ETV Bharat / sukhibhava

ವಿಟಮಿನ್​ ಡಿ ಯುಕ್ತ ಈ ಪೌಷ್ಟಿಕ ಆಹಾರ ಸೇವನೆ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳಿ

author img

By

Published : Jul 19, 2023, 2:42 PM IST

Boost your health by consuming this nutritious food rich in vitamin D
Boost your health by consuming this nutritious food rich in vitamin D

ಸೂರ್ಯನಿಂದ ಸಾಕಷ್ಟ ಪ್ರಮಾಣದ ವಿಟಮಿನ್​ ಡಿ ನಿಮಗೆ ಲಭ್ಯವಾಗುತ್ತಿಲ್ಲ ಎಂದರೆ, ಅದಕ್ಕೆ ಪೂರಕವಾಗುವಂತೆ ವಿಟಮಿನ್​ ಡಿ ಸಮೃದ್ಧ ಆಹಾರಗಳನ್ನು ಸೇವಿಸಬಹುದಾಗಿದೆ

ಬೆಂಗಳೂರು: ದೇಹದ ಸಂಪೂರ್ಣ ಆರೋಗ್ಯ ವ್ಯವಸ್ಥೆಯಲ್ಲಿ ವಿಟಮಿನ್​ ಡಿ ಪೋಷಕಾಂಶವೂ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ವಿಟಮಿನ್​ ಡಿಯ ಪ್ರಮುಖ ಮೂಲ ಎಂದರೆ ಅದು ಸೂರ್ಯನ ಕಿರಣವಾಗಿದೆ. ಇದರ ಜೊತೆಗೆ ಕೆಲವು ಆಹಾರಗಳನ್ನು ಸೇವನೆ ಮಾಡುವ ಮೂಲಕ ಇದರ ಮಟ್ಟ ಹೆಚ್ಚಿಸಬಹುದಾಗಿದೆ. ವಿಟಮಿನ್​ ಡಿ ಅವಶ್ಯಕತೆ ವಯಸ್ಸು ಮತ್ತು ವೈಯಕ್ತಿಕ ಆರೋಗ್ಯ ಸ್ಥಿತಿಗಳಂತಹ ಅಂಶಗಳ ಆಧಾರದ ಮೇಲೆ ಬದಲಾಗುತ್ತದೆ. ಈ ಹಿನ್ನೆಲೆ ನಿರ್ಧಿಷ್ಟ ಅವಶ್ಯಕತೆಗೆ ಸರಿಯಾದ ಸಮಯದಲ್ಲಿ ಈ ಆಹಾರ ಸೇವನೆಗೆ ಆರೋಗ್ಯ ಕಾರ್ಯಕರ್ತರು ಅಥವಾ ನ್ಯೂಟ್ರಿಷಿಯನ್​ ಬಳಿ ಸಲಹೆ ಪಡೆಯಬೇಕಾಗುತ್ತದೆ.

ಮೂಳೆ ಆರೋಗ್ಯಗಳಲ್ಲಿ ಬಲವಾಗಿಸಲು ಈ ವಿಟಮಿನ್​ ಡಿ ಅಗತ್ಯವಾಗಿದ್ದು, ಎಲ್ಲ ವಯೋಮಾನದ ಜನರಿಗೂ ಈ ವಿಟಮಿನ್​ ಡಿ ಅವಶ್ಯಕತೆ ಹೆಚ್ಚಿರುತ್ತದೆ. ಸೂರ್ಯನಿಂದ ನೈಸರ್ಗಿಕವಾಗಿ ಲಭ್ಯವಾಗುವ ವಿಟಮಿನ್​ ಡಿ ಕಡಿಮೆಯಾದರೆ, ಇದು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಈ ಹಿನ್ನೆಲೆ ದೇಹಕ್ಕೆ ವಿಟಮಿನ್​ ಡಿ ಅತ್ಯಗತ್ಯವಾಗಿದೆ. ಸೂರ್ಯನಿಂದ ಸಾಕಷ್ಟ ಪ್ರಮಾಣದ ವಿಟಮಿನ್​ ಡಿ ನಿಮಗೆ ಲಭ್ಯವಾಗುತ್ತಿಲ್ಲ ಎಂದರೆ, ಅದಕ್ಕೆ ಪೂರಕವಾಗುವಂತೆ ವಿಟಮಿನ್​ ಡಿ ಸಮೃದ್ಧ ಆಹಾರಗಳನ್ನು ಸೇವಿಸಬಹುದಾಗಿದೆ. ಅಂತಹ ಆಹಾರಗಳ ಪಟ್ಟಿ ಇಲ್ಲಿದೆ.

ಮೊಟ್ಟೆಯ ಹಳದಿ ಭಾಗ: ಮೊಟ್ಟೆಯು ಪ್ರೋಟಿನ್​ ಸಮೃದ್ಧವಾಗಿದ್ದು, ಇದರಲ್ಲಿನ ಹಳದಿ ಭಾಗದಲ್ಲಿ ಹೆಚ್ಚಿನ ವಿಟಮಿನ್​ ಡಿ ಅಂಶ ಕಾಣಬಹುದಾಗಿದೆ. ನಿಮ್ಮ ಆಹಾರದಲ್ಲಿ ಸಂಪೂರ್ಣ ಮೊಟ್ಟೆಯನ್ನು ಸೇವಿಸುವುದರಿಂದಲೂ ಈ ವಿಟಮಿನ್​ ಡಿ ಅಂಶ ಪಡೆಯಬಹುದಾಗಿದೆ.

