ETV Bharat / state

ಗೋಕರ್ಣದಲ್ಲಿ ವೇಶ್ಯಾವಾಟಿಕೆ ದಂಧೆ: ನಾಲ್ವರು ಯುವತಿಯರ ರಕ್ಷಣೆ, ಓರ್ವನ ಬಂಧನ

author img

By

Published : Jun 4, 2022, 10:58 PM IST

4-girls-rescued-from-prostitution-in-gokarna
ಗೋಕರ್ಣದಲ್ಲಿ ವೇಶ್ಯಾವಾಟಿಕೆ ದಂಧೆ: ನಾಲ್ವರು ಯುವತಿಯರ ರಕ್ಷಣೆ, ಓರ್ವನ ಬಂಧನ

ವೇಶ್ಯಾವಾಟಿಕೆ ನಡೆಸಲಾಗುತ್ತಿದ್ದ ಪಾರ್ಮ್ ಹೌಸ್ ಮೇಲೆ ದಾಳಿ‌ ನಡೆಸಿದ ಪೊಲೀಸರು ನಾಲ್ವರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

ಕಾರವಾರ(ಉತ್ತರಕನ್ನಡ): ವೇಶ್ಯಾವಾಟಿಕೆ ನಡೆಸಲಾಗುತ್ತಿದ್ದ ಫಾರ್ಮ್ ಹೌಸ್ ಮೇಲೆ ದಾಳಿ‌ ನಡೆಸಿದ ಪೊಲೀಸರು ನಾಲ್ವರು ಯುವತಿಯರನ್ನು ರಕ್ಷಣೆ ಮಾಡಿದ ಘಟನೆ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ ನಡೆದಿದೆ.

ಖಾಸಗಿ ಫಾರ್ಮ್ ಹೌಸ್​​ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಬಗ್ಗೆ ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿ ಮುಂಬೈ, ಕೋಲ್ಕತ್ತಾ ಹಾಗೂ ಬಳ್ಳಾರಿ ಮೂಲದ ನಾಲ್ವರು ಯುವತಿಯರನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಮುರುಡೇಶ್ವರದ ತಿಮ್ಮಪ್ಪ ನಾಯ್ಕ ಎಂಬುವರನ್ನು ಬಂಧಿಸಿದ್ದಾರೆ.

ಪ್ರವಾಸಿ ಮಂದಿರದ ಪಕ್ಕದಲ್ಲೇ ಇರುವ ಫಾರ್ಮ್ ಹೌಸ್​​ನಲ್ಲಿ ಕಳೆದ ಹಲವು ದಿನಗಳಿಂದ ದಂಧೆ ನಡೆಯುತ್ತಿತ್ತು ಎನ್ನಲಾಗ್ತಿದೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿಯಲ್ಲಿ ಸಿಪಿಐ ವಸಂತ ಆಚಾರಿ, ಪಿಎಸ್​ಐ ರವೀಂದ್ರ ಬಿರಾದಾರ, ಸುಧಾ ಅಘನಾಶಿನಿ ಹಾಗೂ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.

ಇದನ್ನೂ ಓದಿ: ವೇಗದಲ್ಲಿ ಬಂದು ಪಲ್ಟಿಯಾಗಿ ಟ್ರಾನ್ಸ್‌ಫಾರ್ಮರ್​ ಮೇಲೆ ಹತ್ತಿದ ಬೈಕ್.. ಸವಾರ ಪಾರು- ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.