ETV Bharat / sukhibhava

Cervical cancer: ಗರ್ಭಕಂಠ ಕ್ಯಾನ್ಸರ್​​ಗೆ ತುತ್ತಾದ ಮಿಸ್​ ವರ್ಲ್ಡ್​​ ಅಭ್ಯರ್ಥಿ.. ಮಹಿಳೆಯರನ್ನು ಕಾಡುವ ಈ ಕ್ಯಾನ್ಸರ್​ ಬಗ್ಗೆ ಅರಿವು ಅಗತ್ಯ

author img

By ETV Bharat Karnataka Team

Published : Oct 18, 2023, 11:56 AM IST

http://10.10.50.85:6060/reg-lowres/18-October-2023/cervic_1810newsroom_1697606072_794.jpg
http://10.10.50.85:6060/reg-lowres/18-October-2023/cervic_1810newsroom_1697606072_794.jpg

ಜಾಗತಿಕವಾಗಿ ಮಹಿಳೆಯರನ್ನು ಕಾಡುವ ಕ್ಯಾನ್ಸರ್​ನಲ್ಲಿ ನಾಲ್ಕನೇ ಸಾಮಾನ್ಯ ವಿಧದ ಕ್ಯಾನ್ಸರ್​ ಈ ಗರ್ಭಕಂಠದ ಕ್ಯಾನ್ಸರ್​ ಆಗಿದೆ.

ಬೆಂಗಳೂರು: ಚೀನಾದಲ್ಲಿ 2016ರಲ್ಲಿ ನಡೆದ ಮಿಸ್​ ವರ್ಲ್ಡ್​​ ಸ್ಪರ್ಧೆಯ ಅಭ್ಯರ್ಥಿ ಉರುಗ್ವೆಯ ಸುಂದರಿ ಶೆರಿಕಾ ಡೆ ಅರ್ಮ್ಸ್​​ ಗರ್ಭಕಂಠದ ಕ್ಯಾನ್ಸರ್​ನಿಂದಾಗಿ 26ನೇ ವಯಸ್ಸಿಗೆ ಸಾವನ್ನಪ್ಪಿದ್ದಾರೆ. ಜಗತ್ತಿನಲ್ಲಿ ಮಹಿಳೆಯರನ್ನು ಕಾಡುವ ಕ್ಯಾನ್ಸರ್​​ ಅಪಾಯದಲ್ಲಿ ಗರ್ಭಕಂಠದ ಕ್ಯಾನ್ಸರ್​​ ನಾಲ್ಕನೇಯದ್ದಾಗಿದೆ. ಈ ಕ್ಯಾನ್ಸರ್​​ ಕುರಿತು ಅರಿವು, ತಡೆ ಮತ್ತು ರೋಗದ ಅಪಾಯವನ್ನು ಮೊದಲೇ ಪತ್ತೆ ಮಾಡುವ ಕುರಿತು ತಿಳಿಯುವುದು ಅವಶ್ಯವಾಗಿದೆ.

ಗರ್ಭಕಂಠದ ಕ್ಯಾನ್ಸರ್ ಒಂದು ಗರ್ಭಕಂಠದ ಕೋಶದೊಳಗೆ ತಿಳಿಯದಂತೆ ತನ್ನ ಬೆಳವಣಿಗೆಯನ್ನು ಪ್ರಾರಂಭಿಸುತ್ತದೆ. ಇದು ಪ್ರಗತಿ ನಿಧಾನವಾಗಿದ್ದು, ಇದು ಕ್ಯಾನ್ಸರ್ ಪ್ರಾರಂಭವಾಗುವ ಮೊದಲು ಎಚ್ಚರಿಕೆಯ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ. ಎಚ್ಚರಿಕೆಯ ಗಂಟೆ ಎಂದರೆ ಎಲ್ಲಾ ಗರ್ಭಕಂಠದ ಕ್ಯಾನ್ಸರ್​​ ಹ್ಯೂಮನ್​ ಪಪಿಲೊಮವೈರಸ್​​ನ ಕೊಡುಗೆಯ ಅಪಾಯವನ್ನು ಹೊಂದಿದೆ. ಇದು ಸಂತಾನೋತ್ಪತಿಯು ಪ್ರದೇಶದಲ್ಲಿನ ಸಾಮಾನ್ಯವಾದ ವೈರಲ್​ ಸೋಂಕಾಗಿದ್ದು, ಲೈಂಗಿಕ ಸಂಪರ್ಕದ ಮೂಲಕ ಹರಡುತ್ತದೆ.

