ETV Bharat / sukhibhava

ಈ ಕೆಲಸ ಮಾಡುವವರ ಗಮನಕ್ಕೆ: ಕೇಶ ವಿನ್ಯಾಸಕರು, ಬ್ಯೂಟಿಷಿಯನ್​ಗಳಲ್ಲಿ ಅಂಡಾಶಯದ ಕ್ಯಾನ್ಸರ್​ ಅಪಾಯ ಹೆಚ್ಚು

author img

By

Published : Jul 11, 2023, 3:18 PM IST

Hairdressers, beauticians are more at risk of ovarian cancer; Study
Hairdressers, beauticians are more at risk of ovarian cancer; Study

ಮಹಿಳೆಯರು ನಿರ್ವಹಿಸುವ ಕೆಲಸ, ಅವರು ಎದುರಿಸುತ್ತಿರುವ ಪರಿಸ್ಥಿತಿ ಆಧಾರದ ಮೇಲೆ ಈ ಅಧ್ಯಯನ ನಡೆಸಲಾಗಿದೆ.

ಟೊರೊಂಟೊ( ಕೆನಡಾ): ಜಾಗತಿಕವಾಗಿ ಮಹಿಳೆಯರನ್ನು ಕಾಡುವ 8 ಸಾಮಾನ್ಯ ಕ್ಯಾನ್ಸರ್​​ಗಳಲ್ಲಿ ಅಂಡಾಶಯದ ಕ್ಯಾನ್ಸರ್​ ಒಂದಾಗಿದೆ. ಈ ಅಂಡಾಶಯದ ಕ್ಯಾನ್ಸರ್​​​ಗೆ ಯಾವ ವರ್ಗದ ಮಹಿಳೆಯರು ಹೆಚ್ಚಾಗಿ ತೆರೆದುಕೊಳ್ಳುತ್ತಾರೆ ಎಂದು ಇತ್ತೀಚೆಗೆ ಅಧ್ಯಯನ ನಡೆಸಲಾಗಿದೆ. ಅದರಲ್ಲಿ ಕೇಶ ವಿನ್ಯಾಸಕರು ಮತ್ತು ಬ್ಯೂಟಿಷಿಯನ್​ಗಳು ಇದರ ಅಪಾಯಕ್ಕೆ ಹೆಚ್ಚು ಒಳಗಾಗುತ್ತಾರೆ ಎಂಬುದು ಬಯಲಾಗಿದೆ.

ಆನ್​ಲೈನ್​ ಜರ್ನಲ್​ ಅಕ್ಯೂಪೆಷನಲ್​ ಅಂಡ್​ ಎನ್ವರಮೆಂಟಲ್​ ಮೆಡಿಸಿನ್​ನಲ್ಲಿ ಈ ಕುರಿತು ಪ್ರಕಟಿಸಲಾಗಿದೆ. ಈ ಸಂಬಂದ 18 - 79 ವರ್ಷ 1,388 ಮಹಿಳೆಯರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಇದರಲ್ಲಿ 491 ಮಂದಿಯಲ್ಲಿ ಎಪಿತೀಯಲ್​ ಅಂಡಾಶಯದ ಕ್ಯಾನ್ಸರ್​ ಪತ್ತೆಯಾದರೆ, 897 ಮಂದಿಯಲ್ಲಿ ಇದು ಕಂಡು ಬಂದಿಲ್ಲ.

ಕೆನಾಡದ ಮೊಂಟ್ರೆಲ್​ ಯುನಿವರ್ಸಿಟಿ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. ಈ ವೇಳೆ, ಅವರು ಕಾರ್ಯ ನಿರ್ವಹಣೆಗೆ ತೆರೆದುಕೊಳ್ಳುವಿಕೆ, 29 ಸಾಮಾನ್ಯ ಏಜೆಂಟ್​ ನಡುವಿನ ಮತ್ತು ಅಂಡಾಶಯದ ಕ್ಯಾನ್ಸರ್​​ ಅಪಾಯವನ್ನು ವಿಶ್ಲೇಷಣೆ ನಡೆಸಲಾಗಿದೆ. ಈ ವೇಳೆ ಗರ್ಭ ನಿರೋಧಕ ಮಾತ್ರೆಗಳ ಬಳಕೆ, ಮಕ್ಕಳಿಲ್ಲದಿರುವುದು, ದಿನಕ್ಕೆ 10ಗಂಟೆಗಳ ಕಾಲ ಕೆಲಸ ಮಾಡುವ ಅಥವಾ ಹೇರ್​ಕೇರೆರ್​​, ಬರ್ಬರ್​, ಬ್ಯೂಟಿಶಿಯನ್​ ರೀತಿಯ ಕೆಲಸ ಮಾಡುವ ಅದೇ ರೀತಿಯ ಕೆಲಸದ ಸಂಬಂಧ ಹೊಂದಿರುವವರು ಮೂರು ಪಟ್ಟು ಅಪಾಯದ ಮಟ್ಟ ಹೆಚ್ಚು ಹೊಂದಿದೆ. ಅಕೌಂಟೆಂಟ್​ ಆಗಿ 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿ ಕೆಲಸ ಮಾಡುವವರು ಕೂಡ ದುಪ್ಪಟ್ಟು ಆಪಾಯ ಹೊಂದಿದ್ದಾರೆ. ಕಟ್ಟಡ ಉದ್ಯಮದವರು ಮೂರು ಪಟ್ಟು ಹೆಚ್ಚು ಅಪಾಯ ಹೊಂದಿದ್ದಾರೆ.

