ETV Bharat / state

ಬೈಕ್​-ಲಾರಿ ಮಧ್ಯೆ ಡಿಕ್ಕಿ.. ತಂದೆ-ಮಗನ ಮೇಲೆ ಉರುಳಿ ಬಿದ್ದ ವಾಹನ

author img

By

Published : Apr 13, 2022, 11:20 AM IST

Father and son died in road accident in Vijayapura, Lorry overturns in Vijayapur, Vijayapura accident news, ವಿಜಯಪುರದಲ್ಲಿ ರಸ್ತೆ ಅಪಘಾತದಲ್ಲಿ ತಂದೆ ಮಗ ಸಾವು, ವಿಜಯಪುರದಲ್ಲಿ ಲಾರಿ ಪಲ್ಟಿ, ವಿಜಯಪುರ ಅಪಘಾತ ಸುದ್ದಿ,
ತಂದೆ-ಮಗನ ಮೇಲೆ ಉರುಳಿ ಬಿದ್ದ ವಾಹನ

ವಿಜಯಪುರ ಜಿಲ್ಲೆಯಲ್ಲಿ ದುರಂತ ಸಂಭವಿಸಿದೆ. ಬೈಕ್​-ಲಾರಿ ಮಧ್ಯೆ ಅಪಘಾತ ಸಂಭವಿಸಿದ್ದು, ಲಾರಿಯೊಂದು ತಂದೆ-ಮಗನ ಮೇಲೆ ಉರುಳಿಬಿದ್ದಿರುವ ಘಟನೆ ನಡೆದಿದೆ.

ವಿಜಯಪುರ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಲಾರಿ ಕೆಳಗೆ ಸಿಲುಕಿಕೊಂಡು ಅಪ್ಪ-ಮಗ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ದೇವರ ಹಿಪ್ಪರಗಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಮೃತರನ್ನು ರಾಮ ಶರಣಪ್ಪ‌ ಗೊರನಾಳ (45), ಮಗ ಲಕ್ಷ್ಮಣ (22) ಎಂದು ಗುರುತಿಸಲಾಗಿದೆ.

ತಂದೆ-ಮಗನ ಮೇಲೆ ಉರುಳಿ ಬಿದ್ದ ವಾಹನ

ಓದಿ: ಟ್ರೈನ್​ನ ಚೈನ್​ ಎಳೆದು ಪಕ್ಕದ ಹಳಿ ಮೇಲೆ ನಿಂತ ಪ್ರಯಾಣಿಕರು.. ಐವರ ಮೇಲೆ ಹರಿಯಿತು ಮತ್ತೊಂದು ರೈಲು!

ಲಾರಿ-ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ ಬಳಿಕ ಬೈಕ್​ನಲ್ಲಿದ್ದ ತಂದೆ-ಮಗ ರಸ್ತೆ ಮೇಲೆ ಬಿದ್ದಿದ್ದಾರೆ. ಪರಿಣಾಮ ಈ ಇಬ್ಬರ ಮೇಲೆ ಬಿದ್ದಿದೆ. ಲಾರಿ ಕೆಳಗೆ ಸಿಕ್ಕಿಕೊಂಡ ಪರಿಣಾಮ ತಂದೆ-ಮಗ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶವ ಹೊರ ತೆಗೆಯಲು ಸಾರ್ವಜನಿಕರ ಜೊತೆ ಸೇರಿ ಪೊಲೀಸರು ಹರಸಾಹಸ ಪಟ್ಟರು.

ಓದಿ: ಟ್ರ್ಯಾಕ್ಟರ್, ಟಾಟಾ ಏಸ್ ನಡುವೆ ಡಿಕ್ಕಿ : ಮಹಿಳೆ ಸಾವು, 22 ಮಂದಿಗೆ ಗಾಯ!

ಮೃತ ತಂದೆ-ಮಗ ಕನ್ನೊಳ್ಳಿಯಿಂದ ದೇವರಹಿಪ್ಪರಗಿ ಕಡೆಗೆ ಹೊರಟಾಗ ಈ ಅವಘಡ ಸಂಭವಿಸಿದೆ. ಈ ಘಟನೆ ಕುರಿತು ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.