ETV Bharat / state

ಬಾಲಾಜಿ ಶುಗರ್ಸ್​ ಕಾರ್ಖಾನೆ ಮೇಲೆ ಐಟಿ ದಾಳಿ

author img

By

Published : Apr 20, 2023, 9:19 PM IST

Updated : Apr 20, 2023, 10:55 PM IST

ಶುಗರ್ಸ್​ ಕಾರ್ಖಾನೆ ಮೇಲೆ ಐಟಿ ಅಧಿಕಾರಿಗಳ ದಾಳಿ
ಶುಗರ್ಸ್​ ಕಾರ್ಖಾನೆ ಮೇಲೆ ಐಟಿ ಅಧಿಕಾರಿಗಳ ದಾಳಿ

ವಿಜಯಪುರ ಜಿಲ್ಲೆಯ ಯರಗಲ್ ಬಿ.ಕೆ ಗ್ರಾಮದ ಬಳಿ ಇರುವ ಬಾಲಾಜಿ ಶುಗರ್ಸ್​ ಕಾರ್ಖಾನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ದಾಳಿ ನಡೆಸಿ ದಾಖಲಾತಿಗಳ ಪರಿಶೀಲನೆ ನಡೆಸಿದ್ದಾರೆ.

ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಯರಗಲ್ ಬಿ.ಕೆ ಗ್ರಾಮದ ಸಮೀಪದಲ್ಲಿರುವ ಬಾಲಾಜಿ ಶುಗರ್ಸ್​ ಕಾರ್ಖಾನೆ ಮೇಲೆ ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು ದಿಢೀರ್​ ದಾಳಿ ನಡೆಸಿದ್ದಾರೆ. ಮುದ್ದೇಬಿಹಾಳದ ಕಾರ್ಖಾನೆಯಲ್ಲಿ ಬೆಳಗ್ಗೆ ಏಳು ಮಂದಿ ಐಟಿ ಅಧಿಕಾರಿಗಳ ತಂಡ ದಾಖಲಾತಿಗಳ ಪರಿಶೀಲನೆ ನಡೆಸಿದ್ದಾರೆ.

ಕಳೆದ ತಿಂಗಳು ಮಾಜಿ ಸಚಿವರೊಬ್ಬರ ಭಾವಚಿತ್ರ ಹೊಂದಿರುವ ವಾಲ್ ಕ್ಲಾಕ್, ಟೀ ಶರ್ಟ್ ಸೇರಿದಂತೆ ಕೊಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಇಲ್ಲಿ ಸಿಕ್ಕಿದ್ದವು. ಚುನಾವಣಾ ಆಯೋಗದ ಅಧಿಕಾರಿಗಳು ದಾಳಿ ನಡೆಸಿದ್ದಾಗ ವಸ್ತುಗಳು ಪತ್ತೆಯಾಗಿದ್ದವು. ಈ ಸಂಬಂಧ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ದಾಖಲೆಗಳ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಚುನಾವಣೆ ಅಕ್ರಮ ಕುರಿತು ಹಲವು ದಿನಗಳಿಂದ ಬಾಲಾಜಿ ಶುರ್ಗಸ್ ಮೇಲೆ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದರು. ಇಂದು ಲೆಕ್ಕಪತ್ರಗಳು ಹಾಗೂ ಇತರೆ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಕಾರ್ಖಾನೆ ಮಾಲೀಕ ಹೆಚ್​.ಎಲ್. ಪಾಟೀಲ್ ಮನೆ ಮೇಲೂ ದಾಳಿ ನಡೆದಿದೆ.

ಕೆಜಿಎಫ್ ಬಾಬು ಮನೆ ಮೇಲೆ ಐಟಿ ದಾಳಿ: ಇನ್ನೊಂದೆಡೆ, ತೆರಿಗೆ ವಂಚನೆ ಸೇರಿದಂತೆ ಚುನಾವಣಾ ಅಕ್ರಮ ನಡೆಸುತ್ತಿರುವ ಶಂಕೆಯ ಮೇರೆಗೆ ಯೂಸುಫ್ ಶರೀಫ್ ಅಲಿಯಾಸ್ ಕೆಜಿಎಫ್ ಬಾಬು ಅವರ ಮನೆ ಮೇಲೆ (ಏಪ್ರಿಲ್-19 -2023) ರಂದು ದಾಳಿ ನಡೆಸಿದ್ದ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಸೀರೆ ಸೇರಿದಂತೆ ಹಲವು ವಸ್ತುಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದರು.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್​ ಆಕ್ಷಾಂಕಿಯಾಗಿದ್ದ ಕೆಜಿಎಫ್ ಬಾಬುಗೆ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಪತ್ನಿ ರುಕ್ಸಾನ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಳೆದ ಎರಡು ದಿನಗಳ ಹಿಂದಷ್ಟೇ ನಾಮಪತ್ರ ಸಲ್ಲಿಸಿದ್ದರು‌. ಚುನಾವಣಾ ತಯಾರಿಯಲ್ಲಿರುವಾಗಲೇ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.‌ ವಸಂತನಗರದಲ್ಲಿರುವ ಕೆಜಿಎಫ್ ಬಾಬು ಅವರ ನಿವಾಸ ರುಕ್ಸಾನ ಪ್ಯಾಲೇಸ್​ಗೆ ಐಟಿ ಅಧಿಕಾರಿಗಳು ದಾಳಿ‌ ನಡಸಿದ್ದರು. ಶೋಧ ಕಾರ್ಯಾಚರಣೆಯಲ್ಲಿ 2,000 ಸಾವಿರಕ್ಕೂ ಡಿಮ್ಯಾಂಡ್ ಡ್ರಾಫ್ಟ್ (ಡಿ.ಡಿ), ಒಂದು ಸೀರೆಗೆ ಐದು ಸಾವಿರ ಬೆಲೆ ಹೇಳಲಾಗುತ್ತಿರುವ 5 ಸಾವಿರಕ್ಕೂ ಹೆಚ್ಚು ಸೀರೆಗಳು ದೊರೆತಿದ್ದವು. ಸೀರೆ ಹಾಗೂ ಡಿ ಡಿ ಕವರ್​ಗಳ ಮೇಲೆ ಕೆಜಿಎಫ್ ಬಾಬು ಭಾವಚಿತ್ರವಿರುವುದು ಕಂಡುಬಂದಿತ್ತು.

ಕೆಜಿಎಫ್ ಬಾಬು ಮನೆ ಮೇಲೆ‌ ನಡೆಯುತ್ತಿರುವ ದಾಳಿ ಇದೇ ಮೊದಲೇನಲ್ಲ. ಕಳೆದ ವರ್ಷವೂ ದಾಳಿ ನಡೆದಿತ್ತು. ಅಲ್ಲದೇ ಅಕ್ರಮವಾಗಿ ಹಣ ವರ್ಗಾವಣೆ ಕಾಯ್ದೆಯಡಿ‌ ಪ್ರಕರಣ ದಾಖಲಿಸಿಕೊಂಡು ಜಾರಿ ನಿರ್ದೇಶನಾಲಯ‌ (ಇ.ಡಿ) ಪ್ರಕರಣ ದಾಖಲಿಸಿಕೊಂಡಿತ್ತು.

ಇದನ್ನೂ ಓದಿ: ಕೆಜಿಎಫ್ ಬಾಬು ಮನೆ ಮೇಲೆ ಐಟಿ ದಾಳಿ: ಏನೆಲ್ಲ ಸಿಕ್ತು?

Last Updated :Apr 20, 2023, 10:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.