಎಇ, ನೇಪಾಳ, ಸೌದಿ ಅರೇಬಿಯಾ, ಲಿಬಿಯಾ, ಒಮನ್​, ಈಜಿಪ್ಟ್​​, ಯೆಮೆನ್​, ಯುಕೆ ಮತ್ತು ಯುಎಸ್​ಗೆ ಸಿರಿಧಾನ್ಯಗಳ ರಫ್ತು ಮಾಡುವಲ್ಲಿ ಭಾರತ ಪ್ರಮುಖವಾಗಿದೆ. ಬಂಜ್ರಾ, ರಾಗಿ, ಕ್ಯಾನರಿ, ಜೋಳ ಮತ್ತು ಹುರಳಿಯಂತಹ ಪ್ರಮುಖ ಸಿರಿಧಾನ್ಯಗಳನ್ನು ಭಾರತ ರಫ್ತು ಮಾಡುತ್ತಿದೆ.

ಇದನ್ನೂ ಓದಿ: ಪ್ರತಿನಿತ್ಯ ಮಿಶ್ರ ಒಣಹಣ್ಣು ಸೇವನೆಯಿಂದ ಹೃದಯರಕ್ತನಾಳ ಸಮಸ್ಯೆ ಕಡಿಮೆಯಾಗುವ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.