ETV Bharat / state

ಯಾದಗಿರಿ: ವಾಂತಿ, ಭೇದಿಯಿಂದ 19 ಜನ ಅಸ್ವಸ್ಥ

author img

By ETV Bharat Karnataka Team

Published : Aug 22, 2023, 10:34 PM IST

Updated : Aug 22, 2023, 10:57 PM IST

19-people-are-sick-in-gajrakota-village-at-yadgiri
ಯಾದಗಿರಿ: ವಾಂತಿ -ಭೇದಿ ಇತರೆ ಆರೋಗ್ಯ ಸಮಸ್ಯೆಯಿಂದ 19 ಜನ ಅಸ್ವಸ್ಥ

ಗುರುಮಠಕಲ್​ನಲ್ಲಿ ವಾಂತಿ, ಭೇದಿ ಪ್ರಕರಣಗಳು ವರದಿಯಾಗಿದ್ದು, ಹಲವರು ಅಸ್ವಸ್ಥರಾಗಿದ್ದಾರೆ.

ಡಾ.ಎಂ.ಎಂ. ರಹಿಲ್

ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿನ ಗಾಜರಕೋಟ ಗ್ರಾಮದಲ್ಲಿ ಸೋಮವಾರ ವಾಂತಿ ಭೇದಿ ಪ್ರಕರಣಗಳು ವರದಿಯಾಗಿದ್ದು, ಮಂಗಳವಾರ ಮಧ್ಯಾಹ್ನದ ವೇಳೆಗೆ 19 ಜನರು ಅಸ್ವಸ್ಥರಾಗಿದ್ದಾರೆ. ಗಾಜರಕೋಟ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ಎಂ.ಎಂ. ರಹಿಲ್ ಮಾತನಾಡಿ, "ಈವರೆಗೆ ಒಟ್ಟು 19 ಪ್ರಕರಣಗಳು ಕಂಡುಬಂದಿದ್ದು, 8 ಜನರಲ್ಲಿ ಮಾತ್ರ ವಾಂತಿ-ಭೇದಿ ಸಮಸ್ಯೆ ಇದೆ. ಉಳಿದವರಿಗೆ ಹೊಟ್ಟೆ ನೋವು, ಜ್ವರ, ಗೆಮ್ಮು ನೆಗಡಿ ಇದೆ. ಅವರು ಕೂಡ ಆಸ್ಪತ್ರೆಗೆ ದಾಖಲಾಗಿ ಗುಣಮುಖರಾಗಿ ಹೋಗಿದ್ದಾರೆ. ಕಲುಷಿತ ನೀರಿನಿಂದ ಸಮಸ್ಯೆಯಾಗಿದೆ. ನಮ್ಮ ಸಿಬ್ಬಂದಿ ನೀರಿನ ಮಾದರಿಯನ್ನು ಸಂಗ್ರಹಿಸಿ ನೀರು ಕುಡಿಯಲು ಯೋಗ್ಯವೇ ಎಂದು ಪರೀಕ್ಷಿಸಿದ ನಂತರ ಜನರ ಗಮನಕ್ಕೆ ತರಲಾಗುತ್ತದೆ" ಎಂದು ತಿಳಿಸಿದರು.

ತಾಲೂಕು ವೈದ್ಯಾಧಿಕಾರಿ ಡಾ. ಹಣಮಂತರೆಡ್ಡಿ ಮಾತನಾಡಿ, "ಗುರುಮಠಕಲ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಐದು ಜನರನ್ನು ಕಳುಹಿಸಲಾಗಿದ್ದು, ವೈದ್ಯಕೀಯ ಆರೈಕೆ ಪಡೆದು ಗುಣಮುಖರಾಗಿದ್ದಾರೆ. ವಯಸ್ಸಾದ ಒಬ್ಬರಲ್ಲಿ ಕಡಿಮೆ ರಕ್ತದೊತ್ತಡವು ಕಾಣಿಸಿಕೊಂಡಿದ್ದು ಯಾದಗಿರಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸದ್ಯ ಐವರು ವೈದ್ಯಕೀಯ ಆರೈಕೆ ಪಡೆಯುತ್ತಿದ್ದು, 2 ಜನ ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ. ಕಲುಷಿತ ನೀರಿನ ಸೇವನೆಯಿಂದ ಶಿವಪುರ ಮತ್ತು ಗಾಜರಕೋಟ ಗ್ರಾಮದಲ್ಲಿ ವಾಂತಿ-ಬೇಧಿ ಪ್ರಕರಣ ಉಲ್ಬಣಗೊಂಡಿದೆ. ಚಿಕಿತ್ಸೆ ನೀಡುತ್ತಿದ್ದೇವೆ. ಯಾವುದೇ ಪ್ರಾಣಾಪಾಯವಿಲ್ಲ" ಎಂದು ಹೇಳಿದರು.

ಇದನ್ನೂ ಓದಿ: ಕೈಕೊಟ್ಟ ಮಳೆ.. ಚಿಗುರುವ ಮುನ್ನವೇ ಕಮರಿದ ಬೆಳೆಗಳು.. ರೈತರು ಕಂಗಾಲು

Last Updated :Aug 22, 2023, 10:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.