ETV Bharat / state

ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂಪಾಯಿ ಆಫರ್ ನೀಡಿದ್ದರೆ ಬಹಿರಂಗಪಡಿಸಲಿ: ಯತ್ನಾಳ್ ಸವಾಲು

author img

By ETV Bharat Karnataka Team

Published : Nov 1, 2023, 1:25 PM IST

ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಾಗ್ದಾಳಿ ನಡೆಸಿದರು.

MLA Basanagouda Patil Yatnal challenged the state Congress government
MLA Basanagouda Patil Yatnal challenged the state Congress government

ಶಾಸಕ ಬಸನಗೌಡ ಪಾಟೀಲ ಯತ್ನಾಳ್

ವಿಜಯಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಜನತೆಗೆ ಉಚಿತ ಗ್ಯಾರಂಟಿ ಹೆಸರಿನಲ್ಲಿ ದ್ರೋಹ ಎಸಗುತ್ತಿದ್ದು, ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆರೋಪ ಮಾಡಿದ್ದಾರೆ. ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಇಂದು ಜಿಲ್ಲಾಡಳಿತದ ಅಂಗವಾಗಿ ನಗರದ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ, ಅವರು ಮಾತನಾಡಿದರು.

ಗ್ಯಾರಂಟಿ ಹಾಗೂ ಭಾಗ್ಯಗಳ ಕುರಿತು ಭಾಷಣದಲ್ಲಿ ಪ್ರಸ್ತಾಪ ಮಾಡುವಂತೆ ಕಾಂಗ್ರೆಸ್​ ಸರ್ಕಾರ ಯಾವುದೇ ಯೋಜನೆಗಳನ್ನು ಕಾರ್ಯರೂಪದಲ್ಲಿ ತಂದಿಲ್ಲ. ತನ್ನ ತಪ್ಪು ಮುಚ್ಚಿಕೊಳ್ಳುವ ನೆಪದಲ್ಲಿ ಹುಲಿ ಉಗುರು, ಜಿಲ್ಲೆಯ ಹೆಸರು ಬದಲಾವಣೆಯಂತಹ ಕೆಲಸಕ್ಕೆ ಕೈಹಾಕುವ ಮೂಲಕ ಜನರ ಗಮನ ಬೇರೆ ಕಡೆ ಸೆಳೆಯುತ್ತಿದೆ. ಸರ್ಕಾರ ಪತನದ ಬಗ್ಗೆ ರಮೇಶ್​ ಜಾರಕಿಹೊಳಿ ಹೇಳಿದ ಮಾತು ನಿಜ ಅನ್ನಿಸುತ್ತಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ತಮ್ಮ ಸರ್ಕಾರದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂಪಾಯಿ ಆಫರ್ ಮತ್ತು ಆಪರೇಷನ್ ಕಮಲ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಯತ್ನಾಳ್, ಯಾವ ಶಾಸಕರಿಗೆ ಆಫರ್ ಕೊಟ್ಟಿದ್ದಾರೆ ಅನ್ನೋದನ್ನು ಅವರು ಬಹಿರಂಗ ಮಾಡಲಿ. ತಮ್ಮ ಬಳಿ ವಿಡಿಯೋ ಮತ್ತು ಆಡಿಯೋ ಇದೆ ಎನ್ನುತ್ತಿದ್ದಾರೆ. ಇದ್ದರೆ ಬಹಿರಂಗಪಡಸಲಿ ಎಂದು ಸವಾಲು ಹಾಕಿದರು.

ನಕಲಿ ವಿಡಿಯೋ ಸೃಷ್ಟಿಕರ್ತರೇ ಕಾಂಗ್ರೆಸ್ಸಿನ ಮಹಾನಾಯಕರಿದ್ದಾರೆ. ನಕಲಿ ಸಿಡಿ ಮಾಡುವ ಕಂಪನಿ ಕರ್ನಾಟಕ ಸರ್ಕಾರದಲ್ಲಿದೆ. ಮಂತ್ರಿಯೊಬ್ಬರ ಆಪ್ತ ಬಾಂಗ್ಲಾ, ಪಾಕಿಸ್ತಾನದವರನ್ನು ಮಂತ್ರಿ ಮಾಡುವ ದೊಡ್ಡ ಷಡ್ಯಂತ್ರ ನಡೆಸಿದ್ದಾರೆ. ರಮೇಶ್​ ಜಾರಕಿಹೊಳಿ ಹೇಳಿದಂತೆ ನಕಲಿ ಸಿಡಿ ವಿಡಿಯೋ ಆಡಿಯೋ ಮಾಡುವ ಶಕ್ತಿ ಕೂಡ ಕಾಂಗ್ರೆಸ್ಸಿನವರಿಗೆ ಇದೆ. ಅಂತಹ ಸಿಡಿ ಇದ್ದರೆ ಬಹಿರಂಗಪಡಿಸಲಿ. ತನಿಖೆಗೆ ಕೊಡಲಿ. ಸುಮ್ಮನೆ ಬೆದರಿಕೆ ಹಾಕುವುದು ಬೇಡ ಎಂದು ಯತ್ನಾಳ್​ ಹೇಳಿದ್ರು.

ಇದಕ್ಕೂ ಮುನ್ನ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್, ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ರಾಜ್ಯದ ಜನತೆಗೆ ಶುಭಶಯ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಲ್ಲಾ ಪಂಚಾಯತ್​ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

ಇದನ್ನೂ ಓದಿ: 68ನೇ ಕರ್ನಾಟಕ ರಾಜ್ಯೋತ್ಸವ: ಕಂಠೀರವ ಸ್ಟೇಡಿಯಂನಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.