ETV Bharat / state

ಏಡಿ ಹಿಡಿಯಲು ಹೋದವ್ಯಕ್ತಿ ನೀರುಪಾಲು: ಬಲೆ ಹಾಕಿ ಶವ ಹೊರತೆಗೆದ ಮೀನುಗಾರರು!

author img

By

Published : Sep 30, 2019, 9:44 PM IST

ಏಡಿ ಹಿಡಿಯಲು ಹೋದವ್ಯಕ್ತಿ ನೀರುಪಾಲು

ಏಡಿ ಹಿಡಿಯಲೆಂದು ಸಮುದ್ರಕ್ಕೆ ಹೋದ ವ್ಯಕ್ತಿ ನೀರಿನಲ್ಲೇ ಮೃತಪಟ್ಟಿದ್ದು, ಶವ ಪತ್ತೆ ಮಾಡಲು ಬಲೆ ಹಾಕಲಾಗಿತ್ತು. ಮೀನುಗಾರರ ನಿರಂತರ ಶೋಧನೆಯಿಂದಾಗಿ ಸದ್ಯ ಶವ ದೊರೆತಿದೆ.

ಕಾರವಾರ: ಸಮುದ್ರದಲ್ಲಿ ಏಡಿ ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವನ ಶವ ಇಂದು ಕುಮಟಾ ತಾಲೂಕಿನ ರಾಮನಗಿಂಡಿ ಕಡಲತೀರದ ಬಳಿ ಪತ್ತೆಯಾಗಿದೆ.

Dead person
ಮೃತ ವ್ಯಕ್ತಿ

ಆನಂದ ಗಂಗಾಧರ ಭಂಡಾರಿ (31) ಮೃತಪಟ್ಟ ವ್ಯಕ್ತಿ. ಭಾನುವಾರ ಏಡಿ ಹಿಡಿಯಲು ಹೋಗಿದ್ದ ಈತ, ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದ. ಬಳಿಕ ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದು, ಸಮುದ್ರತೀರದ ಬಳಿ ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ಸಾಕಷ್ಟು ಹುಡುಕಾಟ ನಡೆಸಿದ್ದರು. ಆದರೆ ತಡರಾತ್ರಿವರೆಗೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈ ಕಾರಣದಿಂದ ಶವ ತೇಲಿ ಹೋಗದಂತೆ ಬಿದ್ದ ಜಾಗದ ಸುತ್ತಲೂ ಬಲೆ ಹಾಕಿ ಇಟ್ಟಿದ್ದರು.

ಇಂದು ಸ್ಥಳೀಯ ಮೀನುಗಾರರು ನಿರಂತರ ಶೋಧ ನಡೆಸಿದ ಬಳಿಕ ಶವವನ್ನು ಹೊರತೆಗಿದಿದ್ದಾರೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:Body:ಏಡಿ ಹಿಡಿಯಲು ಹೋದವ್ಯಕ್ತಿ ನೀರುಪಾಲು... ಬಲೆಹಾಕಿ ಶವ ಹೊರತೆಗೆದ ಮೀನುಗಾರರು!

ಕಾರವಾರ: ಸಮುದ್ರದಲ್ಲಿ ಏಡಿ ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವನ ಶವ ಇಂದು ಕುಮಟಾ ತಾಲೂಕಿನ ರಾಮನಗಿಂಡಿ ಕಡಲತೀರದ ಬಳಿ ಪತ್ತೆಯಾಗಿದೆ.
ಆನಂದ ಗಂಗಾಧರ ಭಂಡಾರಿ (೩೧) ಮೃತಪಟ್ಟ ವ್ಯಕ್ತಿ. ಭಾನುವಾರ ಏಡಿ ಹಿಡಿಯಲು ಹೋಗಿದ್ದ ಈತ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದ. ಬಳಿಕ ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದು, ಕಾಣೆಯಾದ ಸಮುದ್ರತೀರದ ಬಳಿ ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ಸಾಕಷ್ಟು ಹುಡುಕಾಟ ನಡೆಸಿದ್ದರು. ಆದರೆ ತಡರಾತ್ರಿವರೆಗೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈ ಕಾರಣದಿಂದ ಶವ ತೇಲಿ ಹೋಗದಂತೆ ಬಿದ್ದ ಜಾಗದಿಂದ ಸುತ್ತಲೂ ಬಲೆ ಹಾಕಿಯೇ ಇಟ್ಟಿದ್ದರು.
ಇಂದು ಸ್ಥಳಿಯ ಮೀನುಗಾರರು ನಿರಂತರ ಶೋಧ ನಡೆಸಿದ ಬಳಿಕ ಶವವನ್ನು ಹೊರತೆಗಿದಿದ್ದಾರೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.