ಗರ್ಭಕಂಠದ ಅರ್ಥೈಸಿಕೊಳ್ಳುವಿಕೆ: ಇದು ಗರ್ಭಾಶಯದ ಕೆಳಭಾಗದಲ್ಲಿದ್ದು, ಗರ್ಭಾಶಯ ಮತ್ತು ಯೋನಿಯ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಇದು ಪ್ರಮುಖವಾಗಿ ಎರಡು ವಿಧವನ್ನು ಒಳಗೊಂಡಿದೆ.

ಎಕ್ಟೋಸರ್ವಿಕ್ಸ್​​: ಇದು ಗರ್ಭಕಂಠದ ಹೊರಭಾಗವಾಗಿದ್ದು, ಸ್ತ್ರೀರೋಗ ಪರೀಕ್ಷೆ ವೇಳೆ ಗೋಚರಿಸುತ್ತದೆ. ತೆಳವಾದ ಚಪ್ಪಟೆ ಕೋಶದಿಂದ ಮುಚ್ಚಿರುತ್ತದೆ. ಇದನ್ನು ಸ್ವಮೊಸ್​ ಕೋಶ ಎನ್ನುತ್ತಾರೆ.

ಎಂಡೋಸೆರ್ವಿಕ್ಸ್​​​: ಇದು ಗರ್ಭಕಂಠದ ಒಳಗಿನ ಭಾಗವಾಗಿದ್ದು, ಯೋನಿ ಮತ್ತು ಗರ್ಭವನ್ನು ಸಂಪರ್ಕಿಸುತ್ತದೆ. ಆಕಾರ ಗ್ರಂಥಿ ಕೋಶದಿಂದ ಮುಚ್ಚಿರುತ್ತದೆ.

ಎಂಡೋಸೆರ್ವಿಕ್ಸ್​​ ಮತ್ತು ಎಕ್ಟೋಸರ್ವಿಕ್ಸ್​​ ಸಂಧಿಸುವ ಸ್ಥಾನವನ್ನು ಸ್ಕ್ವಾಮೊಕಾಲಮ್ನರ್​ ಜಂಕ್ಷನ್​ ಎಂದು ಕರೆಯಲಾಗುವುದು. ಇದು ಗರ್ಭಕಂಠ ಕ್ಯಾನ್ಸರ್​​ನ ಉಗಮದ ಮೂಲವಾಗಿದೆ.

ಗರ್ಭಕಂಠ ಕ್ಯಾನ್ಸರ್​ನಲ್ಲಿ ಸ್ಕ್ವಾಮಸ್​ ಸೆಲ್​ ಕಾರ್ಸಿನೋಮ ಮತ್ತು ಅಡೆನೊಕಾರ್ಸಿನೋಮ ಎಂಬ ಎರಡು ವಿಧಗಳಿವೆ.

ಕ್ಯಾನ್ಸರ್​ ಲಕ್ಷಣ: ಕ್ಸಾನ್ಸರ್​​ನ ಆರಂಭಿಕ ಹಂತದಲ್ಲಿ ಲಕ್ಷಣರಹಿತವಾಗಿದೆ. ಆದಾಗ್ಯೂ ಇದು ದೇಹದೊಳಗೆ ಪ್ರಗತಿ ಹೊಂದುತ್ತದೆ. ಕ್ಯಾನ್ಸರ್​​ ಅನೇಕ ಲಕ್ಷಣಗಳನ್ನು ಹೊಂದಿದೆ..

