ETV Bharat / sukhibhava

ತೂಕ ಇಳಿಸಿಕೊಳ್ಳಬೇಕಾ ಹಾಗಾದರೆ ಈ 7 ನೈಸರ್ಗಿಕ ಮಾರ್ಗಗಳನ್ನು ಅನುಸರಿಸಿ!

author img

By

Published : May 20, 2022, 9:56 PM IST

7 natural ways to lose weight
ತೂಕ ಇಳಿಸಿಕೊಳ್ಳಬೇಕಾ ಹಾಗಾದರೆ ಈ 7 ನೈಸರ್ಗಿ ಮಾರ್ಗಗಳನ್ನು ಅನುಸರಿಸಿ!

ಹಲವಾರು ನೈಸರ್ಗಿಕ ಚಿಕಿತ್ಸಾ ಮಾರ್ಗಗಳು ಇದ್ದರೂ ಜನರು ಯಾವುದ್ಯಾವುದೋ ಮಾರ್ಗಗಳ ಮೊರೆ ಹೋಗಿ ತಮ್ಮ ಜೀವವನ್ನು ಅಪಾಯಕ್ಕೆ ತಳ್ಳುವ ವರದಿಗಳು ಹೆಚ್ಚಾಗುತ್ತಲೇ ಇವೆ. ಆದರೆ ಈ ಕಾಸ್ಮೆಟಿಕ್ ವಿಧಾನಗಳನ್ನು ತಪ್ಪಿಸಿ, ಶಸ್ತ್ರಚಿಕಿತ್ಸೆಯಿಲ್ಲದೇ ಕೊಬ್ಬು ಕಡಿಮೆ ಮಾಡಲು 7 ಮಾರ್ಗಗಳಿವೆ. ಅವುಗಳೆಂದರೆ,

ಶಸ್ತ್ರಚಿಕಿತ್ಸೆಯ ಮೂಲಕ ಕೊಬ್ಬು ಕಡಿಮೆ ಮಾಡುವುದು ಕೆಲವೊಮ್ಮೆ ಮಾರಣಾಂತಿಕವಾಗಬಹುದು. ಇದಕ್ಕೆ ಉದಾಹರಣೆ ಎಂಬಂತೆ, ಇತ್ತೀಚೆಗಷ್ಟೇ ಕನ್ನಡದ ಜನಪ್ರಿಯ ಕಿರುತೆರೆ ನಟಿ ಚೇತನಾ ರಾಜ್, ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಕೊಬ್ಬು- ಮುಕ್ತ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ (ಲಿಪೊಸಕ್ಷನ್) ಪಡೆದುಕೊಂಡು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ.

ದೇಹದ ಕೊಬ್ಬು ಕಳೆದುಕೊಳ್ಳುವುದು ಕಷ್ಟಕರವಾದ ಪ್ರಕ್ರಿಯೆ. ಏಕೆಂದರೆ ಇದಕ್ಕೆ ಸಾಕಷ್ಟು ತಾಳ್ಮೆ ಹಾಗೂ ನಿರಂತರ ಪ್ರಯತ್ನ ಬೇಕು. ಆದರೆ, ಕೊಬ್ಬು ನಷ್ಟದ ಶಸ್ತ್ರಚಿಕಿತ್ಸೆಗೆ ಹೋಗುವುದಕ್ಕಿಂತ ಮುನ್ನ ನಾವು ಸ್ವಾಭಾವಿಕವಾಗೇ ದೇಹದ ಕೊಬ್ಬನ್ನು ಕರಗಿಸುವತ್ತ ಹೆಚ್ಚಿನ ಗಮನ ಕೊಡಬೇಕು. ಅದಕ್ಕೆ 7 ಅತ್ಯಂತ ಪರಿಣಾಮಕಾರಿ ತೂಕ ನಷ್ಟ ತಂತ್ರಗಳು ಇಲ್ಲಿವೆ.

