ETV Bharat / state

ಕುಮಾರಸ್ವಾಮಿ ಪ್ರದರ್ಶಿಸಿದ ಪೆನ್​ಡ್ರೈವ್ ಸತ್ಯಾಸತ್ಯತೆ ತನಿಖೆಯಾಗಬೇಕು: ಸಚಿವ ಎಂ ಬಿ ಪಾಟೀಲ್

author img

By

Published : Jul 9, 2023, 5:31 PM IST

ಸಚಿವ ಎಂ ಬಿ ಪಾಟೀಲ್
ಸಚಿವ ಎಂ ಬಿ ಪಾಟೀಲ್

ಹೆಚ್​ಡಿಕೆ ಪೆನ್​ಡ್ರೈವ್ ಬಿಡುಗಡೆ ಮಾಡಿದಾಗ ಸರ್ಕಾರ ಅದಕ್ಕೆ ತಕ್ಕ ಉತ್ತರ ನೀಡುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ತಿಳಿಸಿದ್ದಾರೆ.

ಸಚಿವ ಎಂ ಬಿ ಪಾಟೀಲ್

ವಿಜಯಪುರ : ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಪೆನ್​ಡ್ರೈವ್ ಬಿಡುಗಡೆ ಮಾಡುವ ಹೆದರಿಕೆ ಹಾಕುತ್ತಿದ್ದಾರೆ. ಪೆನ್ ಡ್ರೈವ್ ಒಳಗೆ ಸತ್ಯವಾದದ್ದು ಇದ್ದರೆ ತನಿಖೆ ಮಾಡಬೇಕಾಗುತ್ತೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ತಿಳಿಸಿದರು. ಜಿಲ್ಲೆಯ ಬಬಲೇಶ್ವರ ಚಾಲವೆ ಶೇಗುಣಸಿ ಬಳಿ ಮುಳವಾಡ ಏತನೀರಾವರಿ 3ನೇ ಹಂತದ ಕಾಮಗಾರಿ ನಿರ್ಮಾಣಕ್ಕೆ ಚಾಲನೆ ನೀಡಿ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಪೆನ್​ಡ್ರೈವ್‌ನಲ್ಲಿರುವ ಸತ್ಯಾಸತ್ಯತೆ ತಿಳಿದುಕೊಳ್ಳಬೇಕಾಗುತ್ತೆ. ವೈಸ್ ಡಿಟೆಕ್ಷನ್ ಸರಿಯಾಗಿದೆಯಾ? ಅನ್ನೋದನ್ನು ಕೇಳ್ಬೇಕಾಗುತ್ತೆ. ಈಗೆಲ್ಲ ಮಿಮಿಕ್ರಿ ಬೇರೆ ಮಾಡ್ತಾರೆ. ಯಾರು ಮಾತನಾಡಿದ್ದಾರೆ. ಯಾವ ಸಂದರ್ಭದಲ್ಲಿ ಮಾತನಾಡಿದ್ದಾರೆ, ಎಲ್ಲವು ಕೂಡಾ ತನಿಖೆಯಾಗಬೇಕಾಗುತ್ತೆ ಎಂದರು. ಹೆಚ್​ಡಿಕೆ ಪೆನ್​ಡ್ರೈವ್​ ಬಿಡುಗಡೆ ಮಾಡಿದಾಗ ಅದಕ್ಕೆ ಸರ್ಕಾರ ಉತ್ತರ ಕೊಡುತ್ತದೆ ಎಂದು ಹೇಳಿದರು.

ಇದೇ ವೇಳೆ ಮಠ ಮಾನ್ಯಗಳಿಗೆ ಅನುದಾನ ಕಡಿತ ಕುರಿತು ಮಾಜಿ ಸಚಿವ ಸಿ ಸಿ ಪಾಟೀಲ್​ ಮಾಡಿದ ಆರೋಪಕ್ಕೆ ತಿರುಗೇಟು ನೀಡಿದ ಎಂಬಿಪಿ, ನಮಗೆ ಮಠ-ಮಾನ್ಯಗಳ ಬಗ್ಗೆ ಅಪಾರ ಗೌರವ ಇದೆ. ಈ ವರ್ಷ ನಾವು ಗ್ಯಾರಂಟಿಗಳನ್ನು ಜಾರಿಗೆ ತರುತ್ತಿದ್ದೇವೆ. ಹೀಗಾಗಿ, ಮುಂದಿನ ದಿನಗಳಲ್ಲಿ ಎಲ್ಲ ಮಠ ಮಾನ್ಯಗಳಿಗೆ ಅನುದಾನ ನೀಡುತ್ತೇವೆ ಎಂದು ಭರವಸೆ ನೀಡಿದರು. ಸಿ. ಸಿ ಪಾಟೀಲ್​ ಅವರು ಸ್ವಲ್ಪ‌ ತಾಳ್ಮೆಯಿಂದ ಇರಲಿ, ಅವರದ್ದೇನಾದರೂ ಮಠವಿದೆಯಾ? ಹೇಳಲಿ ಎಂದು ತಿರುಗೇಟು ನೀಡಿದರು.

