ETV Bharat / sukhibhava

Food: ಆಹಾರವನ್ನು ಫ್ರಿಡ್ಜ್‌ನಲ್ಲಿಟ್ಟು ಪದೇ ಪದೇ ಬಿಸಿ ಮಾಡಿ ತಿನ್ನುವುದರಿಂದ ಹಲವು ಸಮಸ್ಯೆಗಳು!

author img

By

Published : Jul 18, 2023, 10:56 AM IST

ಆಹಾರಗಳನ್ನು ಹೆಚ್ಚು ಶೀತಲೀಕರಿಸುವುದು ಮತ್ತು ಪದೇ ಪದೇ ಬಿಸಿ ಮಾಡುವುದರಿಂದ ಅದರಲ್ಲಿನ ಆರೋಗ್ಯಕರ ಅಂಶಗಳು ದೇಹಕ್ಕೆ ಅಪಾಯಕಾರಿಯಾಗುತ್ತವೆ.

avoid reheating these food it is dangerous
avoid reheating these food it is dangerous

ಯಾರು ಎಷ್ಟು ಆಹಾರ ಸೇವನೆ ಮಾಡುತ್ತಾರೆ ಎಂದು ಅಂದಾಜಿಸಿ ಅಡುಗೆ ಮಾಡುವುದು ಸುಲಭವಲ್ಲ. ಅದರಲ್ಲೂ ಹೆಚ್ಚು ಜನರಿಗೆ ಅಡುಗೆ ಮಾಡುವಾಗ ಆಹಾರ ಉಳಿಯುವುದು ಸಾಮಾನ್ಯ. ಉಳಿದ ಅಡುಗೆಯನ್ನು ಹಾಳಾಗದಂತೆ ರೆಫ್ರಿಜರೇಟರ್​ನಲ್ಲಿ ಇಡುತ್ತೇವೆ. ಬೇಕಾದಾಗ ಬಿಸಿ ಮಾಡಿ ತಿನ್ನುತ್ತೇವೆ. ಆದರೆ, ಈ ಆಹಾರಗಳು ನಮ್ಮ ಆರೋಗ್ಯಕ್ಕೆ ಎಷ್ಟು ಸುರಕ್ಷಿತ ಎಂಬುದರ ಬಗ್ಗೆ ಎಂದಾದರೂ ಯೋಚಿಸಿದ್ದೀರಾ?. ಪದೇ ಪದೇ ಆಹಾರವನ್ನು ಬಿಸಿ ಮಾಡುವುದರಿಂದ ಆಗುವ ಪೋಷಕಾಂಶ ನಷ್ಟದ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ.

ಸಮುದ್ರದ ಆಹಾರ: ಶೀತಲೀಕರಿಸಿದ ಸಮುದ್ರದ ಆಹಾರಕ್ಕಿಂತ ತಾಜಾ ಸಮುದ್ರದ ಆಹಾರ ಉತ್ತಮ. ಆದರೆ, ಸಂರಕ್ಷಣಾ ವಿಧಾನವನ್ನು ಆಹಾರ ಸುರಕ್ಷತಾ ಸಂಸ್ಥೆಗಳು ಹೆಚ್ಚು ಬಿಗಿಯಾಗಿ ನಿಯಂತ್ರಿಸುತ್ತವೆ. ಶೀತಲೀಕರಿಸಿದ ಆಹಾರಗಳು ಸುರಕ್ಷಿತ. ಆದರೆ, ಈ ಸಮುದ್ರ ಆಹಾರಗಳಿಂದ ಅಡುಗೆ ಮಾಡಿ, ಅದನ್ನು ಫ್ರಿಜ್​ನಲ್ಲಿಟ್ಟು ಪುನಃ ಪುನಃ ಬಿಸಿ ಮಾಡುವುದು ಆರೋಗ್ಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ.

ಅನ್ನ: ಅನ್ನವನ್ನೂ ಕೂಡ ಫ್ರಿಜ್​ನಲ್ಲಿ ದೀರ್ಘಾವಧಿ ಕಾಲ ಇಟ್ಟು ಬಿಸಿ ಮಾಡುವುದರಿಂದ ಅದರಲ್ಲಿ ಬ್ಯಸಿಲುಸ್​​ ಸೆರೆಸ್​ ಎಂಬ ಬ್ಯಾಕ್ಟೀರಿಯಾ ಬೆಳೆಯುತ್ತದೆ.