ಬಾರ ಎತ್ತುವ ತರಬೇತಿ: ಬಾರ ಎತ್ತುವ ತರಬೇತಿಯು ಒಂದು ರೀತಿಯ ವ್ಯಾಯಾಮವಾಗಿದ್ದು, ಅದು ನಿಮ್ಮ ಸ್ನಾಯುಗಳನ್ನು ಸಂಕುಚಿತಗೊಳಿಸುವುದನ್ನು ಒಳಗೊಂಡಿರುತ್ತದೆ. ಇದು ಬಾರ ಎತ್ತುವ ವಿಧಾನವಾಗಿದ್ದು, ಕಾಲಾನಂತರದಲ್ಲಿ ಸ್ನಾಯುಗಳ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಬಾರ ಎತ್ತುವ ತರಬೇತಿಯು ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ವಿಶೇಷವಾಗಿ ಕೊಬ್ಬು ನಷ್ಟಕ್ಕೆ ಇದು ತುಂಬಾ ಸಹಕಾರಿಯಾಗಿದೆ. ಸಂಶೋಧನೆಗಳಿಂದಲೂ ಇದು ದೃಢವಾಗಿದೆ.

ಪ್ರೋಟಿನ್​ ಭರಿತ ಆಹಾರ: ಹೆಚ್ಚು ಪ್ರೋಟೀನ್ ಭರಿತ ಆಹಾರಗಳನ್ನು ತಿನ್ನುವುದು ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಹಸಿವು ಕಡಿಮೆ ಮಾಡಲು ಈ ರೀತಿಯ ಆಹಾರ ಸೇವನೆ ನೆರವು ನೀಡುತ್ತದೆ. ವಾಸ್ತವವಾಗಿ, ಹೆಚ್ಚಿನ ಗುಣಮಟ್ಟದ ಪ್ರೋಟೀನ್ ಅನ್ನು ನಿಯಮಿತವಾಗಿ ತಿನ್ನುವುದರಿಂದ ಹೆಚ್ಚುವರಿ ದೇಹದ ಕೊಬ್ಬು ಮತ್ತು ಸ್ಥೂಲಕಾಯತೆ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳಿಂದ ಕಂಡು ಬಂದಿದೆ.

ಹೆಚ್ಚು ನಿದ್ರೆ ಮಾಡಿ: ಆರೋಗ್ಯಕರ ತೂಕ ಹೊಂದಲು ಮತ್ತು ದೇಹವನ್ನ ಹೆಚ್ಚಿನ ತೂಕದಿಂದ ಮುಕ್ತಗೊಳಿಸಲು ನಿದ್ರೆ ಸಹಾಯ ಮಾಡುತ್ತದೆ. ಸ್ವಲ್ಪ ಮುಂಚಿತವಾಗಿ ಮಲಗುವುದು ಹಾಗೂ ಬೇಗ ಎಳುವ ಅಭ್ಯಾಸ ರೂಢಿಸಿಕೊಳ್ಳಿ. ನಿಯಮಿತ ನಿದ್ರೆಯ ವೇಳಾಪಟ್ಟಿಗೆ ಅಂಟಿಕೊಳ್ಳಿ. ಸಂಜೆ ಚಹಾ, ಕಾಫಿ ಸೇರಿದಂತೆ ಕೆಫಿನ್ ಅಂಶಗಳನ್ನು ಸೇವಿಸುವುದರಿಂದ ದೂರವಿರಿ. ನಿದ್ರೆಗೆ ಮೊದಲು, ಮೊಬೈಲ್​, ಟಿವಿ ಸೇರಿದಂತೆ ಎಲೆಕ್ಟ್ರಾನಿಕ್​ ವಸ್ತುಗಳಿಂದ ದೂರವಿದ್ದು ಶಾಂತತೆ ಕಡೆ ಹೆಚ್ಚಿನ ಗಮನ ಕೊಡುವುದರಿಂದಲೂ ಆರೋಗ್ಯ ಕಾಪಾಡಿಕೊಳ್ಳಬಹುದು.

ಸಕ್ಕರೆ ಪಾನೀಯಗಳನ್ನು ತಪ್ಪಿಸಿ: ದೀರ್ಘಕಾಲೀನ, ನಿರಂತರ ಕೊಬ್ಬು ನಷ್ಟವನ್ನು ಉತ್ತೇಜಿಸುವ ಸರಳ ವಿಧಾನವೆಂದರೆ ಸಕ್ಕರೆ ಪಾನೀಯಗಳಿಂದ ಆದಷ್ಟು ದೂರ ಇರಿ. ಸೋಡಾದಂತಹ ಸಕ್ಕರೆ - ಸಿಹಿ ಪಾನೀಯಗಳು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಇದು ಅತಿಯಾಗಿ ತಿನ್ನುವ ಅಪಾಯವನ್ನು ಹೆಚ್ಚಿಸುತ್ತದೆ.

ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳ ಬದಲಿಗೆ, ಧಾನ್ಯಗಳನ್ನು ಸೇವಿಸಿ: ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಿದಷ್ಟು ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ನೀವು ಹೆಚ್ಚು ತೂಕ ಇದ್ದರೆ ಅದನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ನಿಮ್ಮ ಹೃದಯದ ಕಾಳಜಿ ಇರಲಿ: ವ್ಯಾಯಾಮದ ಅತ್ಯಂತ ಪ್ರಚಲಿತ ವಿಧವೆಂದರೆ ಕಾರ್ಡಿಯೋ, ಇದನ್ನು ಏರೋಬಿಕ್ ವ್ಯಾಯಾಮ ಎಂದೂ ಕರೆಯುತ್ತಾರೆ. ಇದು ಹೃದಯ ಮತ್ತು ಶ್ವಾಸಕೋಶವನ್ನು ಸರಿಯಾಗಿಡಲು ಮಾಡುವ ವ್ಯಾಯಾಮವಾಗಿದೆ. ನಿಮ್ಮ ವ್ಯಾಯಾಮದಲ್ಲಿ ಕಾರ್ಡಿಯೊವನ್ನು ಸೇರಿಸುವುದು ಕೊಬ್ಬನ್ನು ಕರಗಿಸಲು ಪರಿಣಾಮಕಾರಿ ವಿಧಾನವಾಗಿದೆ. ಏರೋಬಿಕ್​ ಮಾಡುವುದರಿಂದ ತೂಕ ನಷ್ಟ ಪರಿಣಾಮಕಾರಿಯಾಗಿ ಮಾಡಿಕೊಳ್ಳಬಹುದು. ಓಟ, ನಡಿಗೆ, ಸೈಕ್ಲಿಂಗ್ ಮತ್ತು ಈಜುಗಳಿಂದ ನಿಮ್ಮ ಹೃದಯವನ್ನು ಆರೋಗ್ಯವಾಗಿಡಬಹುದು. ಅಷ್ಟೇ ಅಲ್ಲ ತೂಕ ನಷ್ಟವನ್ನೂ ಮಾಡಿಕೊಳ್ಳಬಹುದು.

ಪ್ರೋಬಯಾಟಿಕ್‌ ಪ್ರಯೋಜನ: ಪ್ರೋಬಯಾಟಿಕ್‌ಗಳು ನಿಮ್ಮ ಕರುಳಿನಲ್ಲಿ ವಾಸಿಸುವ ಸಹಾಯಕ ಬ್ಯಾಕ್ಟೀರಿಯಾಗಳಾಗಿವೆ. ಈ ಬ್ಯಾಕ್ಟೀರಿಯಾಗಳು ವಾಸ್ತವವಾಗಿ ಪ್ರತಿರಕ್ಷೆಯಿಂದ ಹಿಡಿದು ಮಾನಸಿಕ ಆರೋಗ್ಯದವರೆಗೆ ಎಲ್ಲದಕ್ಕೂ ಸಂಬಂಧ ಹೊಂದಿವೆ. ಆಹಾರ ಅಥವಾ ಪೂರಕಗಳ ಮೂಲಕ ನಿಮ್ಮ ಪ್ರೋಬಯಾಟಿಕ್ ಸೇವನೆಯನ್ನು ಹೆಚ್ಚಿಸುವುದದರಿಂದ ಕೊಬ್ಬನ್ನು ವೇಗವಾಗಿ ಕರಗಿಸಲು ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನು ಓದಿ:ಕ್ರ್ಯಾನ್‌ಬೆರಿ ಸೇವಿಸುವುದರಿಂದ ಜ್ಞಾಪಕಶಕ್ತಿ ಹೆಚ್ಚಾಗಿ, ಬುದ್ಧಿಮಾಂದ್ಯತೆ ಕಡಿಮೆಯಾಗುತ್ತದೆ : ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.