ETV Bharat / state

ಸ್ಮಾರ್ಟ್ ಸಿಟಿ ಕಾಮಗಾರಿ ನಿಭಾಯಿಸದ ಗುತ್ತಿಗೆದಾರರಿಗೆ ಬರೋಬ್ಬರಿ ₹65 ಲಕ್ಷ ದಂಡ..

author img

By

Published : Aug 19, 2019, 9:32 PM IST

ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್

ಸಾರ್ವಜನಿಕರಿಗೆ ತೊಂದರೆ ಮತ್ತು ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದನ್ನು ಗಮನಿಸಿ ಗುತ್ತಿಗೆದಾರರಿಗೆ ಮತ್ತು ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್‌ಗೆ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕಾರ್ಯನಿರ್ವಹಣಾಕಾರಿಗಳು ಬರೋಬ್ಬರಿ 65 ಲಕ್ಷ ರೂ.ದಂಡ ವಿಧಿಸಿದ್ದಾರೆ.

ತುಮಕೂರು: ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದಲ್ಲದೆ ಸರಿಯಾಗಿ ನಿಭಾಯಿಸದೆ ಇರುವ ಕಾರಣಕ್ಕಾಗಿ ಹಾಗೂ ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದನ್ನು ಗಮನಿಸಿ ಗುತ್ತಿಗೆದಾರರಿಗೆ ಮತ್ತು ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್‌ರವರಿಗೆ ಬರೋಬ್ಬರಿ 65 ಲಕ್ಷ ರೂ. ದಂಡ ವಿಧಿಸಲಾಗಿದೆ.

ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕಾರ್ಯನಿರ್ವಹಣಾಕಾರಿಗಳು, ಮುಂದಿನ ದಿನಗಳಲ್ಲಿ ಕಾಮಗಾರಿಗಳು ನಡೆಯುವ ಸ್ಥಳದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರವಹಿಸಲು ಆದೇಶಿಸಿದ್ದಾರೆ.

ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುತ್ತಿರುವ ಶ್ರೀಶ್ರೀನಿವಾಸ ಕನೆಕ್ಷನ್ ಪ್ರೈವೇಟ್ ಲಿಮಿಟೆಡ್‌ಗೆ 77,211 ರೂ. ತುಮಕೂರು ಸ್ಮಾರ್ಟ್ ಸಿಟಿ ಎಬಿಡಿ ವ್ಯಾಪ್ತಿಯ ನಾಲ್ಕು ಸ್ಮಾರ್ಟ್ ರೋಡ್‌ಗಳ ಅಭಿವೃದ್ಧಿ ಮತ್ತು ಅನುಷ್ಠಾನದೊಂದಿಗೆ ಐದು ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡುತ್ತಿರುವ ಬಿಎಂ ರಂಗೇಗೌಡ ಅವರಿಗೆ 5,63,928 ರೂ. ದಂಡ ವಿಧಿಸಲಾಗಿದೆ.

ಸ್ಮಾರ್ಟ್ ಸಿಟಿ ಕಾಮಗಾರಿ ನಿಭಾಯಿಸದ ಗುತ್ತಿಗೆದಾರರಿಗೆ ಬರೋಬ್ಬರಿ ₹65 ಲಕ್ಷ ದಂಡ..

ಸ್ಮಾರ್ಟ್ ರೋಡ್ ಪ್ಯಾಕೇಜ್ 2 ಅಭಿವೃದ್ಧಿ ಮತ್ತು ಐದು ವರ್ಷಗಳ ಕಾರ್ಯಾಚರಣೆ ನಿರ್ವಹಣೆ ಮಾಡುತ್ತಿರುವ ಸುಧಾಕರ್ ಪೆರಿಟಾಲ, ಸಿದ್ಧಾರ್ಥ ಸಿವಿಲ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್‌ಗೆ 6,88,000 ರೂ. ಸ್ಮಾರ್ಟ್ ರೋಡ್ ಪ್ಯಾಕೇಜ್ 3ಎ ಅಭಿವೃದ್ಧಿ ಮಾಡುತ್ತಿರುವ ಸುಧಾಕರ ಪೆರಿಟಾಲ ಮತ್ತು ಸಿದ್ಧಾರ್ಥ ಸಿವಿಲ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್‌ಗೆ 4,44,448 ರೂ. ಗಳನ್ನು ದಂಡ ವಿಧಿಸಲಾಗಿದೆ.

ಸ್ಮಾರ್ಟ್ ರೋಡ್ ಪ್ಯಾಕೇಜ್ 3ಬಿ ಅಭಿವೃದ್ಧಿ ಮಾಡುತ್ತಿರುವ ಶ್ರೀನಿವಾಸ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್‌ಗೆ 10,55,691 ರೂ. ಸ್ಮಾರ್ಟ್ ರೋಡ್ ಪ್ಯಾಕೇಜ್ 3ಸಿ ಅಭಿವೃದ್ಧಿ ಮಾಡುತ್ತಿರುವ ಯುಎಸ್ಕೆ ಕನಕ್ಷನ್ ಕಂಪನಿ ಗೆ 10,20,351 ರೂ. ಗಳ ದಂಡ ವಿಧಿಸಿ ಆದೇಶಿಸಿದ್ದಾರೆ.

ಎಬಿಡಿ ಪ್ರದೇಶದಲ್ಲಿ under ground utility duct carriage way ಗಳೊಂದಿಗೆ road shoulder ಅಭಿವೃದ್ಧಿ ಮಾಡುತ್ತಿರುವ ಆರ್​ಎಮ್​ಎಲ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿಗೆ ಬರೋಬ್ಬರಿ 22,91,368 ರೂ. ಐಪಿಇ ಗ್ಲೋಬೆಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ , ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ಸ್‌ಗೆ 3,66,556 ರೂ. ಗಳನ್ನು ದಂಡ ವಿಧಿಸಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರು ಆದೇಶಿಸಿದ್ದಾರೆ.