ಪಾಲಕ್​: ಅತ್ಯುತ್ತಮ ಆಹಾರವಾದ ಪಾಲಕ್​ ಕೂಡ ವಿಷವಾಗುತ್ತದೆ. ಇದನ್ನು ಬಿಸಿ ಮಾಡಿ ಪ್ರಿಜ್​ನಲ್ಲಿಟ್ಟು ಬಳಿಕ ಮತ್ತೆ ಬಿಸಿ ಮಾಡಿದರೆ, ಇದರಿಂದ ಆರೋಗ್ಯಕ್ಕೆ ಅಪಾಯವೇ ಹೆಚ್ಚು. ಈ ಪಾಲಕ್​ ಅನ್ನು ಅಧಿಕ ತಾಪಮಾನದಲ್ಲಿ ಮತ್ತೆ ಬಿಸಿ ಮಾಡಿದಾಗ ಅವು ನೈಟ್ರೊಸಮೈನ್‌ಗಳಾಗಿ ರೂಪಾಂತರಗೊಳ್ಳುತ್ತವೆ. ಅವುಗಳಲ್ಲಿ ಹೆಚ್ಚಿನವು ಕಾರ್ಸಿನೋಜೆನಿಕ್ ಆಗಿರುತ್ತವೆ.

ಮೊಟ್ಟೆ: ಅಗಾಧ ಪ್ರೊಟೀನ್​ ಅಂಶವಿರುವ ಮೊಟ್ಟೆಯನ್ನು ಬಿಸಿ ಮಾಡುವುದು ಅಪಾಯಕಾರಿಯೇ. ಫ್ರೈ ಮಾಡಿದ ಮೊಟ್ಟೆಗಳನ್ನು ತಕ್ಷಣ ತಿನ್ನಬೇಕು. ಅದನ್ನು ಮತ್ತೆ ಬಿಸಿ ಮಾಡಿದರೆ ನೈಟ್ರೋಜನ್​ ಆಮ್ಲ ಬಿಡುಗಡೆಯಾಗಿ ಕ್ಯಾನ್ಸರ್​​ಗೆ ಕಾರಣವಾಗುತ್ತದೆ.

ಬೀಟ್​ರೂಟ್​​: ಇದೂ ಕೂಡ ಪಾಲಕ್​ ಸೊಪ್ಪಿನಂತೆ ಅಪಾಯಕಾರಿ.

ಮಶ್ರೂಮ್​: ಬಿಳಿ ಮತ್ತು ಕಂದು ಬಟನ್​ ಮಶ್ರೂಮ್​ಗಳನ್ನು ಹಾಗೆಯೇ ತಿನ್ನಬಹುದು. ಉಳಿದ ಮಶ್ರೂಮ್​ಗಳನ್ನು ಬೇಯಿಸಿಯೇ ತಿನ್ನಬೇಕು. ಅಡುಗೆ ಮಾಡಿದ ಮರುದಿನ ಇದನ್ನು ಮತ್ತೆ ಫ್ರಿಡ್ಜ್​ನಲ್ಲಿಟ್ಟು ಬಿಸಿ ಮಾಡಬಾರದು. ಇದರಲ್ಲಿನ ಪ್ರೋಟಿನ್​ಗಳು ಕಿಣ್ವ, ಬ್ಯಾಕ್ಟೀರಿಯಾಗಳಿಂದ ಹಾನಿಯಾಗುತ್ತದೆ. ಇದರಿಂದ ಹೊಟ್ಟೆಯೊಳಗೆ ಸಮಸ್ಯೆ ಕಾಡುತ್ತದೆ.

ಚಿಕನ್​: ಚಿಕನ್​ ಅನ್ನು ಕೂಡ ಫ್ರಿಡ್ಜ್​ನಲ್ಲಿಟ್ಟು ನಂತರ ಬಿಸಿ ಮಾಡಿ ಸೇವಿಸುವುದರಿಂದ ಇದರಲ್ಲಿನ ಪ್ರೊಟೀನ್​ಗಳು ಸಂಪೂರ್ಣವಾಗಿ ಬದಲಾಗುತ್ತವೆ. ಇದು ಜೀರ್ಣಕ್ರಿಯೆ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ಇದನ್ನು ಅಧಿಕ ತಾಪಮಾನದಲ್ಲಿ ಬಿಸಿ ಮಾಡಬಾರದು.

ಆಲೂಗಡ್ಡೆ: ಕೊಠಡಿಯ ತಾಪಮಾನದಲ್ಲಿ ಬೇಯಿಸಿದ ಆಲುಗಡ್ಡೆಯನ್ನು ಫ್ರಿಡ್ಜ್​ನಲ್ಲಿಟ್ಟು ಬಳಿಕ ಬಿಸಿ ಮಾಡುವುದರಿಂದ ಇದು ಕ್ಲೋಸ್ಟ್ರಿಡಿಯಮ್ ಬೊಟುಲಿನಮ್ ಬ್ಯಾಕ್ಟೀರಿಯಾ ಬೆಳವಣಿಗೆಗೆ ಕಾರಣವಾಗುತ್ತದೆ. ಈ ಬ್ಯಾಕ್ಟೀರಿಯಾದಿಂದ ಕಲುಷಿತವಾಗಿರುವ ಆಹಾರವನ್ನು ತಿನ್ನುವುದು ಬಹಳ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು.

ಇದನ್ನೂ ಓದಿ: Benefits of Amla.. ಆಮ್ಲಾ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ; ವೈದ್ಯರ ವಿವರಣೆ ಇಲ್ಲಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.