  • ಲೈಂಗಿಕ ಸಂಪರ್ಕದ ಬಳಿಕ ಅಥವಾ ಮೆನೊಪಸ್​ ಸಮಯದಲ್ಲಿ ಯೋನಿಯಲ್ಲಿ ರಕ್ತಸ್ರಾವ
  • ಋತುಚಕ್ರದಲ್ಲಿ ಹೆಚ್ಚಿನ ಸ್ರಾವ ಹಾಗೂ ಹೆಚ್ಚಿನ ನೋವು ಅನುಭವಿಸುವುದು
  • ನೀರಿನ ರೀತಿ ಯೋನಿಯಲ್ಲಿ ದ್ರವ ಬಿಡುಗಡೆ
  • ಯೋನಿಯಲ್ಲಿ ನೋವು ಉಂಟಾಗುವುದು ರೋಗದ ಅಭಿವೃದ್ಧಿ ಹಂತವಾಗಿದೆ.
  • ಈ ಲಕ್ಷಣಗಳು ರೋಗದ ಇರುವಿಕೆಯ ಲಕ್ಷಣವನ್ನು ತೋರಿಸುತ್ತದೆ. ಈ ಸಂದರ್ಭದಲ್ಲಿ ನಿಯಮಿತ ವೈದ್ಯಕೀಯ ತಪಾಸಣೆಗೆ ಒಳಗಾಗುವ ಮೂಲಕ ಗರ್ಭಕಂಠದ ಕ್ಯಾನ್ಸರ್​ ಅನ್ನು ಬೇಗ ಪತ್ತೆ ಮಾಡುವುದು ಅವಶ್ಯವಾಗಿದೆ.

ಚಿಕಿತ್ಸಾ ವಿಧಾನ..

ಗರ್ಭಕಂಠದ ಕ್ಯಾನ್ಸರ್​​ನ ಹಂತವನ್ನು ಗಮನಿಸಿ ಅನೇಕ ರೀತಿಯ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸಲಾಗುವುದು.

ಸರ್ಜರಿ: ಶಸ್ತ್ರಚಿಕಿತ್ಸೆ ವೇಳೆ ಕ್ಯಾನ್ಸರ್​​ಕಾರಕ ಟಿಶ್ಯೂವನ್ನು ತೆಗೆಯಲಾಗುವುದು. ಈ ಮೂಲಕ ಕ್ಯಾನ್ಸರ್​ ಅಂಗಾಂಶವನ್ನು ತೆಗೆಯಲಾಗುವುದು

ಕಿಮೋಥೆರಪಿ: ಕ್ಯಾನ್ಸರ್​ಅನ್ನು ಸಂಕುಚಿತಗೊಳಿಸಲು ಅಥವಾ ತೆಗೆದು ಹಾಕಲು ವಿಶೇಷವಾಗಿ ವಿನ್ಯಾಸ ಮಾಡಿದ ಚಿಕಿತ್ಸೆಯಾಗಿದೆ. ಈ ಔಷಧವನ್ನು ಬಾಯಿ ಅಥವಾ ಇಂಜೆಕ್ಷನ್​ ಅಥವಾ ಎರಡರ ಸಂಯೋಗ ನಡೆಸಿ ಚಿಕಿತ್ಸೆ ನೀಡಲಾಗುವುದು.

ರೆಡಿಯೇಷನ್​ ಥೆರಪಿ: ಹೆಚ್ಚಿನ ಶಕ್ತಿಯುತ ಕಿರಣಗಳು, ಅಕಿನ್​ನಿಂದ ಎಕ್ಸ್​ರೇವರೆಗೆ ಬಳಕೆ ಮಾಡಿ ಕ್ಯಾನ್ಸರ್​ ಕೋಶಗಳನ್ನು ನಾಶ ಮಾಡುವುದು

ಎಚ್​ಪಿವಿ ಲಸಿಕೆ: ಗರ್ಭಕಂಠದ ಕ್ಯಾನ್ಸರ್​ ವಿರುದ್ಧ ಹೋರಾಡಲು ಎಚ್​ಪಿವಿ ಲಸಿಕೆ ಒಂದು ಭರವಸೆಯ ಕಿರಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಎಚ್​ಪಿವಿ ವಿಧಗಳ ಶೇ 70ರಷ್ಟು ಗರ್ಭಕಂಠ ಕ್ಯಾನ್ಸರ್​ ತಡೆಯುವಲ್ಲಿ ರಕ್ಷಣಾ ಲಸಿಕೆ ಆಗಿದೆ ಎಂದಿದೆ.

ಇದನ್ನೂ ಓದಿ: ಗರ್ಭಕಂಠ ಕ್ಯಾನ್ಸರ್​ನಿಂದ ಸಾವನ್ನಪ್ಪುವುದನ್ನು ತಡೆಗಟ್ಟಬಹುದಾ?.. ಈ ಬಗ್ಗೆ ವೈದ್ಯರ ಸಲಹೆ ಏನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.