ETV Bharat / state

ವಿಜಯಪುರದಲ್ಲಿ ಮತ್ತೆ ಭೂಕಂಪನ; ಜನರಲ್ಲಿ ಆತಂಕ

author img

By

Published : Oct 8, 2021, 6:42 AM IST

ಭೂಕಂಪ
ಭೂಕಂಪ

ಕಳೆದ ರಾತ್ರಿ ವಿಜಯಪುರ ‌ನಗರದ ರೈಲ್ವೆ ಸ್ಟೇಷನ್ ಪ್ರದೇಶ, ಅಲ್ಲಾಪುರ ಓಣಿ, ಅಲ್ಲಾಪುರ ತಾಂಡಾ, ಶಿವಗಿರಿ ಬಡಾವಣೆ ಹಾಗು ಗೋಳಗುಮ್ಮಟ ಪ್ರದೇಶ ಸೇರಿದಂತೆ ಹಲವೆಡೆ ಜನರಿಗೆ ಭೂಕಂಪನದ ಅನುಭವವಾಗಿದೆ.

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಪದೇ ಪದೇ ಭೂಮಿ ಕಂಪಿಸಿದ ಅನುಭವವಾಗುತ್ತಿದ್ದು ಜನತೆ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.

ಕಳೆದ ರಾತ್ರಿ ವಿಜಯಪುರ ‌ನಗರದ ರೈಲ್ವೆ ಸ್ಟೇಷನ್ ಪ್ರದೇಶ, ಅಲ್ಲಾಪುರ ಓಣಿ, ಅಲ್ಲಾಪುರ ತಾಂಡಾ, ಶಿವಗಿರಿ ಬಡಾವಣೆ ಹಾಗು ಗೋಳಗುಮ್ಮಟ ಪ್ರದೇಶ ಸೇರಿದಂತೆ ಹಲವೆಡೆ ಜನರಿಗೆ ಭೂಕಂಪನದ ಅನುಭವವಾಗಿದೆ.

ತಡರಾತ್ರಿ 12.20ರ ವೇಳೆಗೆ ಭೂಮಿ ಕಂಪಿಸಿತು. ಆಲಮಟ್ಟಿಯ ಭೂಮಾಪನ ಕೇಂದ್ರದಲ್ಲಿದ್ದ ರಿಕ್ಟರ್ ಮಾಪಕದಲ್ಲಿ ಸರಿಯಾದ ತೀವ್ರತೆ ದಾಖಲಾಗದ ಕಾರಣ ಜಿಲ್ಲಾಡಳಿತಕ್ಕೂ ತಲೆನೋವು ತಂದಿರಿಸಿದೆ.

ಈಗಾಗಲೇ ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಒಂದೇ ತಿಂಗಳಲ್ಲಿ ಆರು ಬಾರಿ ಭೂಮಿ ನಡುಗಿದೆ. ಸೆಪ್ಟೆಂಬರ್ 4ರ ಮಧ್ಯರಾತ್ರಿ ಹಾಗೂ ಸೆಪ್ಟೆಂಬರ್ 11ರಂದು ಜಿಲ್ಲೆಯ ಬಸವನಬಾಗೇವಾಡಿ ಹಾಗೂ ವಿಜಯಪುರ ನಗರದಲ್ಲಿ ಭೂಕಂಪನವಾಗಿತ್ತು.‌ ಆಗ ಭೂ ಮಾಪನ ಕೇಂದ್ರದಲ್ಲಿದ್ದ ರಿಕ್ಟರ್ ಮಾಪಕದಲ್ಲಿ 3.9 ನಷ್ಟು ತೀವ್ರತೆ ದಾಖಲಾಗಿತ್ತು.

ಅಕ್ಟೋಬರ್ 1 ಹಾಗೂ 2 ರಂದು ಮತ್ತೆ ಭೂಕಂಪನ ಜರುಗಿದೆ. ಈ ವೇಳೆ 2.5 ನಷ್ಟು ತೀವ್ರತೆ ದಾಖಲಾಗಿತ್ತು. ಕಳೆದೊಂದು ವಾರದಲ್ಲಿಯೇ ಕೊಲ್ದಾರ್ ಹೊರ್ತಿ, ವಿಜಯಪುರ ನಗರ ಸೇರಿದಂತೆ ಹಲವೆಡೆ ಭೂಮಿ ಕಂಪಿಸಿದ್ದು ಜನರ ಅರಿವಿಗೆ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.