ETV Bharat / state

ಸರ್ಕಾರದಿಂದ ಹೊರಬೀಳದ ಗಣೇಶ ಚತುರ್ಥಿ ಆಚರಣೆ ನಿಯಮ; ಗೊಂದಲದ ಗೂಡಾದ ಹಬ್ಬದ ಸಂಭ್ರಮ!

author img

By

Published : Sep 4, 2021, 12:18 PM IST

govt-delay-in-announcing-guidelines-for-ganesh-festival
ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರದಿಂದ ಬಂದಿಲ್ಲ ಮಾರ್ಗಸೂಚಿ

ಗಣೇಶನ ಪ್ರತಿಷ್ಠಾಪನೆ ಸಂಬಂಧ ಸರ್ಕಾರ ಸೂಕ್ತ ಮಾರ್ಗಸೂಚಿ ಹೊರಡಿಸದೆ ಸಾರ್ವಜನಿಕರು, ಕಲಾವಿದರನ್ನು ಗೊಂದಲಕ್ಕೆ ತಳ್ಳಿದೆ. ಹಬ್ಬದ ಮುಂದಿನ ತಯಾರಿ ಮಾಡಲಾಗದೆ ಮೂರ್ತಿ ತಯಾರಕರಿದ್ದರೆ, ಇತ್ತ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಸಹ ಗೊಂದಲಕ್ಕೆ ಬಿದ್ದಿವೆ.

ಕಾರವಾರ (ಉ.ಕ): ಗಣೇಶ ಚತುರ್ಥಿಗೆ ಇನ್ನೇನು ಒಂದು ವಾರ ಮಾತ್ರ ಬಾಕಿ ಉಳಿದಿದೆ. ಸದ್ಯ ಸಡಗರ ಸಂಭ್ರಮದಿಂದ ಆಚರಿಸುವ ಗಣೇಶನ ಹಬ್ಬಕ್ಕೆ ಕಳೆದ ವರ್ಷದಿಂದ ಕೊರೊನಾ ಬ್ರೇಕ್ ಹಾಕಿದೆ. ಆದರೂ ಸಂಪ್ರದಾಯದಂತೆ ಹಲವು ವರ್ಷಗಳಿಂದ ಆಚರಿಸಿಕೊಂಡು ಬಂದಂತಹ ಗಣೇಶ ಹಬ್ಬದ ಬಗ್ಗೆ ಸರ್ಕಾರ ಸ್ಪಷ್ಟ ಮಾರ್ಗಸೂಚಿ ಹೊರಡಿಸಲು ಮೀನಾಮೇಷ ಎಣಿಸುತ್ತಿರುವುದು ಇದೀಗ ಸಾರ್ವಜನಿಕರಲ್ಲಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.

ಕಳೆದ ವರ್ಷದಿಂದ ಸರ್ಕಾರ ಹೊರಡಿಸುವ ಮಾರ್ಗಸೂಚಿಯಂತೆ ಸರಳವಾಗಿ ಗಣೇಶ ಹಬ್ಬ ಆಚರಣೆ ಮಾಡಲಾಗುತ್ತದೆ. ಆದರೆ ಇದೀಗ ಹಬ್ಬಕ್ಕೆ ಒಂದು ವಾರ ಮಾತ್ರ ಬಾಕಿ ಉಳಿದಿದ್ದು, ಈವರೆಗೂ ಸರ್ಕಾರ ಗಣೇಶ ಚತುರ್ಥಿ ಆಚರಣೆಗೆ ಸ್ಪಷ್ಟ ಆದೇಶ ಹೊರಡಿಸದಿರುವುದು ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ.

ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರದಿಂದ ಬಂದಿಲ್ಲ ಮಾರ್ಗಸೂಚಿ

ಜಿಲ್ಲೆಯಲ್ಲಿ ಬಹುತೇಕರು ಜೇಡಿ ಮಣ್ಣಿನ ಮೂಲಕ ಮೂರ್ನಾಲ್ಕು ತಿಂಗಳುಗಳಿಂದ ಗಣಪತಿಗಳನ್ನು ತಯಾರಿಸಿಟ್ಟಿದ್ದಾರೆ. ಹಬ್ಬ ಆಚರಿಸಲು ಅನುಮತಿ ಬಗೆಗಿನ ಗೊಂದಲದಿಂದಾಗಿ ಮೂರ್ತಿಗಳ ಖರೀದಿಗೆ ಮುಂಗಡ ಹಣ ನೀಡಲು ಜನರು ಮುಂದಾಗುತ್ತಿಲ್ಲ. ಸರ್ಕಾರ ಕೊನೆಗಳಿಗೆಯಲ್ಲಿ ಆಚರಣೆಗೆ ಬ್ರೇಕ್ ಹಾಕಿದರೆ ತಯಾರಕರು ನಷ್ಟ ಅನುಭವಿಸಬೇಕಾಗುತ್ತದೆ.

ಇಷ್ಟಾದರೂ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಹಲವಾರು ವರ್ಷಗಳಿಂದ ಪ್ರತಿಷ್ಠಾಪಿಸುತ್ತಿರುವ ಗಣೇಶ ಮೂರ್ತಿಗಳನ್ನು ಈ ಬಾರಿಯೂ ಪ್ರತಿಷ್ಠಾಪಿಸಲು ಮುಂದಾಗಿದ್ದಾರೆ. ಆದರೆ ಸರ್ಕಾರ ನಿಯಮಗಳನ್ನು ಇನ್ನೂ ಕೂಡ ಸ್ಪಷ್ಟಪಡಿಸದೇ ಇರುವುದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಕೊನೆಗಳಿಗೆಯಲ್ಲಿ ನಿಯಮ ರೂಪಿಸಿ ಗಣೇಶ ಮೂರ್ತಿಗೆ ಅಥವಾ ಅಥವಾ ಎತ್ತರಕ್ಕೆ ನಿಯಮ ತಂದರೆ ದೊಡ್ಡ ಮೂರ್ತಿಗಳ ಏನು ಮಾಡಬೇಕು ಎಂಬುದು ಕಲಾವಿದರ ಪ್ರಶ್ನೆಯಾಗಿದೆ.

ಹಬ್ಬದಾಚರಣೆಗೆ ಸಂಬಂಧಿಸಿದಂತೆ ನಾಳೆ(ಸೆ.5) ರಂದು ಮಾರ್ಗಸೂಚಿಗಳನ್ನು ಹೊರಡಿಸುವುದಾಗಿ ಸರ್ಕಾರ ಹೇಳಿದೆ.

ಇದನ್ನೂ ಓದಿ: ದೇಶದಲ್ಲಿ ಹೊಸದಾಗಿ 42 ಸಾವಿರ COVID Case: ಈವರೆಗೆ ಕೊರೊನಾಗೆ 4.40 ಲಕ್ಷ ಮಂದಿ ಬಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.