ಮಶ್ರೂಮ್​: ಕೆಲವು ಮಶ್ರೂಮ್​ ತಳಿಗಳು ಅದರಲ್ಲೂ ಸೂರ್ಯನಿಂದ ಅಲ್ಟ್ರಾವೈಲೆಟ್​​ ಕಿರಣಗಳನ್ನು ಪಡೆದ ಮಶ್ರೂಮ್​ಗಳಲ್ಲಿ ವಿಟಮಿನ್​ ಡಿ ಹೆಚ್ಚಿರುತ್ತದೆ. ವಿಟಮಿನ್​ ಡಿ ಸಮೃದ್ಧ ಆಹಾರಗಳನ್ನು ಸ್ಥಳೀಯ ಮಾರುಕಟ್ಟೆಗಳಿಂದ ಪಡೆಯಬಹುದಾಗಿದ್ದು, ಇವು ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನ ನೀಡುತ್ತದೆ.

ಕೊಡ್​ ಲಿವರ್​ ಆಯಿಲ್​: ಕೊಡ್​ ಫೀಶ್​ಗಳ ಯಕೃತ್​ನಿಂದಾಗಿ ಇದನ್ನು ತಯಾರಿಸಲಾಗುತ್ತದೆ. ವಿಟಮಿನ್​ ಡಿ ಯಥೇಚ್ಛವಾಗಿ ಇದರಲ್ಲಿರುತ್ತದೆ. ಇದರ ಜೊತೆಗೆ ಇದರಲ್ಲಿ ಒಮೆಗಾ-3 ಫ್ಯಾಟಿ ಆ್ಯಸಿಡ್​​, ಇಪಿಎ, ಡಿಎಚ್​ಎಗಳು ಇರುತ್ತದೆ. ಇದು ಹೃದಯದ ಆರೋಗ್ಯ, ಮಿದುಳಿನ ಕಾರ್ಯಾಚರಣೆಗೆ ಸಾಕಷ್ಟು ಪ್ರಯೋಜನ ಮಾಡುತ್ತದೆ. ಜೊತೆಗೆ ಊರಿಯುತವನ್ನು ಇದು ಕಡಿಮೆ ಮಾಡುತ್ತದೆ.

ವಿಟಮಿನ್​ ಡಿ ಮೀನುಗಳು: ಸಲ್ಮೊನ್​, ಟ್ರೌಟ್​​, ಮ್ಯಾಕೆರೆಲ್ ಮತ್ತು ಸಾರ್ಡೀನ್‌ಗಳಂತಹ ಕೊಬ್ಬಿನ ಮೀನುಗಳು ವಿಟಮಿನ್ ಡಿಯ ಅತ್ಯುತ್ತಮ ಆಹಾರ ಮೂಲಗಳಾಗಿವೆ. ಈ ಮೀನುಗಳನ್ನು ಸೇವಿಸುವುದರಿಂದ ನಿಮ್ಮ ವಿಟಮಿನ್​ ಡಿ ಮಟ್ಟ ಹೆಚ್ಚುತ್ತದೆ. ಇದು ಮೂಳೆಗಳ ಆರೋಗ್ಯ, ರೋಗ ನಿರೋಧಕ ಕಾರ್ಯಚಾರ ಸೇರಿದಂತೆ ಒಟ್ಟಾರೆ ಆರೋಗ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಬಲವರ್ಧಿತ ಡೈರಿ ಉತ್ಪನ್ನಗಳು: ಹಾಲು, ಯೋಗರ್ಟ್​​ ಮತ್ತು ಚೀಸ್​​ಗಳು ಸಾಮಾನ್ವವಾಗಿ ವಿಟಮಿನ್​ ಡಿ ಹೊಂದಿರುವ ಬಲವರ್ಧಿತ ಆಹಾರಗಳಾಗಿದೆ. ಇವು ದೇಹಕ್ಕೆ ಬೇಕಾದ ಪೋಷಕಾಂಶದ ಅಗತ್ಯತೆಗಳನ್ನು ಕೂಡ ನೀಡುತ್ತದೆ. ಈ ಆಹಾರಗಳನ್ನು ಸುಲಭವಾಗಿ ಆಹಾರ ಮತ್ತು ಸ್ನಾಕ್​ಗಳಾಗಿ ಸೇವನೆ ಮಾಡಬಹುದಾಗಿದೆ.

ಇದನ್ನೂ ಓದಿ: Food: ಆಹಾರವನ್ನು ಫ್ರಿಡ್ಜ್‌ನಲ್ಲಿಟ್ಟು ಪದೇ ಪದೇ ಬಿಸಿ ಮಾಡಿ ತಿನ್ನುವುದರಿಂದ ಹಲವು ಸಮಸ್ಯೆಗಳು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.