ಅದೇ ರೀತಿ, ಎಂಬ್ರೋಯ್ಡರಿಯಂತಹ ಜವಳಿ ಉದ್ಯಮದಲ್ಲಿ ತೊಡಗಿಸಿಕೊಂಡಿರುವವರು ಕೂಡ ಶೇ 85ರಷ್ಟು ಹೆಚ್ಚಿನ ಅಪಾಯ ಹೊಂದಿರುತ್ತಾರೆ. ಚಿಲ್ಲರೆ ಅಥವಾ ಮಾರಾಟ ಕೆಲಸದಲ್ಲಿ ತೊಡಗಿದವರು ಕೂಡ ಶೇ 45 ರಿಂದ ಶೇ 59ರಷ್ಟು ಅಪಾಯವನ್ನು ಹೊಂದಿರುತ್ತದೆ.

ಇದರ ಜೊತೆಗೆ ಕೆಲವು ವಸ್ತುಗಳಿಗೆ ತೆರೆದುಕೊಳ್ಳುವುದರಿಂದ ಕೂಡ ಅದು ಶೇ 40ರಷ್ಟು ಹೆಚ್ಚಿನ ಕ್ಯಾನ್ಸರ್​​ ಅಭಿವೃದ್ಧಿಗೆ ಕಾರಣವಾಗುತ್ತದೆ. ಟಾಲ್ಕಂ ಪೌಡರ್​ನಲ್ಲಿರುವ ಅಮೋನಿಯಾ ಹೈಡ್ರೋಜೆನ್​ ಪೆರೊಕ್ಸಿಡ್​​, ಹೇರ್​ ಡಸ್ಟ್​ನಲ್ಲಿರುವ ಸಿಂಥೆಟಿಕ್​ ಫೈಬರ್​​, ಪಾಲಿಸ್ಟರ್​ ಫೈಬರ್ಸ್​, ಅರ್ಗನಿಕ್​ ಡೈ ಸೇರಿದಂತೆ ಹಲವು ಅಂಶಗಳು ಅಂಡಾಯಶದ ಕ್ಯಾನ್ಸರ್​ಗೆ ಕಾರಣವಾಗುತ್ತದೆ.

ಹೇರ್​ ಡ್ರೆಸರ್​ ಮತ್ತು ಬ್ಯೂಟಿಷಿಯನ್​ ಮತ್ತು ಅದರ ಸಂಬಂಧಿತ ಕೆಲಸ ಮಾಡುವವರು ಅಮೋನಿಯಾ, ಹೈಡ್ರೋಜನ್​ ಪರೊಕ್ಸಿಡ್​​, ಆಗರ್ನಿಕ್​ ಡೈ, ಬ್ಲಿಚ್​ನಿಂದಾಗಿ 13 ವಾಹಕಗಳಿಗೆ ಅವರು ತೆರೆದುಕೊಳ್ಳುತ್ತಾರೆ.

ಇದರಿಂದಾಗಿ ಅಂಡಾಯಶ ಕ್ಯಾನ್ಸರ್​ ಅಭಿವೃದ್ಧಿ ಹೊಂದಿರುತ್ತದೆ ಎಂಬುದರ ಕುರಿತು ಸ್ಪಷ್ಟತೆ ಇಲ್ಲ. ಸಂಯೋಜನೆ ಅಥವಾ ಇತರ ಕಾರ್ಯಸ್ಥಳದ ಅಂಶಗಳಿಂದ ನಡೆಸಲ್ಪಟ್ಟಿದ್ದರೆ ಅವು ಪರಿಣಾಮ ಬೀರಬಹುದು ಎಂದು ಸಂಶೋಧಕರು ಹೇಳಿದರು. ಹೆಚ್ಚಿನ ಅಧ್ಯಯನಗಳು ಅಗತ್ಯವಿದ್ದರೂ, ಅವರ ಫಲಿತಾಂಶಗಳು "ಕೆಲವು ಉದ್ಯೋಗಗಳಲ್ಲಿ ಉದ್ಯೋಗ ಮತ್ತು ನಿರ್ದಿಷ್ಟ ಔದ್ಯೋಗಿಕ ಮಾನ್ಯತೆಗಳು ಅಂಡಾಶಯದ ಕ್ಯಾನ್ಸರ್​​​​​ನ ಹೆಚ್ಚಿನ ಅಪಾಯಗಳೊಂದಿಗೆ ಸಂಬಂಧ ಹೊಂದಿರಬಹುದು ಎಂದು ಸೂಚಿಸುತ್ತವೆ ಎಂದಿದ್ದಾರೆ.

ಇದನ್ನೂ ಓದಿ: Ovarian cancer: ಅಂಡಾಶಯದ ಕ್ಯಾನ್ಸರ್​​ ಪತ್ತೆಗೆ ಹೊಸ ಮಾರ್ಗ ಕಂಡು ಹಿಡಿದ ಜಪಾನ್​ ಸಂಶೋಧಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.