ETV Bharat / state

ಭಟ್ಕಳ: ಅಮೆರಿಕ ಪೌರತ್ವ ಪಡೆದು ತಲೆಮರೆಸಿಕೊಂಡ ಆರೋಪಿಯ ಬಂಧನ

author img

By

Published : Mar 11, 2021, 2:55 PM IST

Bhatkal police arrested accused who absconded
ಆರೋಪಿಯನ್ನು ಬಂಧಿಸಿದ ಭಟ್ಕಳ ಪೊಲೀಸರು

ತಲೆಮರೆಸಿಕೊಂಡು ಅಮೆರಿಕದಲ್ಲಿ ನೆಲೆಸಿದ್ದ ಆರೋಪಿಯನ್ನು ಹಲವು ವರ್ಷಗಳ ಬಳಿಕ ಭಟ್ಕಳ ಪೊಲೀಸರು ಬಂಧಿಸಿದ್ದಾರೆ.

ಭಟ್ಕಳ: ಮೂರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದು, ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಭಟ್ಕಳ ಪೊಲೀಸರು ಯಶಸ್ವಿಯಾಗಿದ್ದಾರೆ.

ಇರ್ಷಾದ್ ಅಹಮದ್ ಖಾಜಿಯಾ (51) ಬಂಧಿತ ವ್ಯಕ್ತಿ. ನಗರದ ಬಂದರ್​ ರೋಡ್ ಒಂದನೇ ಕ್ರಾಸ್ ನಿವಾಸಿಯಾಗಿರುವ ಈತ, ಕಳೆದ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ.

ಇದನ್ನೂ ಓದಿ: ಟ್ರ್ಯಾಕ್ಟರ್ ಟ್ರೇಲರ್​, ದ್ವಿಚಕ್ರ ವಾಹನ​ ಕಳ್ಳತನ: ನಾಲ್ವರು ಖದೀಮರ ಬಂಧನ

ಇರ್ಷಾದ್ ಅಮೆರಿಕದ ಪೌರತ್ವ ಪಡೆದು ಅಲ್ಲಿಯೇ ವಾಸವಾಗಿದ್ದ. ಈತನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ಪೊಲೀಸರು, ಕೊನೆಗೂ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.