ನಾವು ಬೇದ-ಭಾವ ಮಾಡಲ್ಲ. ಎಲ್ಲರಿಗೂ ಅನುದಾನ ಕೊಡುತ್ತೇವೆ. ಹಿಂದೂ ಮಠಗಳು, ಕ್ರಿಶ್ಚಿಯನ್ ಚರ್ಚ್​ಗಳಿಗೆ, ಮುಸ್ಲಿಂ ಮಸೀದಿ, ಜೈನರ ಬಸದಿ, ಬೌದ್ಧ ವಿಹಾರಗಳನ್ನ ಸಮಾನವಾಗಿ ಕಾಣ್ತೇವೆ. ಎಲ್ಲರಿಗೂ ಹಣಕಾಸಿನ ಅನುದಾನ‌ ಕೊಡುತ್ತೇವೆ ಎಂದರು.

ಬಜೆಟ್​ಗಿಂತ ನಾಲ್ಕೈದು ಸಾವಿರ ಕೋಟಿ ಜಾಸ್ತಿ ಖರ್ಚು : ಸಿ ಸಿ ಪಾಟೀಲರು ತಮ್ಮ ಬಜೆಟ್​ಗಿಂತ ನಾಲ್ಕೈದು ಸಾವಿರ ಕೋಟಿ ಜಾಸ್ತಿ ಖರ್ಚು ಮಾಡಿದ್ದಾರೆ. ಸಿ ಸಿ ಪಾಟೀಲರು ಯಾಕೆ ಹೆಚ್ಚು ಖರ್ಚು ಮಾಡಿದ್ರು ಗೊತ್ತಲ್ಲ ಎಂದು ಸಚಿವ ಎಂ ಬಿ ಪಾಟೀಲ್​ ಹೇಳಿದರು.

ಇದನ್ನೂ ಓದಿ: ಡೀಸೆಲ್ ಬಸ್‌ಗಳಿಗೆ ಇವಿ ರೂಪ ಕೊಡಲು ತೈವಾನ್ ಒಲವು, ಹೂಡಿಕೆದಾರರೊಂದಿಗೆ ಸರ್ಕಾರ ಸಮಾಲೋಚನೆ

ನೀರಾವರಿ ಇಲಾಖೆಯಲ್ಲಿ 10-15 ಸಾವಿರ ಕೋಟಿ ಹೆಚ್ಚು ಖರ್ಚು ಮಾಡಿದ್ದಾರೆ. ಬಜೆಟ್​ಗಿಂತ ಹೆಚ್ಚು ಯಾಕೆ ಖರ್ಚು ಮಾಡಿದ್ದೀರಿ?. ಜನರನ್ನು ಯಾಕೆ ಮರಳು ಮಾಡಿದ್ದೀರಿ ಎಂದು ಎಂ. ಬಿ ಪಾಟೀಲ ಆರೋಪಿಸಿದರು. ಇದರ‌ ಹಿಂದಿನ ಉದ್ದೇಶ ಏನು ಹಾಗಿದ್ರೆ? ಬಿಬಿಎಂಪಿಯಲ್ಲೂ ಭ್ರಷ್ಟಾಚಾರ ನಡೆದಿದೆ. ಲೂಟಿ ಹೊಡೆಯಲು ಬಜೆಟ್​ಗಿಂತ ಹೆಚ್ಚಿನ ಅನುದಾನ ಖರ್ಚು ಮಾಡಿದ್ದೀರಿ? ಎಂದು ಪ್ರಶ್ನಿಸಿದರು.

ಸಿಎಂ ಬಜೆಟ್ ಪುಸ್ತಕದಲ್ಲಿಯೇ ಹೇಳಿ ಬಿಟ್ಟಿದ್ದಾರೆ: ಬಜೆಟ್​ಗಿಂತ ಹೆಚ್ಚು ಖರ್ಚು ಮಾಡುವಾಗ ನಿಮ್ಮ ಶಿಸ್ತು ಎಲ್ಲಿತ್ತು?. ನೀವು ಮಾಡಿದ ಅಕ್ರಮಗಳನ್ನು, ಅಶಿಸ್ತು ಎಳೆ-ಎಳೆಯಾಗಿ ನಮ್ಮ ಸಿಎಂ ಬಜೆಟ್ ಪುಸ್ತಕದಲ್ಲಿಯೇ ಹೇಳಿ ಬಿಟ್ಟಿದ್ದಾರೆ. ಇವರ ಮುಖ ಏನೂ ಉಳಿದಿಲ್ಲ, ಇವರನ್ನು ಸಿಎಂ ಎಕ್ಸ್​ಪೋಸ್ ಮಾಡಿದ್ದಾರೆ ಎಂದರು.

ಇದನ್ನೂ ಓದಿ: ಕೇಂದ್ರ ಸರ್ಕಾರ ಎಷ್ಟೇ ತೊಂದರೆ ಕೊಟ್ಟರೂ ನಮ್ಮ ಯೋಜನೆ ಅನುಷ್ಠಾನ ಖಚಿತ : ಸಚಿವ ಎಂ ಬಿ ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.