Intro:ಸ್ಮಾರ್ಟ್ ಸಿಟಿ ಕಾಮಗಾರಿ ನಿಭಾಯಿಸದ ಗುತ್ತಿಗೆದಾರರಿಗೆ ಬರೋಬ್ಬರಿ 65 ಲಕ್ಷ ದಂಡ......

ತುಮಕೂರು
ತುಮಕೂರು ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದಲ್ಲದೆ ಸರಿಯಾಗಿ ನಿಭಾಯಿಸದೆ ಇರುವ ಕಾರಣಕ್ಕಾಗಿ ಹಾಗೂ ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದನ್ನು ಗಮನಿಸಿ ಗುತ್ತಿಗೆದಾರರಿಗೆ ಮತ್ತು ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ರವರಿಗೆ ಬರೋಬ್ಬರಿ 65 ಲಕ್ಷ ರೂ ದಂಡ ವಿಧಿಸಲಾಗಿದೆ.
ಈ ಕ್ರಮವನ್ನು ಕೈಗೊಂಡಿರುವ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕಾರ್ಯನಿರ್ವಹಣಾಕಾರಿ, ಮುಂದಿನ ದಿನಗಳಲ್ಲಿ ಕಾಮಗಾರಿಗಳು ನಡೆಯುವ ಸ್ಥಳದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಲು ಆದೇಶಿಸಿದ್ದಾರೆ.

ತುಮಕೂರು ನಗರದ ಕೆಆರ್ ಬಡಾವಣೆಯ ಬಸ್ ನಿಲ್ದಾಣದಿಂದ ಗ್ರಾಮಾಂತರ ಪೊಲೀಸ್ ಠಾಣೆಯ ವರೆಗಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುತ್ತಿರುವ ಶ್ರೀಶ್ರೀನಿವಾಸ ಕನಕ್ಷನ್ ಪ್ರೈವೇಟ್ ಲಿಮಿಟೆಡ್ ಗೆ 77,211 ರೂ., ತುಮಕೂರು ಸ್ಮಾರ್ಟ್ ಸಿಟಿ ಎಬಿಡಿ ವ್ಯಾಪ್ತಿಯ ನಾಲ್ಕು ಸ್ಮಾರ್ಟ್ ರೋಡ್ ಗಳ ಅಭಿವೃದ್ಧಿ ಮತ್ತು ಅನುಷ್ಠಾನದೊಂದಿಗೆ ಐದು ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡುತ್ತಿರುವ ಬಿಎಂ ರಂಗೇಗೌಡ ಅವರಿಗೆ5,63,928 ರೂ. ದಂಡ ವಿಧಿಸಲಾಗಿದೆ.

ಸ್ಮಾರ್ಟ್ ರೋಡ್ ಪ್ಯಾಕೇಜ್ 2 ಅಭಿವೃದ್ಧಿ ಮತ್ತು ಐದು ವರ್ಷಗಳ ಕಾರ್ಯಾಚರಣೆ ನಿರ್ವಹಣೆ ಮಾಡುತ್ತಿರುವ ಸುಧಾಕರ್ ಪೆರಿಟಾಲ, ಸಿದ್ಧಾರ್ಥ ಸಿವಿಲ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಅವರಿಗೆ 6,88,000 ರೂ, ಸ್ಮಾರ್ಟ್ ರೋಡ್ ಪ್ಯಾಕೇಜ್ 3ಎ ಅಭಿವೃದ್ಧಿ ಮಾಡುತ್ತಿರುವ ಸುಧಾಕರ ಪೆರಿಟಾಲ ಸಿದ್ಧಾರ್ಥ ಸಿವಿಲ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಅವರಿಗೆ 4,44,448 ರೂ. ಗಳನ್ನು ದಂಡ ವಿಧಿಸಲಾಗಿದೆ.

ಸ್ಮಾರ್ಟ್ ರೋಡ್ ಪ್ಯಾಕೇಜ್ 3ಬಿ ಅಭಿವೃದ್ಧಿ ಮಾಡುತ್ತಿರುವ ಶ್ರೀನಿವಾಸ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಗೆ 10,55,691 ರೂ, ಸ್ಮಾರ್ಟ್ ರೋಡ್ ಪ್ಯಾಕೇಜ್ 3ಸಿ ಅಭಿವೃದ್ಧಿ ಮಾಡುತ್ತಿರುವ ಯು ಎಸ್ಕೆ ಕನಕ್ಷನ್ ಕಂಪನಿ ಗೆ 10,20,351 ರೂ. ಗಳ ದಂಡ ವಿಧಿಸಿ ಆದೇಶಿಸಿದ್ದಾರೆ.

ಎಬಿಡಿ ಪ್ರದೇಶದಲ್ಲಿ under ground utility duct carriage way ಗಳೊಂದಿಗೆ road shoulder ಅಭಿವೃದ್ಧಿ ಮಾಡುತ್ತಿರುವ ಆರ್ಎಂಎಲ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿಗೆ ಬರೋಬ್ಬರಿ 22,91,368 ರೂ. ಗಳನ್ನು ದಂಡ ವಿಧಿಸಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರು ಆದೇಶಿಸಿದ್ದಾರೆ.

ಐಪಿಇ ಗ್ಲೋಬೆಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ , ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ಸ್ ಗೆ 3,66,556 ರೂ. ಗಳನ್ನು ದಂಡ ವಿಧಿಸಲಾಗಿದೆ.






Body:ತುಮಕೂರು


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.